ಮಂಗಳೂರು: ಕ್ರೀಡಾ ಸಂಕೀರ್ಣ ಹಾಗೂ ಪಣಂಬೂರು ಕಡಲತೀರದಲ್ಲಿ ಆಯೋಜಿಸಲಾಗಿರುವ 2025-26ನೇ ಸಾಲಿನ ‘ಅಖಿಲ ಭಾರತ ಪ್ರಮುಖ ಬಂದರುಗಳ ವಾಲಿಬಾಲ್ ಮತ್ತು ಬೀಚ್ ವಾಲಿಬಾಲ್ ಟೂರ್ನಮೆಂಟ್’ಗೆ ಮಂಗಳವಾರ ಸಂಜೆ ಚಾಲನೆ ನೀಡಲಾಯಿತು.
ನವ ಮಂಗಳೂರು ಬಂದರು ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀಮತಿ ಎಸ್. ಶಾಂತಿ ಅವರು ಇಂದು ಸಂಜೆ 5:00 ಗಂಟೆಗೆ ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಂದರುಗಳ ನಡುವೆ ಕ್ರೀಡಾ ಮನೋಭಾವ ಮತ್ತು ಪರಸ್ಪರ ಸ್ನೇಹ ಸಂಬಂಧವನ್ನು ವೃದ್ಧಿಸಲು ಇಂತಹ ರಾಷ್ಟ್ರಮಟ್ಟದ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ನವ ಮಂಗಳೂರು ಬಂದರು ಪ್ರಾಧಿಕಾರದ ಮುಖ್ಯ ಜಾಗೃತಿ ಅಧಿಕಾರಿ ಶ್ರೀ ಪದ್ಮನಾಭಾಚಾರ್ ಕೆ., ಎನ್‌ಎಂಪಿ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷರಾದ ಕ್ಯಾಪ್ಟನ್ ಮನೋಜ್ ಜೋಶಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು. ದೇಶದ ವಿವಿಧ ಭಾಗಗಳ ಪ್ರಮುಖ ಬಂದರುಗಳಿಂದ ಆಗಮಿಸಿರುವ ಕ್ರೀಡಾ ತಂಡಗಳು ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ.
ಈ ಕ್ರೀಡಾಕೂಟವು ಮಾರ್ಚ್ 24 ರಿಂದ 27ರವರೆಗೆ ನಡೆಯಲಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಪಣಂಬೂರು ಕಡಲತೀರ ಮತ್ತು ಬಂದರಿನ ಕ್ರೀಡಾ ಸಂಕೀರ್ಣದಲ್ಲಿ ರೋಚಕ ಪಂದ್ಯಗಳು ಜರುಗಲಿವೆ.