image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ಮಹಿಳಾ ತಂಡಕ್ಕೆ ಸತತ 21ನೇ ಬಾರಿ ಮಂಗಳೂರು ವಿವಿ ತ್ರೋಬಾಲ್ ಚಾಂಪಿಯನ್ ಪಟ್ಟ

ಆಳ್ವಾಸ್ ಮಹಿಳಾ ತಂಡಕ್ಕೆ ಸತತ 21ನೇ ಬಾರಿ ಮಂಗಳೂರು ವಿವಿ ತ್ರೋಬಾಲ್ ಚಾಂಪಿಯನ್ ಪಟ್ಟ

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದ ಅಂತರ ಕಾಲೇಜು ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರು ಸತತ 21ನೇ ಬಾರಿಗೆ ಅದ್ಭುತ ಪ್ರದರ್ಶನದೊಂದಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ, ಪ್ರತಿಷ್ಠಿತ ಪೂರ್ಣಪ್ರಜ್ಞಾ ರೋಲಿಂಗ್ ಟ್ರೋಪಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

​ಈ ಪ್ರತಿಷ್ಠಿತ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡವು ಮಡಂತ್ಯಾರ್‌ನ ಸೇಕ್ರೆಡ್ ಹಾರ್ಟ್ ಕಾಲೇಜು ತಂಡದ ವಿರುದ್ಧ 25-10 ಮತ್ತು 25-12 ಅಂಕಗಳ ನೇರ ಸೆಟ್‌ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಬಳಿಕ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜು ತಂಡವನ್ನು 25-18 ಮತ್ತು 25-12 ಅಂಕಗಳ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.

​ಬಳಿಕ ನಡೆದ ಅತ್ಯಂತ ಕುತೂಹಲಕಾರಿ ಫೈನಲ್ ಹಣಾಹಣಿಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರು ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ತಂಡದ ಸವಾಲನ್ನು 25-18 ಮತ್ತು 25-16 ಅಂಕಗಳ ನೇರ ಸೆಟ್‌ಗಳಿಂದ ಅತ್ಯಂತ ಸುಲಭವಾಗಿ ಮೆಟ್ಟಿ ನಿಲ್ಲುವ ಮೂಲಕ ಮತ್ತೊಮ್ಮೆ ಐತಿಹಾಸಿಕ ಚಾಂಪಿಯನ್‌ಶಿಫ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಈ ಮಹೋನ್ನತ ಸಾಧನೆ ಮಾಡಿದ ವಿಜೇತ ಆಳ್ವಾಸ್ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಅವರು ಪ್ರೀತಿಪೂರ್ವಕವಾಗಿ ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ