image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಿಳಾ ಆಟಗಾರರ ಸುರಕ್ಷೆತೆಗಾಗಿ ಕ್ರಿಕೆಟ್​ನಲ್ಲೂ AI ಟೂಲ್​​ ಬಳಕೆಗೆ ಮುಂದಾದ ಐಸಿಸಿ

ಮಹಿಳಾ ಆಟಗಾರರ ಸುರಕ್ಷೆತೆಗಾಗಿ ಕ್ರಿಕೆಟ್​ನಲ್ಲೂ AI ಟೂಲ್​​ ಬಳಕೆಗೆ ಮುಂದಾದ ಐಸಿಸಿ

ಹೈದರಾಬಾದ್​: ಮಹಿಳಾ ಕ್ರಿಕೆಟಿಗರ ಸುರಕ್ಷತೆಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಮತ್ತು ದ್ವೇಷಪೂರಿತ ಪೋಸ್ಟ್​ಗಳಿಂದ ಮಹಿಳಾ ಕ್ರಿಕೆಟಿಗರನ್ನು ರಕ್ಷಿಸಲು ಹೊಸ AI ಟೂಲ್​ ಅನ್ನು ಪ್ರಾರಂಭಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿನ ಆಕ್ಷೇಪಾರ್ಹ ವಿಷಯಗಳಿಂದ ಮಹಿಳಾ ಕ್ರಿಕೆಟಿಗರನ್ನು ರಕ್ಷಿಸುವ ಉದ್ದೇಶದಿಂದಾಗಿ ಐಸಿಸಿ 'ಸೋಶಿಯಲ್​ ಮೀಡಿಯಾ ಮಾಡರೇಶನ್' ಎಂಬ ಹೆಸರಿನ AI ಸಾಧನವನ್ನು ಘೋಷಿಸಿತು. ಈಗಾಗಲೇ 60 ಮಹಿಳಾ ಕ್ರಿಕೆಟಿಗರು ಈ ಟೂಲ್​ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ಮಹಿಳಾ ಆಟಗಾರ್ತಿಯರಿಗೆ ಸುರಕ್ಷಿತ ಡಿಜಿಟಲ್ ವಾತಾವರಣವನ್ನು ಒದಗಿಸಲು ಐಸಿಸಿ ಈ ನಿರ್ಧಾರ ಕೈಗೊಂಡಿದೆ. ಈ ಸಾಮಾಜಿಕ ಮಾಧ್ಯಮ ಮಾಡರೇಶನ್ AI ತಂತ್ರಜ್ಞಾನದಿಂದ ಕಾರ್ಯ ನಿರ್ವಹಿಸುತ್ತದೆ. GoBubble ಜೊತೆಗೆ ಸೇರಿ ಐಸಿಸಿ ಈ ಟೂಲ್​ ಅನ್ನು ಪ್ರಾರಂಭಿಸಿದೆ.

ಈ ಟೂಲ್​ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಚಾನೆಲ್‌ಗಳು ಸೇರಿದಂತೆ ಆಟಗಾರರ ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಬರುವ ಕಾಮೆಂಟ್‌ಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಒಂದು ವೇಳೆ ಆಟಗಾರರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಆಕ್ಷೇಪಾರ್ಹ, ದ್ವೇಷಪೂರಿತದ ಕಾಮೆಂಟ್‌ಗಳ ಕಂಡು ಬಂದರೆ ಕೂಡಲೇ ಅದನ್ನು ತೆಗೆದು ಹಾಕಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಸಿಸಿ ಡಿಜಿಟಲ್ ಪ್ಲಾಟ್​ಫಾರ್ಮ್​ ಮುಖ್ಯಸ್ಥ ಫಿನ್ ಬ್ರಾಡ್‌ ಶಾ, ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಆಟಗಾರರಿಗೆ ಸಕಾರಾತ್ಮಕ ವಾತಾವರಣವನ್ನು ಒದಗಿಸಲು ಈ ಉಪಕರಣವು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ ಇಂದಿನಿಂದ ಮಹಿಳಾ ಟಿ20 ವಿಶ್ವಕಪ್​ ಪಂದ್ಯಾವಳಿಗಳು ಆರಂಭಗೊಂಡಿವೆ. ಒಟ್ಟು 18 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿವೆ. ಎ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ತಂಡಗಳಿದ್ದು, ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಇಂಗ್ಲೆಂಡ್, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳಿವೆ.

Category
ಕರಾವಳಿ ತರಂಗಿಣಿ