ಮಂಗಳೂರು: ದ. ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ ಒಕ್ಕೂಟ (ರಿ) ಮಂಗಳೂರು ಇದರ ಆಶ್ರಯದಲ್ಲಿ ಇಂದು ಮಂಗಳ ಕ್ರೀಡಾಂಗಣ ಮಂಗಳೂರು ಇಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಪುತ್ತೂರು ಶಾಖೆಯ ಉದ್ಯೋಗಿ ದೀಕ್ಷಿತ್ ರೈ ಇಳಂತಾಜೆ 400 ಮೀ ಪ್ರಥಮ ಸ್ಥಾನ, ಉದ್ದ ಜಿಗಿತ ಪ್ರಥಮ ಸ್ಥಾನ, 200 ಮೀ ತೃತೀಯ ಸ್ಥಾನ ಪಡೆದಿದ್ದಾರೆ. ಪುತ್ತೂರು ಶಾಖೆಯ ಉದ್ಯೋಗಿಯಾಗಿರುವ ಇವರು, ಈ ಹಿಂದೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರಿನಲ್ಲಿ 9 ವರ್ಷಗಳ ಕಾಲ ದೈಹಿಕ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಇಳಂತಾಜೆ ದಿವಾಕರ ರೈ ಮತ್ತು ಕುಸುಮ ಡಿ ರೈ ದಂಪತಿಗಳ ಸುಪುತ್ರ.