ಈಜಿಪ್ಟ್ : ಕಿರಿಯರ ಶೂಟಿಂಗ್ ವಿಶ್ವಕಪ್‌ನ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ವಂಶಿಕಾ ಚೌಧರಿ ಮತ್ತು ಚಿರಾಗ್ ಶರ್ಮ ಚಿನ್ನದ ಪದಕ ಜಯಿಸಿದರು. ಇದರೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 5ಕ್ಕೆ ಏರಿದೆ. ವಂಶಿಕಾ-ಚಿರಾಗ್ 484.3 ಅಂಕಗಳನ್ನು ಗಳಿಸಿ ಚಿನ್ನ ಗೆದ್ದರೆ, ಇದೇ ವಿಭಾಗದ ಮತ್ತೊಂದು ಭಾರತೀಯ ಜೋಡಿಯಾದ ಮೋಹಿನಿ ಸಿಂಗ್-ಹಿಮಾಂಶು ರಾಣಾ 407.4 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ಗೆದ್ದರು. 5 ಚಿನ್ನ, 5 ಬೆಳ್ಳಿ ಮತ್ತು 4 ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.