image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನವೆಂಬರ್ 23 ರಂದು ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಅಸ್ಮಿತಾ ಮಹಿಳೆಯರ ಕಿಕ್ ಬಾಕ್ಸಿಂಗ್

ನವೆಂಬರ್ 23 ರಂದು ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಅಸ್ಮಿತಾ ಮಹಿಳೆಯರ ಕಿಕ್ ಬಾಕ್ಸಿಂಗ್

ಮಂಗಳೂರು : ನವೆಂಬರ್ 23 ರಂದು ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ  ಅಸ್ಮಿತಾ ಮಹಿಳೆಯರ ಕಿಕ್ ಬಾಕ್ಸಿಂಗ್ ನಡೆಯಲಿದೆ ಎಂದು ದಕ್ಷಿಣ ಕನ್ನಡ ಕಿಕ್ ಬಾಕ್ಸಿಂಗ್ ಚೆರ್ಮನ್  ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.  ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ,  ಆಧುನಿಕ ಮಾರ್ಷಲ್ ಆರ್ಟ್ಸ್ ಕಲೆಯಾದ ಕಿಕ್ ಬಾಕ್ಸಿಂಗ್, ಜಪಾನಿನಲ್ಲಿ ಉಗಮವಾಗಿ ಯೂರೋಪ್ ಮತ್ತು ಅಮೇರಿಕದಲ್ಲಿ ಪ್ರಸಿದ್ಧವಾಯಿತು, ಈಗ ಇದು ಅಂತಾರಾಷ್ಟ್ರೀಯ ಒಲಂಪಿಕ್ ಅಸೋಸಿಯೇಷನ್ ಮಾನ್ಯತೆಯನ್ನು ಪಡೆದು ಇಂದು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದೆ. ಮುಂಬರುವ ದಿನಗಳಲ್ಲಿ ಒಲಿಂಪಿಕ್ ಸೇರ್ಪಡೆಯಾಗುವ ಕ್ರೀಡೆಗಳಲ್ಲಿ ಕಿಕ್ ಬಾಕ್ಸಿಂಗ್ ಮಂಚೂಣಿಯಲ್ಲಿರುವುದು ಗಮನಾರ್ಹ ವಿಷಯವಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ ಈ ಕ್ರೀಡೆಗೆ ಮಾನ್ಯತೆಯನ್ನು ನೀಡಿದೆ. ಈಗ ಈ ಕ್ರೀಡೆಯಲ್ಲಿರುವ ಯುವ ಪ್ರತಿಭೆಗಳನ್ನು ಗುರುತಿಸಿ ಕ್ರೀಡೆಯಲ್ಲಿ ಅವರ ಭವಿಷ್ಯವನ್ನು ರೂಪಿಸಲು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಖೇಲೋ ಇಂಡಿಯಾದ ಮುಖಾಂತರ ಹೆಣ್ಣು ಮಕ್ಕಳಿಗಾಗಿಯೇ ರಾಷ್ಟ್ರೀಯ ಮಟ್ಟದಲ್ಲಿ ಕಿಕ್ ಬಾಕ್ಸಿಂಗ್ ಕ್ರೀಡೆಯನ್ನು ಆಯೋಜಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಲು ಮೊದಲ ಹಂತದಲ್ಲಿ ರಾಜ್‌ಯ ಮಟ್ಟದ ನಂತರದಲ್ಲಿ ವಲಯ ಮಟ್ಟ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳನ್ನು ASMITA (Achieving Sports Milestone by Inspiring women Through Action) ಎಂಬ ಹೆಸರಿನಿಂದ ಆಯೋಜಿಸುತ್ತಿದೆ. ಈ ವರ್ಷದ ನಗರ/ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತ ಕ್ರೀಡಾಪಟುಗಳಿಗೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಖೇಲೋ ಇಂಡಿಯಾದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯನ್ನು ನಡೆಸುವ ಸುವರ್ಣವಕಾಶ ದಕ್ಷಿಣ ಕನ್ನಡ ಸಂಸ್ಥೆಯ ಪಾಲಿಗೆ ಒದಗಿಸುವುದು ನಮಗೆ ಬಹಳ ಸಂತೋಷದ ವಿಚಾರ. ರಾಜ್ಯದಲ್ಲಿ ಕೇವಲ 5 ವರ್ಷದಲ್ಲಿ ಬಹಳ ಉತ್ತಮವಾಗಿ ಈ ಕ್ರೀಡೆಯನ್ನು ಕಟ್ಟಿ ಬೆಳೆಸಿ ದೇಶದ ಅಗ್ರ 8 ಸ್ಥಾನದಲ್ಲಿ ನಮ್ಮ ರಾಜ್ಯ ತಂಡವನ್ನು ನಿಲ್ಲಿಸಿದ ಕೀರ್ತಿ  ಪೂಜಾ.ಡಿ ಇವರಿಗೆ ಸಲ್ಲುತ್ತದೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಈ ಕ್ರೀಡೆಯ ಸರ್ವತೋಮುಖ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷರಾದ ಸಂತೋಷ್ ಕೆ ಆಗರ್ವಾಲ್ ಇವರಿಗೆ ಸಂಸ್ಥೆಯ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇವೆ ಎಂದರು.

ರಾಜ್ಯದಲ್ಲಿ ಮಂಚೂಣಿಯಲ್ಲಿರುವ ತಂಡವಾಗಿ ದಕ್ಷಿಣ ಕನ್ನಡ ತಂಡವಿರುವುದು ನಮಗೂ ಬಹಳ ಹೆಮ್ಮೆಯ ವಿಷಯ. ಕಳೆದ 5 ವರ್ಷಗಳಲ್ಲಿ ನಮ್ಮ ಜಿಲ್ಲೆಯಿಂದ ಈ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪದಕ ವಿಜೇತರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶವನ್ನು ಸಂಸ್ಥೆಯ 3 ಕ್ರೀಡಾಪಟುಗಳು ಪ್ರತಿನಿಧಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿರುವುದು ನಮಗೆಲ್ಲ ಮತ್ತಷ್ಟು ಹೆಮ್ಮೆಯನ್ನು ತಂದಿದೆ. ಪ್ರಸ್ತುತ ರಾಜ್ಯಮಟ್ಟದ ಈ ಕ್ರೀಡಾಕೂಟ ಮಂಗಳೂರಿನ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ 23 ನವೆಂಬರ್ ಅದಿತ್ಯವಾರದಂದು ಜರಗಲಿರುವುದು. ಬೆಳಿಗ್ಗೆ 9 ಗಂಟೆಗೆ ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ವಿಧಾನಸಭೆಯ ಮಾನ್ಯ ಸಮಾಪ್ತಿಯಾದ ಜನಾಬ್ ಶ್ರೀ ಯು.ಟಿ ಖಾದರ್ ಅವರು ಉದ್ಘಾಟಿಸಲಿದ್ದು ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ಬಂಗಾರಪ್ಪನವರು ಘನ ಉಪಸ್ಥಿತಿಯನ್ನು ನೀಡಲಿದ್ದಾರೆ. ಫಾದರ್ ಮುಲ್ಲರ್ ಸಂಸ್ಥೆಯ ಆಡಳಿತಾಧಿಕಾರಿಗಳು ವಂ. ಫಾ ಮೈಕಲ್ ಸಂತುಮೇಯರ್ ಇವರು ಅಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲೆಯ ಸಂಸದರಾದ ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಮುಖ್ಯ ಪೋಲೀಸ್ ಆಯುಕ್ತರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ, ಅತಿಥಿಗಳಾಗಿ ಶಾಸಕರುಗಳಾದ ವೇದವ್ಯಾಸ ಕಾಮತ್ ಮತ್ತು ಉಮನಾಥ ಕೋಟ್ಯಾನ್, ಉದ್ದಿಮೆದಾರರಾದ ಡಾ.ಕೆ ಪ್ರಕಾಶ್ ಶೆಟ್ಟಿ, ಶ್ರೀ ಉದಯಚಂದ್ರ ಸುವರ್ಣ, ಖ್ಯಾತ ಶಿಕ್ಷಣ ತಜ್ಞರಾದ ಮೋಹನ್ ಆಳ್ವ, ಶ್ರೀ ಮಿಥುನ್ ರೈ, ಶ್ರೀ ರವಿಚಂದ್ರ ನಾಯಕ್, ಶ್ರೀ ಪ್ರದೀಪ್ ಡಿಸೋಜ, ಶ್ರೀ ಮಾದವ ಮಾವೇ ಮತ್ತು ಪೂಜಾ ಡಿ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾನು ಚೇರ್ಮನ್ ಸತ್ಯಜಿತ್ ಸುರತ್ಕಲ್ ವಹಿಸಿಕೂಳ್ಳಲಿದದ್ದೇನೆ. ದಿನಪೂರ್ತಿ ಸ್ಪರ್ಧೆಯ ಅವಧಿಯಲ್ಲಿ ನಮ್ಮ ಪ್ರಾರಂಭದ ದಿನಗಳಿಂದ ಇಲ್ಲಿಯವರೆಗೆ ಸಹಕರಿಸಿದ ಜಿಲ್ಲೆಯ ಖ್ಯಾತ ಉದ್ಯಮಿಗಳು, ಶಿಕ್ಷಣ ಕ್ಷೇತ್ರದ ಪ್ರಮುಖರು, ಸಮಾಜದ ಗಣ್ಯರು, ದೇಶವನ್ನು ಕಾಯ್ಕ ಯೋಧರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಿತಿನ್ ಎನ್ ಸುವರ್ಣ, ಪೂಜಾ ಡಿ, ಸಂಪತ್ ಕುಮಾರ್, ಶಿವಪ್ರಸಾದ್, ರಾಜೀಶ್ ಕೆ, ನಿರಂಜನ ಉಪಸ್ಥಿತರಿದ್ದರು.

 

 

Category
ಕರಾವಳಿ ತರಂಗಿಣಿ