ಮಂಗಳೂರು: ರಾಷ್ಟ್ರೀಯ ಓಪನ್/ರಾಪಿಡ್ ರೇಟೆಡ್ ಚೆನ್ ಪಂದ್ಯಾವಳಿ ಅಕ್ಟೋಬರ್ ತಿಂಗಳ 2 ಮತ್ತು 3ರಂದು ಮಂಗಳೂರು ಟೌನ್ ಹಾಲ್ ನಲ್ಲಿ 9 ರೌಂಡ್ ಗಳಲ್ಲಿ ನಡೆಯಲಿರುವ ಪಂದ್ಯಾಟವಾಗಿದೆ ಎಂದು ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಅದ್ಯಕ್ಷರಾದ ರಮೇಶ್ ಕೊಟೆ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಮ್ಮ ಜಿಲ್ಲೆಯಲ್ಲಿ ಚೆಸ್ ದಿನೇ ದಿನೇ ಬಹಳ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದ್ದು, ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಜಿಲ್ಲೆ ಹೊಂದಿದೆ. ಚೆಸ್ ಆಟದ ಬೆಳವಣಿಗೆಯ ಪೂರಕವಾಗಿ ನಾವು ಈ ಪಂದ್ಯಾಟವನ್ನು ಹಮ್ಮಿಕೊಂಡಿದ್ದು, ಇದರಲ್ಲಿ, ಬೇರೆ ಬೇರೆ ರಾಜ್ಯಗಳ ಆಟಗಾರರು ಅಲ್ಲದೇ, ಅಂತಾರಾಷ್ಟ್ರೀಯ ಮಟ್ಟದ ಆಟಗಾರರ ಸಹಿತ ಸುಮಾರು 400 ಆಟಗಾರರು ಭಾಗವಹಿಸುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ಮಂಗಳೂರು ನಗರ ಚೆನ್ ಆಟದಲ್ಲಿ/ಪಂದ್ಯಾವಳಿಯಲ್ಲಿ ನಮ್ಮ ದೇಶಕ್ಕೇ ತೆರೆದುಕೊಳ್ಳುತ್ತಾ, ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ ಹಾಗೂ ಉತ್ತಮ ಆಟಗಾರರನ್ನು ಪರಿಚಯಿಸುತ್ತಿದೆ. ಈ ಕಾರ್ಯಕ್ರಮ ಉದ್ಘಾಟನೆಯನ್ನು ಅಕ್ಟೋಬರ್ 2 ರಂದು MRPL ನ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀಸುದರ್ಶನ್.ರವರು ನೆರವೇರಿಸಲಿರುವರು.
ಮುಖ್ಯ ಅತಿಥಿಗಳಾಗಿ ಶ್ರೀ.ಅರವಿಂದ ಶಾಸ್ತ್ರಿ, KSCA ಜನರಲ್ ಸೆಕ್ರೆಟರಿ, ಹಾಗೂ ಶ್ರೀ. M.S ಗುರುರಾಜ್, ಅಧ್ಯಕ್ಷರು ಶ್ರೀಶಾ ಸೌಹಾರ್ದ ಸಹಕಾರ ಸಂಘ ಇವರು ಭಾಗವಹಿಸಲಿರುವರು.
ಅಲ್ಲದೇ, ತಾರೀಖು 3ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿMRPL ನ GGM ಶ್ರೀ.ಕ್ರಷ್ಣ ಹೆಗ್ಡೆ ಹಾಗೂ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಟೂರ್ನಿಯಲ್ಲಿ2.4 ಲಕ್ಷ ನಗದು ಬಹುಮಾನ.ಅಲ್ಲದೇ ಅಕ್ಟೋಬರ್ 3ರಂದು ಮಧ್ಯಾಹ್ನ ನಂತರ Blitz ಚೆಸ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ ವಿವಿಧ ವಿಭಾಗಗಳ ಟ್ರೋಫಿ ಜೊತೆಗೆ ಸುಮಾರು ನೂರೈವತ್ತು ಬಹುಮಾನಗಳಿರುತ್ತವೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಸುನೀಲ್ ಆಚಾರ್ ಗೌರವಾಧ್ಯಕ್ಷರು, ಶ್ರೀಮತಿ ವಾಣಿ ಎಸ್ ಪಣಿಕ್ಕರ್ ಉಪಾಧ್ಯಕ್ಷರು, ಶ್ರೀಮತಿ ಪೂರ್ಣಿಮಾ ಎಸ್ ಅಳ್ವಾ ಖಜಾಂಜಿ, ಶ್ರೀ ಸತ್ಯಪ್ರಸಾದ್ ಜತೆ ಕಾರ್ಯದರ್ಶಿ ಉಪಸ್ಥಿತರಿದ್ದರು.