image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ವಿವಿ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಕಾಲೇಜಿಗೆ ಸತತ 22ನೇ ಬಾರಿ ಅವಳಿ ಪ್ರಶಸ್ತಿ ವೈಭವ

ಮಂಗಳೂರು ವಿವಿ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಕಾಲೇಜಿಗೆ ಸತತ 22ನೇ ಬಾರಿ ಅವಳಿ ಪ್ರಶಸ್ತಿ ವೈಭವ

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಂಗಳೂರು ವಿವಿ ಮಟ್ಟದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ಐತಿಹಾಸಿಕ ಸಾಧನೆ ಮಾಡಿದೆ. ಕ್ರೀಡಾ ಕ್ಷೇತ್ರದಲ್ಲಿ ತನ್ನ ಪಾರಮ್ಯವನ್ನು ಮುಂದುವರಿಸಿರುವ ಆಳ್ವಾಸ್ ಸಂಸ್ಥೆಯು ಸತತ 22ನೇ ಬಾರಿಗೆ ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ 'ಅವಳಿ ಪ್ರಶಸ್ತಿ'ಯನ್ನು ಮುಡಿಗೇರಿಸಿಕೊಂಡು ದಾಖಲೆ ಬರೆದಿದೆ.

​ಪುರುಷರ ವಿಭಾಗದ ಅತ್ಯಂತ ಕುತೂಹಲಕಾರಿ ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ತಂಡವನ್ನು ಮಣಿಸಿ, 'ಶ್ರೀ ಎಂ.ಕೆ ಅನಂತರಾಜ್ ಮೆಮೋರಿಯಲ್ ರೋಲಿಂಗ್ ಟ್ರೋಫಿ'ಯನ್ನು ತನ್ನದಾಗಿಸಿಕೊಂಡಿತು. ಅದೇ ರೀತಿ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಕಟೀಲಿನ ಎಸ್.ವಿ.ಟಿ ಕಾಲೇಜು ತಂಡದ ವಿರುದ್ಧ ಭರ್ಜರಿ ಜಯ ದಾಖಲಿಸಿದ ಆಳ್ವಾಸ್ ಮಹಿಳಾ ತಂಡವು 'ಫೇಬಿಯನ್ ಬಿ ಎನ್ ಕುಲೊಸೊ ಮೆಮೋರಿಯಲ್ ರೋಲಿಂಗ್ ಟ್ರೋಫಿ'ಯನ್ನು ಎತ್ತಿ ಹಿಡಿಯಿತು.

​ವೈಯಕ್ತಿಕ ಸಾಧನೆಗಳಲ್ಲೂ ಆಳ್ವಾಸ್ ಕ್ರೀಡಾಪಟುಗಳು ಮಿಂಚಿದ್ದು, ಪುರುಷರ ವಿಭಾಗದಲ್ಲಿ ನಂದ ಕುಮಾರ್ 'ಬೆಸ್ಟ್ ಆಲ್ ರೌಂಡರ್' ಪ್ರಶಸ್ತಿಗೆ ಭಾಜನರಾದರೆ, ಆಕಾಶ್ 'ಬೆಸ್ಟ್ ರಿಸಿವರ್' ಪ್ರಶಸ್ತಿ ಪಡೆದರು. ಮಹಿಳೆಯರ ವಿಭಾಗದಲ್ಲಿ ತನುಶ್ರೀ 'ಬೆಸ್ಟ್ ಆಲ್ ರೌಂಡರ್' ಹಾಗೂ ಗೀತಾ 'ಬೆಸ್ಟ್ ರಿಸಿವರ್' ಪ್ರಶಸ್ತಿಯನ್ನು ಹಂಚಿಕೊಂಡರು. ಚಾಂಪಿಯನ್ ಪಟ್ಟ ಅಲಂಕರಿಸಿದ ಕ್ರೀಡಾಪಟುಗಳ ಅಮೋಘ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅವರು ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Category
ಕರಾವಳಿ ತರಂಗಿಣಿ