image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟಿ20 ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಸೂಪ‌ರ್ 8ಕ್ಕೆ ಅರ್ಹತೆ ಪಡೆದ ಭಾರತ ತಂಡ

ಟಿ20 ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಸೂಪ‌ರ್ 8ಕ್ಕೆ ಅರ್ಹತೆ ಪಡೆದ ಭಾರತ ತಂಡ

ಕೊಲಂಬೋ: ಭಾರತ ವಿರುದ್ಧದ ವಿಶ್ವಕಪ್ ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕಿಸ್ತಾನ ಭಾರೀ ಮುಖಭಂಗ ಅನುಭವಿಸಿದೆ. ಕೊಲಂಬೊದ ಆರ್ ಪ್ರೇಮದಾಸ್ ಮೈದಾನದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನ 27ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಹೀನಾಯ ಸೋಲನ್ನು ಕಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದದ್ದ ಟೀಮ್ ಇಂಡಿಯಾ ಇಶಾನ್ ಕಿಶಾನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಭಾರತ ಬೌಲಿಂಗ್ ದಾಳಿಗೆ ಸಿಲುಕಿ 114 ರನ್‌ಗಳಿಗೆ ಆಲೌಟ್ ಆಗಿದೆ. ಭಾರತ 61 ರನ್‌ಗಳಿಂದ ಪಂದ್ಯ ಗೆದ್ದು ಪಾಕಿಸ್ತಾನದ  ಮಣ್ಣು ಮುಕ್ಕಿಸಿದೆ. ಈ ಗೆಲುವಿನೊಂದಿಗೆ ಭಾರತ ಸೂಪರ್ 8ರ ಹಂತಕ್ಕೆ ಮುನ್ನಡೆದಿದೆ. ಭಾರತದ ಪರ ಜಸೀತ್ ಬುಮ್ರಾ, ವರುಣ್‌ ಚಕ್ರವರ್ತಿ, ಅಕ್ಷರ್ ಪಟೇಲ್, ಜಸ್ಟ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದುಕೊಂಡಿದ್ದಾರೆ

 

Category
ಕರಾವಳಿ ತರಂಗಿಣಿ