image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟೆಸ್ಟ್ ವೃತ್ತಿಜೀವನದ ಕೊನೆಯ ಪಂದ್ಯವಾಡಿದ ಉಸ್ಮಾನ್ ಖವಾಜ ಅವರಿಗಾಗಿ ಶಾಂಪೇನ್ ಸೆಲಿಬ್ರೇಷನ್ ಕೈಬಿಟ್ಟ ಆಸ್ಟ್ರೇಲಿಯಾ ಕ್ರಿಕೆಟ್ ತಂಡ

ಟೆಸ್ಟ್ ವೃತ್ತಿಜೀವನದ ಕೊನೆಯ ಪಂದ್ಯವಾಡಿದ ಉಸ್ಮಾನ್ ಖವಾಜ ಅವರಿಗಾಗಿ ಶಾಂಪೇನ್ ಸೆಲಿಬ್ರೇಷನ್ ಕೈಬಿಟ್ಟ ಆಸ್ಟ್ರೇಲಿಯಾ ಕ್ರಿಕೆಟ್ ತಂಡ

ಸಿಡ್ನಿ: ಟೆಸ್ಟ್ ವೃತ್ತಿಜೀವನದ ಕೊನೆಯ ಪಂದ್ಯವಾಡಿದ ಉಸ್ಮಾನ್ ಖವಾಜ ಅವರಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ವಿನೂತನವಾದ ಗೌರವ ಸಲ್ಲಿಸಿದೆ. ಉಸ್ಮಾನ್ ಖವಾಜ ಅವರಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಶಾಂಪೇನ್ ಸೆಲಿಬ್ರೇಷನ್ ಕೈಬಿಟ್ಟು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ನಡುವಿನ ಪ್ರತಿಷ್ಠಿತ ಆಯಶಸ್‌ ಸರಣಿಯನ್ನು ಆಸ್ಟ್ರೇಲಿಯಾ ತಂಡವು 4-1 ಅಂತರದಲ್ಲಿ ಜಯಿಸಿದೆ. ಇದರ ಬೆನ್ನಲ್ಲೇ ಉಸ್ಮಾನ್ ಖವಾಜ ಅವರನ್ನು ಸಂಭ್ರಮದಲ್ಲಿ ಭಾಗಿಯಾಗಿಸಲು ಆಸೀಸ್ ತಂಡ ತಮ್ಮ ಎಂದಿನ ಶಾಂಪೇನ್ ಆಚರಣೆಯನ್ನು ಬೇಡವೆಂದು ನಿರ್ಧರಿಸಿತು. ಪಾಕಿಸ್ತಾನ ಮೂಲದ ಮತ್ತು ಇಸ್ಲಾಂ ಧರ್ಮದ ಅನುಯಾಯಿಯಾಗಿರುವ ಖವಾಜ, ಮದ್ಯವನ್ನು ಒಳಗೊಂಡ ಯಾವುದೇ ಆಚರಣೆಗಳಲ್ಲಿ ಭಾಗವಹಿಸುವುದಿಲ್ಲ. ಇದೇ ಉದ್ದೇಶದಿಂದ ಕಾಂಗರೂ ಪಡೆ ಶಾಂಪೇನ್ ಸೆಲಿಬ್ರೇಷನ್ ಕೈಬಿಟ್ಟು ಹಿರಿಯ ಆಟಗಾರನಿಗೆ ಗೌರವ ಸಲ್ಲಿಸಿದೆ. ಇದು ಕ್ರಿಕೆಟ್ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. 2022ರ ಆಯಶಸ್‌ ಗೆಲುವಿನ ಸಂಭ್ರಮದ ವೇಳೆ ಖವಾಜ ಅವರ ಮೇಲೆ ಶಾಂಪೇನ್ ಬೀಳದಂತೆ ಪ್ಯಾಟ್ ಕಮಿನ್ಸ್ ತಡೆದ ವಿಡಿಯೋ ಕ್ರಿಕೆಟ್ ಜಗತ್ತಿನಲ್ಲಿ ವೈರಲ್ ಆಗಿತ್ತು. ಶಾಂಪೇನ್ ಬಾಟಲಿಗಳನ್ನು ಬದಿಗಿಟ್ಟು, ಖವಾಜ ಅವರನ್ನು ತಂಡದೊಂದಿಗೆ ಸಂಭ್ರಮಿಸಲು ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಆಹ್ವಾನಿಸಿದ್ದರು.

ಸಾಮಾನ್ಯವಾಗಿ ಆಸ್ಟ್ರೇಲಿಯಾ ತಂಡ ಗೆಲುವನ್ನು ಸಂಭ್ರಮಿಸಲು ಶಾಂಪೇನ್ ಹಾರಿಸುವಾಗ, ಖವಾಜ ವೇದಿಕೆಗೆ ಬಾರದೆ ದೂರ ಉಳಿಯುತ್ತಿದ್ದರು. ಆದರೆ ಈ ಬಾರಿ ಗೆಲುವನ್ನು ಆಚರಿಸುವಾಗ, ಖವಾಜ ಅವರಿಗೆ ಗೌರವ ಸೂಚಕವಾಗಿ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಶಾಂಪೇನ್ ಬಾಟಲಿಗಳನ್ನು ತೆರೆಯಲಿಲ್ಲ. ಇದರಿಂದ ಖವಾಜ ತಂಡದ ಇತರ ಸದಸ್ಯರೊಂದಿಗೆ ವೇದಿಕೆಗೆ ಬಂದು ಟ್ರೋಫಿಯೊಂದಿಗೆ ಗೆಲುವನ್ನು ಸಂಭ್ರಮಿಸಿದರು. 88 ಟೆಸ್ಟ್‌ಗಳಲ್ಲಿ 6,229 ರನ್ ಗಳಿಸಿರುವ ಖವಾಜ, ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿದ 15ನೇ ಆಟಗಾರ ಎನಿಸಿಕೊಂಡಿದ್ದಾರೆ. 39 ವರ್ಷದ ಖವಾಜ ಅವರ ಚೊಚ್ಚಲ ಮತ್ತು ನಿವೃತ್ತಿ ಪಂದ್ಯ ಎರಡೂ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಗಿದ್ದು ನಿಜಕ್ಕೂ ಕಾಕತಾಳೀಯ ಎನಿಸಿಕೊಂಡಿದೆ. 2011ರಲ್ಲಿ ಸಿಡ್ನಿಯಲ್ಲಿ ನಡೆದ ಚೊಚ್ಚಲ ಪಂದ್ಯದಲ್ಲೂ ಇಂಗ್ಲೆಂಡ್ ಅವರ ಎದುರಾಳಿಯಾಗಿತ್ತು. ತಮ್ಮ ವಿದಾಯದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 17 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 6 ರನ್‌ಗಳಿಗೆ ಖವಾಜ ಔಟಾದರು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ಖವಾಜ ಅವರಿಗೆ ಇಂಗ್ಲೆಂಡ್ ಆಟಗಾರರು ಗೌರವ ಸೂಚಕವಾಗಿ ಗಾರ್ಡ್ ಆಫ್ ಆನರ್ ನೀಡಿ ಕ್ರೀಸ್‌ಗೆ ಸ್ವಾಗತಿಸಿದರು.

Category
ಕರಾವಳಿ ತರಂಗಿಣಿ