image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವೆಸ್ಟ್ ಇಂಡೀಸ್‌ನ ಸರ್ ವಿವ್ ರಿಚರ್ಡ್ಸ್ ಮೈದಾನದ ಪಿಚ್ ಅಪಾಯಕಾರಿ : ರದ್ದಾದ ಪಂದ್ಯ

ವೆಸ್ಟ್ ಇಂಡೀಸ್‌ನ ಸರ್ ವಿವ್ ರಿಚರ್ಡ್ಸ್ ಮೈದಾನದ ಪಿಚ್ ಅಪಾಯಕಾರಿ : ರದ್ದಾದ ಪಂದ್ಯ

ವೆಸ್ಟ್ ಇಂಡೀಸ್ : ವೆಸ್ಟ್ ಇಂಡೀಸ್‌ನ ಸರ್ ವಿವ್ ರಿಚರ್ಡ್ಸ್ ಮೈದಾನದಲ್ಲಿ ನಡೆಯುತ್ತಿದ್ದ ವೆಸ್ಟ್​ ಇಂಡೀಸ್ ಚಾಂಪಿಯನ್​ಶಿಪ್ ಪಂದ್ಯವನ್ನು ಅಪಾಯಕಾರಿ ಪಿಚ್ ಕಾರಣದಿಂದ ರದ್ದು ಮಾಡಲಾಗಿದೆ. ವೆಸ್ಟ್ ಇಂಡೀಸ್‌ನ ಹಿರಿಯ ವೇಗಿ ಜೇಡನ್ ಸೀಲ್ಸ್ ಎಸೆದ ಒಂದು ಬಾಲ್ ಪಿಚ್​​​ ಮೇಲೆ ಬಿದ್ದು ಭಾರೀ ಮಟ್ಟದಲ್ಲಿ ಬೌನ್ಸ್ ಆಗಿ ಬ್ಯಾಟ್ಸಮನ್ ಹೆಲ್ಮೆಟ್​​ಗೆ ಹೊಡೆದಿದೆ. ಇದಾದ ಬಳಿಕ ಅಂಪೈರ್​​ಗಳು ಪಂದ್ಯವನ್ನು ನಿಲ್ಲಿಸಲು ನಿರ್ಧರಿಸಿದರು. ಇದು ಚರ್ಚೆಗೆ ಗ್ರಾಸವಾಗಿದೆ. ಲೀವರ್ಡ್ ಐಲ್ಯಾಂಡ್ ಹಾಗೂ ಟ್ರಿನಿಡಾಡ್ ಮತ್ತು ಟೊಬಾಗೋ ತಂಡದ ನಡುವೆ ಪಂದ್ಯ ನಡೆಯುತ್ತಿತ್ತು. ಲೀವರ್ಡ್ ಐಲ್ಯಾಂಡ್ ಆಟಗಾರ ಜೆರೆಮಿಯಾ ಲೂಯಿಸ್‌ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ಟ್ರಿನಿಡಾಡ್ ಮತ್ತು ಟೊಬಾಗೋ ತಂಡದ ಬೌಲರ್ ಸೀಲ್ಸ್ ಮಾಡಿದ ಎಸೆತ ಅನಿರೀಕ್ಷಿತ ಬೌನ್ಸ್ ಉಂಟುಮಾಡಿತು. ಇದು ಬ್ಯಾಟರ್ ಜೆರೆಮಿಯಾ ಲೂಯಿಸ್‌ ಹೆಲ್ಮೆಟ್‌ಗೆ ಬಡಿಯಿತು. ಜೆರೆಮಿಯಾ ಲೂಯಿಸ್‌ ತಕ್ಷಣವೇ ನೆಲಕ್ಕೆ ಬಿದ್ದರು. ಈ ಬಾಲ್ ಹೆಲ್ಮೆಟ್​​ ಅನ್ನು ಹಾನಿ ಮಾಡಿತ್ತು. ಈ ವೇಳೆ ಜೆರೆಮಿಯಾ ಲೂಯಿಸ್‌ ಹತಾಶೆಯಿಂದ ಹೆಲ್ಮೆಟ್ ಅನ್ನು ಒದ್ದು ಮೈದಾನದಿಂದ ಹೊರನಡೆದರು.

ಲೂಯಿಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರು ಸ್ಥಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲು ಬ್ಯಾಟ್ ಮಾಡಿದ್ದ ಲೀವಾರ್ಡ್ 131 ರನ್ ಗಳಿಸಿ ಆಲ್​​ಔಟ್ ಆಯಿತು. ನಂತರ ಟ್ರಿನಿಡಾಡ್ ಮತ್ತು ಟೊಬಾಗೋ ತಂಡ 175 ರನ್​​ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಮೂರನೇ ದಿನದಾಟದಲ್ಲಿ ಬ್ಯಾಟಿಂಗ್​ಗೆ ಇಳಿದ ಲೀವರ್ಡ್ ಐಲ್ಯಾಂಡ್ 140 ರನ್​​ಗೆ 7 ವಿಕೆಟ್ ಕಳೆದುಕೊಂಡಿತ್ತು. ಈ ಏಳೂ ವಿಕೆಟ್‌ಗಳನ್ನು ಸೀಲ್ಸ್ ಕಬಳಿಸಿದ್ದರು ಅನ್ನೋದು ವಿಶೇಷ. ಪಂದ್ಯದ ನಂತರ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ. 'ಸರ್ ವಿವ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಅಪಾಯಕಾರಿ ಪಿಚ್ ಪರಿಸ್ಥಿತಿಯಿಂದಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಲೀವರ್ಡ್ ಐಲ್ಯಾಂಡ್ ಮತ್ತು ಟ್ರಿನಿಡಾಡ್- ಟೊಬಾಗೊ ದ್ವಿಪಕ್ಷೀಯ ಸರಣಿಯ ಈ ಪಂದ್ಯವನ್ನು ಡ್ರಾ ಎಂದು ರದ್ದುಗೊಳಿಸಲಾಗಿದೆ' ಎಂದು ಹೇಳಿದೆ.

Category
ಕರಾವಳಿ ತರಂಗಿಣಿ