ಪ್ಯಾರಿಸ್ : ಫ್ರೆಂಚ್ ಓಪನ್ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ರಷ್ಯಾದ ಯುವ ಸೆನ್ಸೇಷನ್ ಮಿರ್ರಾ ಆಂಡ್ರೀವಾ ತಮ್ಮ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಎಂಟನೇ ಶ್ರೇಯಾಂಕದ ಆಂಡ್ರೀವಾ ಶನಿವಾರ ನಡೆದ ಫೈನಲ್‌ನಲ್ಲಿ 6-3, 6-2 ಅಂತರದೊಂದಿಗೆ 114ನೇ ಶ್ರೇಯಾಂಕದ ಆಟಗಾರ್ತಿ ಮಜಾ ಚ್ವಾಲಿನ್ಸ್ಕಾರನ್ನು ಮಣಿಸಿದ್ದಾರೆ. ಈ ಗೆಲುವಿನೊಂದಿಗೆ, ಮೋನಿಕಾ ಸೆಲೆಸ್ (1992) ನಂತರ ಫ್ರೆಂಚ್ ಓಪನ್ ಗೆದ್ದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಆಂಡ್ರೀವಾ ಪಾತ್ರರಾದರು. ಪ್ಯಾರಿಸ್ ಓಪರ್ನಲ್ಲಿ ಹದಿಹರೆಯದ ಆಟಗಾರ್ತಿಯೊಬ್ಬರು ಇಂತಹ ಸಾಧನೆ ಮಾಡಿ 34 ವರ್ಷಗಳಾಗಿವೆ. ಈ ಸಾಧನೆಯು ಆಂಡ್ರೀವಾ ಅವರನ್ನು ಮಹಿಳಾ ಟೆನಿಸ್‌ನ ಹೊಸ ಸೂಪರ್‌ಸ್ಟಾರ್ ಆಗಿ ಮಾಡಿದೆ.
ಪಂದ್ಯ ಆರಂಭದಲ್ಲಿ ಮೊದಲ ಕೆಲವು ಸುತ್ತುಗಳಲ್ಲಿ ಪಂದ್ಯವು ಸಮನಾಗಿತ್ತು, ಮಜಾ ಚ್ವಾಲಿನ್ಸ್ಕಾ 3-2 ಮುನ್ನಡೆ ಸಾಧಿಸಿದರು. ಆದರೆ ಅದರ ನಂತರ, ಮೀರಾ ಆಂಡ್ರೀವಾ ಬಲಿಷ್ಠವಾಗಿ ಕಮ್ಬ್ಯಾಕ್ ಮಾಡಿ ಪ್ರಾಬಲ್ಯ ಸಾಧಿಸಿದರು. ರಷ್ಯಾದ ಆಟಗಾರ್ತಿ, ತನ್ನ ಆಕ್ರಮಣಕಾರಿ ಆಟ ಮತ್ತು ನಿಖರವಾದ ಹೊಡೆತಗಳ ಮೂಲಕ, ಸತತ ಒಂಬತ್ತು ಪಂದ್ಯಗಳನ್ನು ಗೆದ್ದರು. ಮಜಾ ಚ್ವಾಲಿನ್ಸ್ಕಾ ಆಂಡ್ರೀವಾ ಅವರ ದಾಳಿಗೆ ಒಳಗಾಗಿ ಕಮ್ಬ್ಯಾಕ್ ಮಾಡಲು ಸಾಧ್ಯವಾಗಲೇ ಇಲ್ಲ. ಈ ಪಂದ್ಯದಲ್ಲಿ ಮೀರಾ ಆಂಡ್ರೀವಾ 25 ಬಾರಿ ಎದುರಾಳಿ ವಿರುದ್ಧ ಗೆದ್ದರೇ ಚ್ವಾಲಿನ್ಸ್ಕಾ 10 ಗೆಲುವುಗಳನ್ನು ಮಾತ್ರ ಸಾಧಿಸಲು ಸಾಧ್ಯವಾಯ್ತು. ಆಂಡ್ರೀವಾ ಮ್ಯಾಚ್ ಪಾಯಿಂಟ್‌ನಲ್ಲಿ ಅದ್ಭುತ ಬ್ಯಾಕ್‌ಹ್ಯಾಂಡ್ ಶಾಟ್ ಮೂಲಕ ಸೆಟ್ ಗೆದ್ದು ಮಂಡಿಯೂರಿ ಸಂಭ್ರಮಿಸಿದರು. ಈ ಕ್ಷಣ ಅವರ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿತ್ತು.