ಬ್ರಿಸ್ಬೇನ್: ವಿಶ್ವದ ಅಗ್ರ ಶ್ರೇಯಾಂಕದ ಟೆನಿಸ್ ಆಟಗಾರ್ತಿ ಅರಿನಾ ಸಬಲೆಂಕಾ ಅವರು ನೇರ ಸೆಟ್‌ಗಳಲ್ಲಿ ಉಕ್ರೇನ್‌ನ ಮಾರ್ತಾ ಕೊಸ್ಟಿಯುಕ್ ಅವರನ್ನು ಮಣಿಸಿ ಸತತ ಎರಡನೇ ಬಾರಿಗೆ ಬ್ರಿಸ್ಬೇನ್ ಇಂಟರ್‌ನ್ಯಾಷನಲ್ ಪ್ರಶಸ್ತಿ ಗೆದ್ದುಕೊಂಡರು. ಕ್ವೀನ್ಸ್‌ಲ್ಯಾಂಡ್ ಟೆನಿಸ್ ಸೆಂಟರ್ ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಬೆಲಾರೂಸ್‌ನ ಆಟಗಾರ್ತಿ 6-4, 6-3 ರಿಂದ ಗೆದ್ದರು.