image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್​ ಕ್ರಮಾಂಕದಲ್ಲಿ ಭಾರತೀಯರ ಪ್ರಾಬಲ್ಯ

ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್​ ಕ್ರಮಾಂಕದಲ್ಲಿ ಭಾರತೀಯರ ಪ್ರಾಬಲ್ಯ

ದುಬೈ : ಅಂತಾರಾಷ್ಟ್ರೀಯ ಕ್ರಿಕೆಟ್​​ ಸಮಿತಿ ನೂತನ ಶ್ರೇಯಾಂಕ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಭಾರತೀಯ ಕ್ರಿಕೆಟಿಗರು ಭರ್ಜರಿ ಏರಿಳಿತ ಕಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ ಭರ್ಜರಿ ಶತಕ ಸಿಡಿಸಿದ ರಿಷಬ್​ ಪಂತ್​ ಟಾಪ್​​ 10 ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು,  ರನ್​ ಗಳಿಸಲು ಪರದಾಡಿದ ಹಿರಿಯ ಆಟಗಾರರಾದ ನಾಯಕ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಭಾರೀ ಇಳಿಕೆ ಕಂಡಿದ್ದಾರೆ.

ಚೆನ್ನೈನಲ್ಲಿ ನಡೆದ ಟೆಸ್ಟ್‌ನಲ್ಲಿ ಅಮೋಘ ಶತಕ ಸಿಡಿಸಿದ ರಿಷಬ್​ ಪಂತ್ 731 ಸಂಪಾದಿಸುವ ಮೂಲಕ ಆರನೇ ಸ್ಥಾನದಲ್ಲಿದ್ದರೆ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 751 ರೇಟಿಂಗ್​ನೊಂದಿಗೆ ಐದನೇ ಸ್ಥಾನಕ್ಕೇರಿದರು. ಭಾರತದ ನಾಯಕ ರೋಹಿತ್ ಶರ್ಮಾ ಎರಡು ಇನಿಂಗ್ಸ್​​ನಲ್ಲಿ ರನ್​ ಗಳಿಸದ ಕಾರಣ, ಐದು ಸ್ಥಾನ ಕುಸಿದು  ಹತ್ತರಲ್ಲಿದ್ದಾರೆ. ಸದ್ಯ ಅವರು 716 ರೇಟಿಂಗ್ ಹೊಂದಿದ್ದಾರೆ. ಇದಕ್ಕೂ ಮೊದಲು ಅವರು ಟಾಪ್​​ 5 ರಲ್ಲಿದ್ದರು. ಇನ್ನೊಬ್ಬ ಹಿರಿಯ ಆಟಗಾರ ವಿರಾಟ್​ ಕೊಹ್ಲಿ 5 ಸ್ಥಾನ ಕುಸಿದು ಟಾಪ್​ 10 ರಿಂದಲೇ ಹೊರಬಿದ್ದಿದ್ದಾರೆ. ಸದ್ಯ ಅವರು 709 ರೇಟಿಂಗ್​​ನೊಂದಿಗೆ ಶ್ರೇಯಾಂಕ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮೊದಲು ಟಾಪ್​​ 7ನೇ ಕ್ರಮಾಂಕದಲ್ಲಿದ್ದರು.

Category
ಕರಾವಳಿ ತರಂಗಿಣಿ