ಕೋಲ್ಕತ್ತ : ಈಡನ್ ಗಾರ್ಡನ್‌ನಲ್ಲಿ ನಡೆದ ಟಿ20 ವಿಶ್ವಕಪ್ ಸೂಪರ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನ ಸೋಲಿಸುವ ಮೂಲಕ ಭಾರತ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನ ಭದ್ರಪಡಿಸಿಕೊಂಡಿದೆ. ಇಂದಿನ ಆಟದ ಪ್ರಮುಖ ಆಕರ್ಷಣೆ ಸಂಜು ಸ್ಯಾಮ್ಸನ್. ಇವರ ಅದ್ಭುತ ಬ್ಯಾಟಿಂಗ್ ಮತ್ತು ಭಾರತ ತಂಡದ ಗೆಲುವಿಗೆ ಭರವಸೆಯಾಗಿ ನಿಂತ ರೀತಿ. ರಿಂಕು ಸಿಂಗ್ ಅವರ ತಂದೆ ನಿಧನರಾದ ಬಳಿಕ ಅವರಿಗೆ ವಾಪಸ್ ಹೋಗುವ ಪರಿಸ್ಥಿತಿ ಬಂತು. ಹೀಗಾಗಿ ರಿಂಕು ಬದಲಿಗೆ ಸಂಜು ಸ್ಯಾಮ್ಸನ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಸಂಜು ತಂಡಕ್ಕೆ ಸೇರಿಕೊಂಡಿದ್ದಕ್ಕೂ ಸಾರ್ಥಕವಾಯ್ತು ಎಂಬ ರೀತಿಯ ಆಟವನ್ನ ಅವರಿಂದು ಆಡಿದ್ದಾರೆ. ಹಾಗೇ, ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಂಜುಗೆ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅವರು ತಲೆ ಬಾಗಿದ್ದಾರೆ. ತಮ್ಮ ಕ್ಯಾಪ್ ತೆಗೆದು ತಲೆ ಬಾಗಿಸಿ, ಗೌರವ ನೀಡಿದ್ದಾರೆ. ಸಂಜು ಸ್ಯಾಮ್ಸನ್ ಮೈದಾನದಿಂದ ಹೊರಟಾಗ ಸೂರ್ಯಕುಮಾರ್ ಯಾದವ್ ಮತ್ತು ಭಾರತ ತಂಡದ ಇತರ ಆಟಗಾರರು ಬಂದಿದ್ದಾರೆ. ಎಲ್ಲರ ಮುಖದಲ್ಲೂ ಖುಷಿ ಇತ್ತು. ಸಂಜು ಕೂಡ ಭಾವುಕರಾಗಿದ್ದರು. ಈ ವೇಳೆ ಸೂರ್ಯಕುಮಾರ್ ಯಾದವ್ ತಮ್ಮ ಕ್ಯಾಪ್ ತೆಗೆದು, ಸಂಜು ಎದುರು ತಲೆಬಾಗಿದರು. ಆಗ ಸಂಜು ಸ್ಯಾಮ್ಸನ್ ಅವರು ಸೂರ್ಯರನ್ನ ಅಪ್ಪಿಕೊಂಡಿದ್ದಾರೆ. ಇನ್ನು ಉಳಿದವರೂ ಕೂಡ ಸಂಜುಗೆ ಹೃದಯಪೂರ್ವಕವಾಗಿ ಹಾರೈಸಿದ್ದಾರೆ. ಮ್ಯಾಚ್ ಗೆದ್ದ ಖುಷಿಯೊಂದು ಕಡೆ ಆದರೆ, ಸಂಜು ಫಾರ್ಮ್‌ಗೆ ಮರಳಿದ್ದು ಇನ್ನೂ ಖುಷಿ ಎನ್ನಿಸಿದೆ. ಸೆಮಿಫೈನಲ್ ಮತ್ತು ಫೈನಲ್‌ನಲ್ಲೂ ಸಂಜು ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.