image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೇವಲ 93 ರನ್‌ಗೆ ಆಲ್‌ಔಟ್‌ ಆಗಿ ಸೋತ ಭಾರತ

ಕೇವಲ 93 ರನ್‌ಗೆ ಆಲ್‌ಔಟ್‌ ಆಗಿ ಸೋತ ಭಾರತ

ಕೋಲ್ಕತ್ತಾ: ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಗೆಲ್ಲುವ ಫೇವರಿಟ್‌ ತಂಡವಾಗಿತ್ತು. ಗೌತಮ್‌ ಗಂಭೀರ್‌ ಸಲಹೆಯಂತೆ ಸ್ಪಿನ್‌ ಪಿಚ್‌ ಕೂಡ ಸಿದ್ಧವಾಗಿತ್ತಾದರೂ ಅದೇ ಭಾರತದ ಪಾಲಿಗೆ ಮುಳುವಾಯಿತು. ಭಾರತದ ಆಟಗಾರರು ದಕ್ಷಿಣ ಆಫ್ರಿಕಾ ಬೌಲರ್‌ಗಳಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಎದುರುತ್ತರ ನೀಡಲಾಗದೇ ಮಕಾಡೆ ಮಲಗಿದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 159 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 189 ರನ್‌ಗಳಿಗೆ ಆಲ್‌ಔಟ್‌ ಆಗಿ ಮೊದಲ ಇನ್ನಿಂಗ್ಸ್‌ನಲ್ಲಿ 30 ರನ್‌ಗಳ ಮುನ್ನಡೆ ಸಾಧಿಸಿತ್ತು. ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ 153 ರನ್‌ ಕಲೆಹಾಕಿದ ಭಾರತ ದಕ್ಷಿಣ ಆಫ್ರಿಕಾಗೆ 124 ರನ್‌ಗಳ ಗುರಿಯನ್ನು ನೀಡಿತ್ತು. ಈ ಸುಲಭ ಗುರಿಯನ್ನು ಬೆನ್ನಟ್ಟಲಾಗದ ಭಾರತ ಆಫ್ರಿಕಾ ಬೌಲಿಂಗ್‌ ದಾಳಿ ಮುಂದೆ ಮಂಕಾಗಿ ಕೇವಲ 93 ರನ್‌ಗಳಿಗೆ ಆಲ್‌ಔಟ್‌ ಆಗಿ 30 ರನ್‌ಗಳ ಹೀನಾಯ ಸೋಲನ್ನು ಕಂಡಿತು.

ಹೀಗೆ 124 ರನ್‌ಗಳ ಗುರಿಯನ್ನೂ ಸಹ ಚೇಸ್‌ ಮಾಡಲಾಗದೇ ಸೋತ ಭಾರತ ತಂಡದ ಪರಿಸ್ಥಿತಿ ಕಂಡು ತಂಡದ ಆಟಗಾರ ವಾಷಿಂಗ್ಟನ್‌ ಸುಂದರ್‌ ಸಪ್ಪೆ ಮುಖ ಹೊತ್ತುಕೊಂಡು ಪೆವಿಲಿಯನ್‌ನಲ್ಲಿ ತಲೆ ಚಚ್ಚಿಕೊಂಡು ತಲೆ ತಗ್ಗಿಸಿ ಕುಳಿತಿದ್ದಾರೆ. ಭಾರತ 124 ರನ್‌ಗಳ ಗುರಿಯನ್ನು ಬೆನ್ನಟ್ಟಲು ಮುಂದಾದಾಗ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 31 ರನ್‌ ಬಾರಿಸಿದ ವಾಷಿಂಗ್ಟನ್‌ ಸುಂದರ್‌ ತನ್ನ ಪಾಲಿನ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಆದರೆ ಇನ್ನುಳಿದ ಆಟಗಾರರ ವಿಫಲತೆಯಿಂದ ಗೆಲ್ಲಬಹುದಾಗಿದ್ದ ಪಂದ್ಯವನ್ನೂ ಸಹ ತಂಡ ಕೆಟ್ಟದಾಗಿ ಸೋಲುವಂತಾಗಿದೆ. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಸಹ 29 ರನ್‌ ಕಲೆಹಾಕಿದ್ದ ವಾಷಿಂಗ್ಟನ್‌ ಸುಂದರ್‌ ಎರಡೂ ಇನ್ನಿಂಗ್ಸ್‌ನಲ್ಲಿ ತಂಡದ ಪರ 50ಕ್ಕೂ ಎಸೆತಗಳನ್ನು ಎದುರಿಸಿದ ಏಕೈಕ ಆಟಗಾರನಾಗಿದ್ದಾರೆ.

Category
ಕರಾವಳಿ ತರಂಗಿಣಿ