ಗುವಾಹಟಿ : ಗವಾಹಟಿಯ ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಈ ಗೆಲುವಿನೊಂದಿಗೆ ಭಾರತ ತಂಡವು 5 ಪಂದ್ಯಗಳ ಸರಣಿಯಲ್ಲಿ 3-0 ಅಂತರದ ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ನ್ಯೂಜಿಲೆಂಡ್ ಅನ್ನು 20 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟ್ ಮಾಡಿತು.ನ್ಯೂಜಿಲೆಂಡ್ ತಂಡದ ಪರವಾಗಿ ಗ್ಲೆನ್ ಫಿಲಿಪ್ಸ್ 40 ಎಸೆತಗಳಲ್ಲಿ 48 ರನ್ (6 ಫೋರ್, 1 ಸಿಕ್ಸ್) ಗಳಿಸಿದರೆ, ಮಾರ್ಕ್ ಚಾಪ್‌ಮನ್ 23 ಎಸೆತಗಳಲ್ಲಿ 32 ರನ್ (2 ಫೋರ್, 2 ಸಿಕ್ಸ್) ಸಿಡಿಸಿದರು. ಇನ್ನೊಂದೆಡೆಗೆ ಮಿಚೆಲ್ ಸ್ಯಾಂಟ್ನರ್ 17 ಎಸೆತಗಳಲ್ಲಿ 27 ರನ್ ಗಳನ್ನು ಗಳಿಸುವ ಮೂಲಕ ತಂಡವು ಸ್ಪರ್ಧಾತ್ಮಕ ಮೊತ್ತವನ್ನು ಗಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಜಸ್ಪ್ರಿತ್ ಬುಮ್ರಾ 4 ಓವರ್‌ಗಳಲ್ಲಿ 17 ರನ್‌ಗೆ 3 ವಿಕೆಟ್ ಪಡೆದರೆ ಹಾರ್ದಿಕ್ ಪಾಂಡ್ಯ ಮತ್ತು ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದರು. ಹರ್ಷಿತ್ ರಾಣಾ 1 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ತಂಡದ ರನ್ ಗಳಿಗೆ ಕಡಿವಾಣ ಹಾಕಿದರು.
ನ್ಯೂಜಿಲೆಂಡ್ ತಂಡವು ನೀಡಿದ 154 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತವನ್ನು ಎದುರಿಸಿತು. ಆದರೆ ತದನಂತರ ಟೀಮ್ ಇಂಡಿಯಾದ ಇಶಾನ್ ಕಿಶನ್ ಸ್ಪೋಟಕ ಆಟಕ್ಕೆ ಮುಂದಾದರು, ಇದರ ಪರಿಣಾಮವಾಗಿ ಕೇವಲ 3 ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ಮೂಲಕ 28 rರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ನಂತರ ಜೊತೆಗೂಡಿದ ತಂಡದ ಅಭಿಷೇಕ್ ಶರ್ಮಾ ತಮ್ಮ ಎಂದಿನ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸುವ ಮೂಲಕ ಕೇವಲ 20 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ ಏಳು ಬೌಂಡರಿ ಗಳ ಮೂಲಕ ಅಜೇಯ 68 ರನ್ ಗಳನ್ನು ಗಳಿಸಿದರು. ಕೇವಲ 14 ಎಸೆತಗಳಲ್ಲಿ ಅರ್ಧಶತಕಗಳಿಸುವ ಮೂಲಕ ಯುವರಾಜ್ ಸಿಂಗ್ ನಂತರ ಅತಿ ವೇಗವಾಗಿ 50 ರನ್ ಗಳಿಸಿದ ಆಟಗಾರ ಎನ್ನುವ ಹೆಗ್ಗಳಿಕೆ ಪಾತ್ರರಾದರು. ಇನ್ನೊಂದೆಡೆಗೆ ಸೂರ್ಯಕುಮಾರ್ ಯಾದವ್ ಅಜೇಯ 57 ರನ್ (26 ಎಸೆತಗಳಲ್ಲಿ 6 ಫೋರ್, 3 ಸಿಕ್ಸ್) ಗಳ ಮೂಲಕ ಕೇವಲ 10 ಓವರ್ ಗಳಲ್ಲಿ 155 ರನ್ ಗಳಿಸುವ ಮೂಲಕ ಸತತ 3- 0 ಅಂತರದ ಮೂಲಕ ಮುನ್ನಡೆಯನ್ನು ಕಾಯ್ದುಕೊಳ್ಳುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಪವರ್‌ಪ್ಲೇಯಲ್ಲಿ 6 ಓವರ್‌ಗಳಲ್ಲಿ 94 ರನ್ ಗಳಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.