ಪ್ಯಾರಿಸ್ : ರಷ್ಯಾದ ಉದಯೋನ್ಮುಖ ಟೆನಿಸ್ ಆಟಗಾರ್ತಿ ಮಿರಾ ಆಂಡ್ರೀವಾ ಅವರು ಫ್ರೆಂಚ್ ಓಪ್ನ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಆಂಡ್ರೀವಾ ಅವರು ರೋಮೇನಿಯಾದ ಅನುಭವಿ ಆಟಗಾರ್ತಿ ಸೊರಾನಾ ಸಿಸ್ಟಿ ಅವರನ್ನು ಕೇವಲ ಒಂದು ಗಂಟೆಯೊಳಗೆ ನಡೆದ ಹೋರಾಟದಲ್ಲಿ 6-0, 6-3 ನೇರ ಸೆಟ್‌ಗಳ ಅಂತರದಿಂದ ಸುಲಭವಾಗಿ ಮಣಿಸಿದರು. ಈ ಗೆಲುವಿನೊಂದಿಗೆ ಅವರು ಫ್ರೆಂಚ್ ಓಪನ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಅಂತಿಮ-4ರ ಸುತ್ತನ್ನು ಪ್ರವೇಶಿಸಿದಂತಾಗಿದೆ.
ಈ ಸೋಲಿನ ಮೂಲಕ 36 ವರ್ಷ ಪ್ರಾಯದ ಸೊರಾನಾ ಅವರ ಅಮೋಘ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಂತಾಗಿದೆ. ಉತ್ತಮ ಫಾರ್ಮ್‌ನಲ್ಲಿದ್ದ ಸೊರಾನಾ ಅವರು ಈ ವರ್ಷಾಂತ್ಯಕ್ಕೆ ಟೆನಿಸ್ ಲೋಕಕ್ಕೆ ವಿದಾಯ ಹೇಳುವುದಾಗಿ ಈಗಾಗಲೇ ಪ್ರಕಟಿಸಿದ್ದಾರೆ. ಅವರು 2009ರ ನಂತರ ಮೊದಲ ಬಾರಿಗೆ ಪ್ಯಾರಿಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿ ಗಮನ ಸೆಳೆದಿದ್ದರು. ಮುಂದಿನ ಸೆಮಿಫೈನಲ್ ಸುತ್ತಿನಲ್ಲಿ ಆಂಡ್ರೀವಾ ಅವರು ಉಕ್ರೇನ್‌ನ ಆಟಗಾರ್ತಿಯರಾದ ಎಲಿನಾ ಸ್ವಿಟೋಲಿನಾ ಅಥವಾ ಮಾರ್ಟಾ ಕೋಸ್ಟ್ಯುಕ್ ಅವರಲ್ಲಿ ಒಬ್ಬರನ್ನು ಎದುರಿಸಲಿದ್ದಾರೆ.