image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಂಜು ಆಯ್ಕೆಯ ಬಗ್ಗೆ ಮತ್ತೊಮ್ಮೆ ಆಲೋಚಿಸಬೇಕಿದೆ ಎಂದ ಭಾರತೀಯ ಕ್ರಿಕೆಟ್ ವಿಶ್ಲೇಷಕರು!

ಸಂಜು ಆಯ್ಕೆಯ ಬಗ್ಗೆ ಮತ್ತೊಮ್ಮೆ ಆಲೋಚಿಸಬೇಕಿದೆ ಎಂದ ಭಾರತೀಯ ಕ್ರಿಕೆಟ್ ವಿಶ್ಲೇಷಕರು!

ಅಹ್ಮದಾಬಾದ್ : ದಕ್ಷಿಣ ಕನ್ನಡ 188 ರನ್​ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಎಂದಿನಂತೆ ಮೊದಲ ಓವರ್​​ನಲ್ಲಿ ವಿಕೆಟ್ ಕಳೆದುಕೊಂಡಿತು. ಉತ್ತಮ ಫಾರ್ಮ್​​ನಲ್ಲಿದ್ದ ಇಶಾನ್ ಕಿಶನ್ ಮೊದಲ ಓವರ್​​ನಲ್ಲಿ ಸತತ 3 ಡಾಟ್ ಬಾಲ್ ಮಾಡಿ 4ನೇ ಎಸೆತದಲ್ಲಿ ಮಾರ್ಕ್ರಮ್​ಗೆ ವಿಕೆಟ್ ಒಪ್ಪಿಸಿದರು. ನಂತರದ ಓವರ್​​ನಲ್ಲಿ ತಿಲಕ್ ವರ್ಮಾ ಕೂಡ ಮಾರ್ಕೊ ಜಾನ್ಸನ್​​ಗೆ ಬಲಿಯಾದರು. ಅಭಿಷೇಕ್ ಶರ್ಮಾ ಕೂಡ ಕೇವಲ 15 ರನ್​ಗಳಿಸಿ ಔಟ್ ಆದರು. ಪವರ್​ ಪ್ಲೇನಲ್ಲಿ ಭಾರತ 26 ರನ್​ಗಳಾಗುಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು, ಅಲ್ಲಿಂದ ಚೇತರಿಸಿಕೊಳ್ಳಲಾಗದೇ 111ಕ್ಕೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಟೂರ್ನಿಯಲ್ಲಿ ಮೂರು ಪಂದ್ಯಗಳಲ್ಲಿ ಮೂರು ಡಕ್ ಆಗಿದ್ದ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ತಾವೆದುರಿಸಿದ ಮೊದಲ ಬಾಲ್‌ನಿಂದಲೇ ಅವರು ಏಡನ್ ಮಾರ್ಕ್ರಮ್ ಬೌಲಿಂಗ್‌ನಲ್ಲಿ ಬೌಂಡರಿ ಹೊಡೆದು ತಮ್ಮ ಟೂರ್ನಿಯ ಮೊದಲ ರನ್ ಗಳಿಸಿದರು. ಆದರೆ 12 ಎಸೆತಗಳಲ್ಲಿ 15 ರನ್ ಗಳಿಸಿದರು. ಆದರೆ ಇದನ್ನ ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ಸತತ 4ನೇ ಪಂದ್ಯದಲ್ಲಿ ಭಾರತಕ್ಕೆ ನೆರವಾಗುವಂತಹ ಇನ್ನಿಂಗ್ಸ್ ಆಡುವಲ್ಲಿ ಅಭಿಷೇಕ್ ಶರ್ಮಾ ವಿಫಲರಾದರು. ಸೆಮಿಫೈನಲ್ ಪ್ರವೇಶಿಸುವ ಮತ್ತು ತನ್ನ ಚಾಂಪಿಯನ್​ ಪಟ್ಟವನ್ನ ಉಳಿಸಿಕೊಳ್ಳುವ ಮಹಾತ್ವಾಕಾಂಕ್ಷೆಯಲ್ಲಿರುವ ಭಾರತ ತಂಡ ಮುಂದಿನ ಪಂದ್ಯಗಳಲ್ಲಾದರೂ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಬೇಕು. ಅಭಿಷೇಕ್ ಶರ್ಮಾ, ಇಶಾನ್ ಕಿಶನ್​ ಹಾಗೂ ತಿಲಕ್ ವರ್ಮಾ ಮೊದಲ ಮೂವರು ಬ್ಯಾಟರ್ ಎಡಗೈ ಬ್ಯಾಟರ್​ಗಳಾಗಿದ್ದಾರೆ. ಮೂವರಲ್ಲಿ ಇದುವರೆಗೆ ತಂಡಕ್ಕೆ ಗೆಲುವು ತಂದುಕೊಡುವ ಆಟ ಆಡಿರುವುದು ಇಶಾನ್ ಕಿಶನ್ ಮಾತ್ರ, ಅಭಿಷೇಕ್ ಹಾಗೂ ತಿಲಕ್ ಇಬ್ಬರು ವಿಶ್ವಕಪ್​​​ನಲ್ಲಿ ನೀರಸ ಪ್ರದರ್ಶನ ತೋರಿದ್ದಾರೆ. ಮುಂದಿನ ಎರಡು ಸೂಪರ್ 8 ಪಂದ್ಯಗಳಲ್ಲಿ ಟೀಮ್ ಮ್ಯಾನೇಜ್​​ಮೆಂಟ್ ಈ ಇಬ್ಬರಲ್ಲಿ ಒಬ್ಬರನ್ನ ಸೈಡ್ ಲೈನ್ ಮಾಡಿ ಸಂಜು ಸ್ಯಾಮ್ಸನ್​ಗೆ ಒಂದು ಅವಕಾಶ ನೀಡಬೇಕು. ಆಗ ಬ್ಯಾಟಿಂಗ್​​ನಲ್ಲಿ ಎಡಬಲ ಸಂಯೋಜನೆ ಸಿಗಲಿದೆ. ಹೀಗಾದಾಗ ಬೌಲಿಂಗ್ ಪಡೆಯಲ್ಲಿ ಗೊಂದಲವನ್ನುಂಟು ಮಾಡಬಹುದು. ಹಾಗಾಗಿ ಗಂಭೀರ್ ಸಂಜು ಆಯ್ಕೆಯ ಬಗ್ಗೆ ಮತ್ತೊಮ್ಮೆ ಆಲೋಚಿಸಬೇಕಿದೆ ಎಂದು ಭಾರತೀಯ ಫ್ಯಾನ್ಸ್ ಅಭಿಪ್ರಾಯ ಪಟ್ಟಿದ್ದಾರೆ.

Category
ಕರಾವಳಿ ತರಂಗಿಣಿ