image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾರ್ವೆ ಚೆಸ್ ಟೂರ್ನಿ: ಭಾರತದ ಗುಕೇಶ್, ಪ್ರಜ್ಞಾನಂದ ಮತ್ತು ದಿವ್ಯಾ ದೇಶ್‌ಮುಖ್‌ಗೆ ಜಯ

ನಾರ್ವೆ ಚೆಸ್ ಟೂರ್ನಿ: ಭಾರತದ ಗುಕೇಶ್, ಪ್ರಜ್ಞಾನಂದ ಮತ್ತು ದಿವ್ಯಾ ದೇಶ್‌ಮುಖ್‌ಗೆ ಜಯ

ಓಸ್ಲೋ : ವಿಶ್ವ ಚಾಂಪಿಯನ್ ಡಿ. ಗುಕೇಶ್ ಅವರು ನಾರ್ವೆ ಚೆಸ್-2026ರ ಕ್ಲಾಸಿಕಲ್ ಗೇಮ್‌ನ ಮೊದಲ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೇಮರ್ ವಿರುದ್ಧ ಗೆಲುವು ಸಾಧಿಸಿ ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ. ಗುಕೇಶ್ ಅವರ ಸಹ ಆಟಗಾರರಾದ ಆರ್. ಪ್ರಜ್ಞಾನಂದ ಕೂಡ ಅಮೆರಿಕದ ವೆಸ್ಲೆ ಸೋ ವಿರುದ್ಧ ಗೆಲುವಿನ ಆರಂಭ ಪಡೆದಿದ್ದಾರೆ.

ಮತ್ತೊಂದೆಡೆ, ಫ್ರಾನ್ಸ್ ಗ್ರಾಂಡ್‌ಮಾಸ್ಟರ್ ಅಲಿರೇಜಾ ಫಿರೌಜ್ಯಾ ಅವರು ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಅಚ್ಚರಿಯ ಗೆಲುವು ದಾಖಲಿಸಿದರು. ಕಾರ್ಲ್‌ಸನ್ ಪಂದ್ಯದ ಹೆಚ್ಚಿನ ಅವಧಿಯಲ್ಲಿ ಮೇಲುಗೈ ಸಾಧಿಸಿದ್ದರೂ, ಪ್ರಮುಖ ಸಂದರ್ಭದಲ್ಲಿ ತಪ್ಪು ಎಸಗಿ ಎದುರಾಳಿಗೆ ಅವಕಾಶ ಮಾಡಿಕೊಟ್ಟರು. ಇನ್ನು ಮಹಿಳೆಯರ ಸ್ಪರ್ಧೆಯಲ್ಲಿ ಭಾರತೀಯ ಗ್ರಾಂಡ್‌ಮಾಸ್ಟರ್ ದಿವ್ಯಾ ದೇಶ್‌ಮುಖ್ ಅವರು ಚೀನಾದ ವಿಶ್ವ ಚಾಂಪಿಯನ್ ಜು ವೆನ್ಜುನ್ ಅವರನ್ನು ಮಣಿಸಿ ಶಾಕ್ ನೀಡಿದ್ದಾರೆ.

Category
ಕರಾವಳಿ ತರಂಗಿಣಿ