image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ ಯುವ ಟೀಂ ಇಂಡಿಯಾಕ್ಕೆ ಬಿಸಿಸಿಐ ಭರ್ಜರಿ ಬಹುಮಾನ

ಭಾರತದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ ಯುವ ಟೀಂ ಇಂಡಿಯಾಕ್ಕೆ ಬಿಸಿಸಿಐ ಭರ್ಜರಿ ಬಹುಮಾನ

ನವದೆಹಲಿ : ಹರಾರೆಯಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್​ನಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಸಿದ ಭಾರತ ಯುವ ಪಡೆ ದಾಖಲೆಯ 6ನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಆಯುಷ್ ಮ್ಹಾತ್ರೆ ತಂಡದ ಈ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು. ವಿಶ್ವ ಕ್ರಿಕೆಟ್​ ಮುಂದೆ ಭಾರತದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ ಯುವ ಟೀಂ ಇಂಡಿಯಾಕ್ಕೆ ಬಿಸಿಸಿಐ ಭರ್ಜರಿ ಬಹುಮಾನ ಘೋಷಿಸಿದೆ. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ದಾಖಲೆಯ 311 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 311 ರನ್​ಗಳಿಗೆ ಆಲೌಟ್ ಆಗಿ 100 ರನ್​ಗಳಿಂದ ಸೋಲೊಪ್ಪಿಕೊಂಡಿತು. ಹೀಗಾಗಿ ಚಾಂಪಿಯನ್ ಭಾರತಕ್ಕೆ ಐಸಿಸಿ ಕಡೆಯಿಂದ ಟ್ರೋಫಿ ಹಾಗೂ ಪದಕ ಸಿಕ್ಕಿತ್ತು. ಆದರೆ ನಗದು ರೂಪದಲ್ಲಿ ಯಾವುದೇ ಬಹುಮಾನ ಸಿಕ್ಕಿರಲಿಲ್ಲ.

ಐಸಿಸಿ ಅಂಡರ್-19 ಮಟ್ಟದಲ್ಲಿ ಯಾವುದೇ ನಗದು ಬಹುಮಾನವನ್ನು ವಿತರಿಸುವುದಿಲ್ಲ. ಹೀಗಾಗಿ ಟ್ರೋಫಿ ಮತ್ತು ಪದಕದೊಂದಿಗೆ ಟೀಂ ಇಂಡಿಯಾ ಆಟಗಾರರು ತವರಿಗೆ ಮರಳುತ್ತಿದ್ದಾರೆ. ಇದೀಗ ಬಿಸಿಸಿಐ ಚಾಂಪಿಯನ್ ಭಾರತ ತಂಡಕ್ಕೆ ಭರ್ಜರಿ ನಗದು ಬಹುಮಾನ ಘೋಷಿಸಿದೆ. ಇಂಗ್ಲೆಂಡ್‌ ತಂಡವನ್ನು ಮಣಿಸಿ 6ನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿದ್ದ ಭಾರತ ಯುವ ಪಡೆಗೆ ಬಿಸಿಸಿಐ 7.5 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಈ ಬಹುಮಾನದ ಮೊತ್ತವನ್ನು ಈ ಪಂದ್ಯಾವಳಿಯಲ್ಲಿ ತಂಡದ ಭಾಗವಾಗಿದ್ದ ಆಟಗಾರರು, ಕೋಚಿಂಗ್ ಸಿಬ್ಬಂದಿಗಳಿಗೆ ಹಂಚಲಾಗುವುದು.

Category
ಕರಾವಳಿ ತರಂಗಿಣಿ