ಇಂದೋರ್: ವಿರಾಟ್ ಕೊಹ್ಲಿ, ಹರ್ಷಿತ್ ರಾಣಾ ಹೋರಾಟದ ನಡುವೆಯೂ ಭಾರತವು ನ್ಯೂಜಿಲೆಂಡ್ ವಿರುದ್ಧ 41 ರನ್‌ಗಳಿಂದ ಸೋಲು ಒಪ್ಪಿಕೊಂಡಿದೆ. ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡವು 8 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತವು 46 ಓವರ್‌ಗಳಲ್ಲಿ 296 ರನ್ ಗಳಿಸಿ ಆಲೌಟ್‌ಗೆ ತುತ್ತಾಯಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 124 ರನ್ (108 ಎಸೆತ), ನಿತೀಶ್ ಕುಮಾರ್ ರೆಡ್ಡಿ 53 ರನ್ (57 ಎಸೆತ) ಹಾಗೂ ಹರ್ಷಿತ್ ರಾಣಾ 52 ರನ್ (43 ಎಸೆತ) ಬಾರಿಸಿದರು.