image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತವನ್ನು 408 ರನ್‌ಗಳಿಂದ ಸೋಲಿಸಿ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ದಕ್ಷಿಣ ಆಫ್ರಿಕಾ

ಭಾರತವನ್ನು 408 ರನ್‌ಗಳಿಂದ ಸೋಲಿಸಿ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ದಕ್ಷಿಣ ಆಫ್ರಿಕಾ

ಗುವಾಹಟಿ: ಗುವಾಹಟಿ ಟೆಸ್ಟ್‌ನಲ್ಲಿ ಭಾರತವನ್ನು 408 ರನ್‌ಗಳಿಂದ ಸೋಲಿಸಿದ ದಕ್ಷಿಣ ಆಫ್ರಿಕಾ, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. 549 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ, ಎರಡನೇ ಇನ್ನಿಂಗ್ಸ್‌ನಲ್ಲಿ ಊಟದ ವಿರಾಮಕ್ಕೂ ಮುನ್ನ 140 ರನ್‌ಗಳಿಗೆ ಆಲೌಟ್ ಆಗುವ ಮೂಲಕ 408 ರನ್‌ಗಳ ಹೀನಾಯ ಸೋಲು ಅನುಭವಿಸಿತು. ರನ್‌ಗಳ ಅಂತರದಲ್ಲಿ ಇದು ಭಾರತದ ಟೆಸ್ಟ್ ಇತಿಹಾಸದಲ್ಲಿಯೇ ಅತಿದೊಡ್ಡ ಸೋಲಾಗಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ 54 ರನ್ ಗಳಿಸಿದ ರವೀಂದ್ರ ಜಡೇಜಾ ಮಾತ್ರ ಭಾರತದ ಪರ ಹೋರಾಡಿದರು. ಐವರು ಮಾತ್ರ ಎರಡಂಕಿ ದಾಟಿದ ಇನ್ನಿಂಗ್ಸ್‌ನಲ್ಲಿ, 139 ಎಸೆತಗಳನ್ನು ಎದುರಿಸಿದ ಸಾಯಿ ಸುದರ್ಶನ್ 14 ರನ್ ಗಳಿಸಿದರೆ, ನಾಯಕ ರಿಷಭ್ ಪಂತ್ 13 ಮತ್ತು ವಾಷಿಂಗ್ಟನ್ ಸುಂದರ್ 16 ರನ್ ಗಳಿಸಿ ಔಟಾದರು.

ಅಂತಿಮ ದಿನದಾಟದ ಆರಂಭದಲ್ಲಿ ಭಾರತ 27-2 ಸ್ಕೋರ್ ಮಾಡಿತ್ತು. ಕೇವಲ 37 ರನ್ ನೀಡಿ ಆರು ವಿಕೆಟ್ ಪಡೆದ ಸೈಮನ್ ಹಾರ್ಮರ್ ಭಾರತವನ್ನು ಕಟ್ಟಿಹಾಕಿದರು. ಮಾರ್ಕೊ ಯಾನ್ಸನ್ ಎರಡು ವಿಕೆಟ್ ಪಡೆದರೆ, ಸೇನುರಾನ್ ಮುತ್ತುಸಾಮಿ ಮತ್ತು ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಪಡೆದರು. 2000ನೇ ಇಸವಿಯ ನಂತರ ದಕ್ಷಿಣ ಆಫ್ರಿಕಾ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿರುವುದು ಇದೇ ಮೊದಲು. ಭಾರತದ ಟೆಸ್ಟ್ ಇತಿಹಾಸದಲ್ಲಿ ಇದು ಮೂರನೇ ವೈಟ್‌ವಾಶ್ ಆಗಿದೆ. ಈ ಹಿಂದೆ 2000ರಲ್ಲಿ ದಕ್ಷಿಣ ಆಫ್ರಿಕಾ ಮತ್ತು 2024ರಲ್ಲಿ ನ್ಯೂಜಿಲೆಂಡ್ ಭಾರತವನ್ನು ತವರಿನಲ್ಲಿಯೇ ಕ್ಲೀನ್ ಸ್ವೀಪ್ ಮಾಡಿತ್ತು.

Category
ಕರಾವಳಿ ತರಂಗಿಣಿ