image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆರು ತಂಡಗಳ ತನ್ನದೇ ಆದ ಟಿ20 ಲೀಗ್ ಪ್ರಾರಂಭಿಸಲು ನಿರ್ಧರಿಸಿದ ನ್ಯೂಜಿಲೆಂಡ್

ಆರು ತಂಡಗಳ ತನ್ನದೇ ಆದ ಟಿ20 ಲೀಗ್ ಪ್ರಾರಂಭಿಸಲು ನಿರ್ಧರಿಸಿದ ನ್ಯೂಜಿಲೆಂಡ್

ಹೈದರಬಾದ್ : ವಿಶ್ವದಾದ್ಯಂತ ಟಿ20 ಲೀಗ್​ನ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಗಮನಿಸಿರುವ ನಾನಾ ದೇಶಗಳು ತಮ್ಮ ದೇಶದಲ್ಲೂ ಟಿ20 ಲೀಗ್​ಗಳನ್ನು ಆರಂಭಿಸಿವೆ. ಅಂತಹ ದೇಶಗಳ ಸಾಲಿಗೆ ಇದೀಗ ನ್ಯೂಜಿಲೆಂಡ್ ದೇಶವೂ ಸೇರ್ಪಡೆಯಾಗುತ್ತಿದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ವೆಸ್ಟ್ ಇಂಡೀಸ್, ಯುನೈಟೆಡ್ ಸ್ಟೇಟ್ಸ್ ಮತ್ತು ದುಬೈ ಈಗಾಗಲೇ ಟಿ20 ಲೀಗ್‌ಗಳನ್ನು ಪ್ರಾರಂಭಿಸಿ ಸಾಕಷ್ಟು ಯಶಸ್ಸು ಗಳಿಸಿವೆ. ಇದನ್ನು ಗಮನಿಸಿರುವ ನ್ಯೂಜಿಲೆಂಡ್ ತನ್ನದೇ ಆದ ಟಿ20 ಲೀಗ್ ಪ್ರಾರಂಭಿಸಲು ನಿರ್ಧರಿಸಿದೆ. ಈ ಲೀಗ್​ನಲ್ಲಿ 6 ತಂಡಗಳು ಭಾಗವಹಿಸಲಿದ್ದು, ಈ ಆರು ತಂಡಗಳು ಐಪಿಎಲ್‌ನಂತೆಯೇ ಪ್ರತ್ಯೇಕ ಮಾಲೀಕರನ್ನು ಹೊಂದಿರುತ್ತವೆ ಎಂದು ವರದಿಯಾಗಿದೆ. ಹಾಗೆಯೇ ಈ ಲೀಗ್ 2027 ರ ಜನವರಿಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ಈ ಪಂದ್ಯಾವಳಿಯನ್ನು ಪ್ರಾರಂಭಿಸುವುದಾಗಿ ನ್ಯೂಜಿಲೆಂಡ್ ಕ್ರಿಕೆಟ್ ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿರುವ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಲಿಂಡನ್, 'NZ20 ಲೀಗ್ ಪ್ರಸ್ತಾವನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮಂಡಳಿ ಚಿಂತಿಸಿದೆ. ಈ ಲೀಗ್ ಕೇವಲ ಮನರಂಜನೆಯ ಬಗ್ಗೆ ಮಾತ್ರವಲ್ಲ, ಯುವ ಸ್ಥಳೀಯ ಕ್ರಿಕೆಟಿಗರಿಗೆ ಉತ್ತಮ ವೇದಿಕೆಯಾಗಲಿದೆ. ಪ್ರತಿ ತಂಡವು ಸ್ಥಳೀಯ ಸ್ಟಾರ್ ಕ್ರಿಕೆಟಿಗರನ್ನು ಹೊಂದಿರಬೇಕು, ಇದರಿಂದ ಯುವ ಆಟಗಾರರು ಹೆಚ್ಚು ಕಲಿಯಬಹುದು ಎಂದಿದ್ದಾರೆ. ಇನ್ನು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ನ್ಯೂಜಿಲೆಂಡ್ ತಂಡಗಳನ್ನು ಸೇರಿಸುವ ಬಗ್ಗೆ ಆರಂಭದಲ್ಲಿ ಚರ್ಚೆಗಳು ನಡೆದಿದ್ದರೂ, ಮಂಡಳಿಯು ಅಂತಿಮವಾಗಿ ತಮ್ಮದೇ ಆದ ಲೀಗ್ ಪ್ರಾರಂಭ ಮಾಡುವುದು ಉತ್ತಮ ಎಂದು ನಿರ್ಧರಿಸಿದೆ' ಎಂದು ಅವರು ಹೇಳಿದ್ದಾರೆ.

Category
ಕರಾವಳಿ ತರಂಗಿಣಿ