image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಚ್ ಜೂನಿಯರ್ ಓಪನ್ ಸ್ಕ್ವಾಷ್: ಭಾರತದ ಅಮರ್ಯಾ ಬಜಾಜ್‌ಗೆ ಐತಿಹಾಸಿಕ ಪ್ರಶಸ್ತಿ

ಡಚ್ ಜೂನಿಯರ್ ಓಪನ್ ಸ್ಕ್ವಾಷ್: ಭಾರತದ ಅಮರ್ಯಾ ಬಜಾಜ್‌ಗೆ ಐತಿಹಾಸಿಕ ಪ್ರಶಸ್ತಿ

ಹೈದರಾಬಾದ್ : ಭಾರತದ ಉದಯೋನ್ಮುಖ ಸ್ಕ್ವಾಷ್ ಆಟಗಾರ ಅಮರ್ಯಾ ಬಜಾಜ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಪ್ರತಿಷ್ಠಿತ ಡಚ್ ಜೂನಿಯರ್ ಓಪನ್ ಅಂಡರ್-13 ಬಾಲಕರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅತ್ಯಂತ ರೋಮಾಂಚನಕಾರಿಯಾಗಿ ನಡೆದ ಫೈನಲ್ ಪಂದ್ಯದಲ್ಲಿ ಅಮರ್ಯಾ ಇಂಗ್ಲೆಂಡ್‌ನ ಅಗ್ರ ಶ್ರೇಯಾಂಕಿತ ಆಟಗಾರ ಡೇನಿಯಲ್ ಸ್ಟೀವನ್ಸನ್ ವಿರುದ್ಧ 3-1 ಅಂತರದ ಭರ್ಜರಿ ಗೆಲುವು ಸಾಧಿಸಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಈ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮುನ್ನ 13 ವರ್ಷದ ಅಮರ್ಯಾ ವಿಶ್ವದ ಪ್ರಮುಖ ಸ್ಕ್ವಾಷ್ ರಾಷ್ಟ್ರಗಳ ಬಲಿಷ್ಠ ಆಟಗಾರರಿಗೆ ಆಘಾತ ನೀಡಿದ್ದರು. ಮೊದಲ ಸುತ್ತಿನಲ್ಲಿ ಈಜಿಪ್ಟ್ ಆಟಗಾರನ ವಿರುದ್ಧ 3-0 ಅಂತರದ ಸುಲಭ ಗೆಲುವು ದಾಖಲಿಸಿದ್ದ ಅವರು, ಎರಡನೇ ಸುತ್ತಿನಲ್ಲಿ ಇಂಗ್ಲೆಂಡ್‌ನ ಅರ್ಲೊ ಸ್ಮಿತ್ ಅವರಿಗೆ 3-0 ಇಂದ ಸೋಲುಣಿಸಿದರು. ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸಿಂಗಾಪುರದ ನಂ.1 ಶ್ರೇಯಾಂಕಿತ ಆಟಗಾರ ಕೆಲ್ಲೆನ್ ಲೊ ಅವರನ್ನು 3-0 ಇಂದ ಹಾಗೂ ಕ್ವಾರ್ಟರ್ ಫೈನಲ್‌ನಲ್ಲಿ ಈಜಿಪ್ಟ್‌ನ ಬದ್ರ್ ಹಸನ್ ಅವರನ್ನು 3-1 ಅಂತರದಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಅತ್ಯಂತ ಕಠಿಣವಾಗಿದ್ದ ಸೆಮಿಫೈನಲ್‌ನಲ್ಲಿ ಹಂಗೇರಿಯ ಅಲೆಕ್ಸ್ ಕೊಸ್ಟ್ಜು ವಿರುದ್ಧ ತೀವ್ರ ಪೈಪೋಟಿ ನಡೆಸಿ ಜಯಭೇರಿ ಬಾರಿಸಿ ಫೈನಲ್ ತಲುಪಿದ್ದರು.

ಇತ್ತೀಚೆಗಷ್ಟೇ ಚೀನಾದಲ್ಲಿ ನಡೆದಿದ್ದ 2026ರ ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅಮರ್ಯಾ, ಇದೀಗ ಕೆಲವೇ ವಾರಗಳಲ್ಲಿ ಯುರೋಪಿಯನ್ ಪ್ರಮುಖ ಪ್ರಶಸ್ತಿಯನ್ನು ಗೆದ್ದು ಅಂತರರಾಷ್ಟ್ರೀಯ ಜೂನಿಯರ್ ಸ್ಕ್ವಾಷ್ ಸರ್ಕ್ಯೂಟ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. ಕೇವಲ 13 ವರ್ಷ ವಯಸ್ಸಿನಲ್ಲೇ ಎರಡು ಏಷ್ಯನ್ ಜೂನಿಯರ್ ಪದಕಗಳು ಹಾಗೂ ಡಚ್ ಜೂನಿಯರ್ ಓಪನ್ ಪ್ರಶಸ್ತಿ ಜಯಿಸಿರುವ ಅಮರ್ಯಾ ಬಜಾಜ್, ಅಂತರರಾಷ್ಟ್ರೀಯ ವೇದಿಕೆಯಲ್ಲಿ ವಿಶ್ವದ ಅತ್ಯುತ್ತಮ ಜೂನಿಯರ್ ಆಟಗಾರರನ್ನು ಸವಾಲು ಮಾಡುವ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದು, ಭಾರತೀಯ ಸ್ಕ್ವಾಷ್‌ನ ಹೊಸ ಭರವಸೆಯಾಗಿ ಮೂಡಿಬಂದಿದ್ದಾರೆ.

Category
ಕರಾವಳಿ ತರಂಗಿಣಿ