ಹೈದರಬಾದ್ : ಮುಂಬರುವ ಪಾಕಿಸ್ತಾನ ಪ್ರೀಮಿಯರ್ ಲೀಗ್ ಅನ್ನು ಕೇವಲ ಎರಡು ನಗರಗಳಲ್ಲಿ, ಪ್ರೇಕ್ಷಕರಿಲ್ಲದೆ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ನಿರ್ಧರಿಸಿದೆ ಎಂದು ವರದಿಯಾಗಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಇಂಧನ ಸಮಸ್ಯೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಎಂದು ನಖ್ವಿ ಹೇಳಿಕೊಂಡಿದ್ದಾರೆ. ಈ ನಡುವೆ, ಕೆಲವು ವಿದೇಶಿ ಆಟಗಾರರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳದಂತೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಬೆದರಿಕೆ ಒಡ್ಡಿರುವುದಾಗಿ ವರದಿಯಾಗಿದೆ. ಪಾಕ್‌ನಲ್ಲಿರುವ ಜಮಾತ್-ಉಲ್-ಅಹ್ರಾರ್ ಭಯೋತ್ಪಾದನಾ ಗುಂಪು, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಡ್ಯಾರಿಲ್ ಮಿಚೆಲ್‌ರಂತಹ ವಿದೇಶಿ ಆಟಗಾರರು ಪಿಎಸ್‌ಎಲ್‌ನಲ್ಲಿ ಭಾಗವಹಿಸಬಾರದು ಎಂದು ಎಚ್ಚರಿಕೆ ನೀಡಿದೆ. ಆಟಗಾರರು ಟಿ20 ಲೀಗ್‌ಗಾಗಿ ಪಾಕಿಸ್ತಾನಕ್ಕೆ ಬಂದರೆ ಅವರ ಸುರಕ್ಷತೆಯನ್ನು ಖಾತರಿಪಡಿಸಲಾಗುವುದಿಲ್ಲ ಎಂದಿದೆ.
ತಮ್ಮ ನಿಲುವನ್ನು ವಿವರಿಸಿರುವ ಉಗ್ರರ ಪಡೆಯು, ನಾವು ಕ್ರಿಕೆಟ್ ಅನ್ನು ಕ್ರೀಡೆಯಾಗಿ ವಿರೋಧಿಸುತ್ತಿಲ್ಲ. ಆದರೆ, ಪಾಕಿಸ್ತಾನದಲ್ಲಿನ ಸದ್ಯದ ಪರಿಸ್ಥಿತಿ ಗಮನಿಸಿದರೆ, ವಿದೇಶಿ ಆಟಗಾರರಿಗೆ ಭದ್ರತೆ ಒದಗಿಸುವುದು ಅಸಾಧ್ಯ ಎಂದಿದ್ದಾರೆ. 'ಸಂಬಂಧಿತ ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ಸಲಹೆ ನೀಡಲು ಬಯಸುತ್ತೇವೆ. ಅವರಿಗೆ ಏನಾದರೂ ಸಂಭವಿಸಿದರೆ, ಅದಕ್ಕೆ ನಾವು ಜವಾಬ್ದಾರರಲ್ಲ. ನಾವು ನಮ್ಮ ನಿಲುವನ್ನು ತಿಳಿಸುತ್ತಿದ್ದೇವೆ' ಎಂದು ಜಮಾತ್-ಉಲ್-ಅಹ್ರಾರ್‌ನ ಕಮಾಂಡರ್ ದಿ ಸಂಡೇ ಗಾರ್ಡಿಯನ್‌ಗೆ ತಿಳಿಸಿದ್ದಾರೆ. ಆಟಗಾರರು ಎಚ್ಚರಿಕೆಯನ್ನು ನಿರ್ಲಕ್ಷಿಸಿ ಟೂರ್ನಿಯಲ್ಲಿ ಭಾಗವಹಿಸಿದರೆ ಏನು ಮಾಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಕಮಾಂಡರ್, ನಾವು ಪಂದ್ಯಾವಳಿಗಳು ನಡೆಯದಂತೆ ತಡೆಯಲು ಏನು ಮಾಡಬೇಕು ಅದನ್ನು ಮಾಡುತ್ತೇವೆ. ಹಾಗೂ ಒಂದವೇಳೆ ನಡೆದರೆ, ನಮ್ಮ ಸಾಮರ್ಥ್ಯದಲ್ಲಿ ಏನು ಮಾಡಬೇಕು ಎಂಬುದು ನಮಗೆ ತಿಳಿದಿದೆ' ಎಂದಿದ್ದಾರೆ. ಈ ಬಾರಿಯ PSLನಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಆಡಮ್ ಜಂಪಾ, ಇಂಗ್ಲೆಂಡ್‌ನ ಮೊಯಿನ್ ಅಲಿ ಮತ್ತು ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ, ಡ್ಯಾರಿಯಲ್ ಮಿಚೆಲ್ ಸೇರಿದಂತೆ ಅನೇಕ ತಾರಾ ಆಟಗಾರರು ಇದ್ದಾರೆ.