image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

2027ರ ವಿಶ್ವಕಪ್‌ ಗೆಲ್ಲುವುದೇ ದೊಡ್ಡ ಗುರಿ ಎಂದ ಶುಭಮನ್ ಗಿಲ್

2027ರ ವಿಶ್ವಕಪ್‌ ಗೆಲ್ಲುವುದೇ ದೊಡ್ಡ ಗುರಿ ಎಂದ ಶುಭಮನ್ ಗಿಲ್

ಹೈದರಬಾದ್ : ಟೀಮ್ ಇಂಡಿಯಾದ ಏಕದಿನ ತಂಡದ ನಾಯಕ ಶುಭ್‌ಮನ್‌ ಗಿಲ್ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ವಿಶ್ವಕಪ್‌ ಗೆಲ್ಲುವುದೇ ದೊಡ್ಡ ಗುರಿ ಎಂದು ತಿಳಿಸಿದ್ದಾರೆ. ಶುಭ್‌ಮನ್‌ ಗಿಲ್‌ 2023ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ರೋಹಿತ್ ಶರ್ಮಾ ಪಡೆ ನಿರಾಸೆ ಅನುಭವಿಸಿತ್ತು. 2023ರ ಫೈನಲ್‌ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಆಘಾತ ಅನುಭವಿಸಿತು. ಕಳೆದ ಬಾರಿಯ ಸೋಲಿನಿಂದ ತಂಡ ಪಾಠ ಕಲಿತಿದೆ ಎಂದು ಶುಭ್‌ಮನ್‌ ಗಿಲ್‌ ನಮನ್‌ ಅವರ್ಡ್‌ ಸಮಾರಂಭದಲ್ಲಿ ತಿಳಿಸಿದ್ದಾರೆ. ಇದೇ ವೇಳೇ ಮುಂದಿನ ವಿಶ್ವಕಪ್‌ ಬಗ್ಗೆ ಯೋಚಿಸುತ್ತಾ ಇದ್ದೀರಾ ಎಂದು ಕೇಳಿದ್ದಕ್ಕೆ, ಆ ಕಪ್ ಗೆಲ್ಲುವುದೇ ದೊಡ್ಡ ಗುರಿ ಎಂದು ತಿಳಿಸಿದ್ದಾರೆ. ಕಳೆದ ಬಾರಿ ಏಕದಿನ ವಿಶ್ವಕಪ್‌ನಲ್ಲಿ ತಂಡ ಟ್ರೋಫಿ ಗೆಲ್ಲುವುದಕ್ಕಿಂತ ಒಂದು ಹೆಜ್ಜೆ ಹಿಂದೆ ನಿಂತಿತ್ತು. ನಮ್ಮ ತಂಡಕ್ಕೆ ಮತ್ತೊಂದು ಸುವರ್ಣ ಅವಕಾಶ ಒದಗಿ ಬಂದಿದೆ ಎಂದು ಶುಭ್‌ಮನ್‌ ಗಿಲ್ ಹೇಳಿದ್ದಾರೆ. ನಾವು ಕಳೆದ ಬಾರಿ ತೀರ ಹತ್ತಿರಕ್ಕೆ ಬಂದು ನಿರಾಸೆ ಅನುಭವಿಸಿದೆವು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಈ ಗುರಿಯನ್ನು ಮುಟ್ಟುವುದೇ ನಮ್ಮ ಗುರಿ ಎಂದಿದ್ದಾರೆ.

Category
ಕರಾವಳಿ ತರಂಗಿಣಿ