image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಕೂಟ: ಮಹಿಳೆಯರ ಸಿಂಗಲ್ಸ್ ನಲ್ಲಿ ಇಶಿಕಾ ಜೈಸ್ವಾಲ್, ಪುರುಷರ ಸಿಂಗಲ್ಸ್ ನಲ್ಲಿ ಆರ್ ಸತೀಶ್ ಕುಮಾರ್ ವಿನ್ನರ್

ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಕೂಟ: ಮಹಿಳೆಯರ ಸಿಂಗಲ್ಸ್ ನಲ್ಲಿ ಇಶಿಕಾ ಜೈಸ್ವಾಲ್, ಪುರುಷರ ಸಿಂಗಲ್ಸ್ ನಲ್ಲಿ ಆರ್ ಸತೀಶ್ ಕುಮಾರ್ ವಿನ್ನರ್

ಮಂಗಳೂರು: ನಗರದ ನ್ಯೂ ಉರ್ವ ಇಂಡೋರ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಯೋನೆಕ್ಸ್  - ಸನ್ ರೈಸ್ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಬ್ಯಾಡ್ಮಿಂಟನ್ ಪಂದ್ಯಾಟದ ಎರಡನೇ ದಿನವಾದ ಬುಧವಾರ ನಡೆದ ಪಂದ್ಯಗಳಲ್ಲಿ ಮಹಿಳಾ ಸಿಂಗಲ್ಸ್ ನಲ್ಲಿ ಇಶಿಕಾ ಜೈಸ್ವಾಲ್ (ಯುಎಸ್ ಎ) ತಮ್ಮ ಎದುರಾಳಿ ನಿವೇತಾ ಮುತ್ತುಕುಮಾರ್ ಅವರನ್ನು 21-1, 21-13 ಸೆಟ್ ಗಳಿಂದ ಸೋಲಿಸಿ ಟಾಪ್ ಸೀಡ್ ಆಗಿ ಹೊರಹೊಮ್ಮಿದರು. ಆ ಮೂಲಕ 32 ರ ರೌಂಡ್ಸ್ ಗೆ ಅರ್ಹತೆ ಪಡೆದರು.

ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಆರ್ಯಮಾನ್ ಟಂಡನ್ ತಮ್ಮ ಎದುರಾಳಿ ಮಿಥುನ್ ಮಂಜುನಾಥ್ ಅವರನ್ನು 11-21, 21-14 ಮತ್ತು 21-17 ಸೆಟ್ ಗಳಿಂದ ಪರಾಜಯಗೊಳಿಸಿ 32ರ ರೌಂಡ್ಸ್ ಗೆ ಅರ್ಹತೆ ಪಡೆದರು.

ಪುರುಷರ ಸಿಂಗಲ್ಸ್ ನ ಇನ್ನೊಂದು ಪಂದ್ಯದಲ್ಲಿ ಭಾರತದ ಕೆವಿನ್ ತಂಗಮ್ ಅವರನ್ನು ತಮ್ಮದೇ ದೇಶದ ಎ. ಆನಂದಾಸ್ ರಾಜ್ ಕುಮಾರ್ ಅವರು 13-21, 10-21 ಸೆಟ್ ಗಳಿಂದ ಸೋಲಿಸಿದರು.

ಪುರುಷರ ಡಬಲ್ಸ್ ನಲ್ಲಿ ಟಾಪ್ ಸೀಡ್ ಆಗಿರುವ ಇ ಕೋಹ್ & ಕುಬೋ ಅವರು ಭಾರತದ ವಿ. ಮಾಂಡಲಿಕ & ಎಸ್ ತಂಬೋಲಿ ಅವರ ಎದುರು 21-16,  21-12 ರ ಸೆಟ್ ಗಳಿಂದ ಪರಾಜಯ ಅನುಭವಿಸಿದರು.

ಪುರುಷರ ಡಬಲ್ಸ್ ಎರಡನೇ ಪಂದ್ಯದಲ್ಲಿ ರಷ್ಯಾದ ರೋಡಿಯನ್ ಅಲಿಮೊವ್ ಮತ್ತು ಮ್ಯಾಕ್ಸಿಂ ಓಗ್ಲೋಬಿನ್ ಅವರು ಭಾರತದ ಎಸ್ ಗೋಲಾ & ಡಿ. ರಾವತ್ ಅವರ ಎದುರು 18-21, 18-21 ರ ಸೆಟ್ ಗಳಿಂದ ಗೆಲುವು ಸಾಧಿಸಿದರು.

ಪುರುಷರ ಸಿಂಗಲ್ಸ್ ನ ಮತ್ತೊಂದು ಪಂದ್ಯದಲ್ಲಿ ಭಾರತದ ಟಾಪ್ ಸೀಡ್ ಆರ್ ಸತೀಶ್ ಕುಮಾರ್ ಅವರು ಆರ್ ತಿರುಪತಿ ಅವರನ್ನು 21-16, 24-22 ಸೆಟ್ ಗಳಿಂದ ಮಣಿಸಿದರು.

ಪುರುಷರ ಡಬಲ್ಸ್ ನ ಮೂರನೇ ಪಂದ್ಯದಲ್ಲಿ ಭಾರತದ ಎ. ಮೊಹಾಂತಿ ಮತ್ತು ಪಥ ಅವರು ಮೊಹಮ್ಮದ್ ಮುನಾವರ್ ಮತ್ತು ಮೊಹಮದ್ ಮುನೀಸ್ (ಯುಎಇ) ಅವರನ್ನು 25-27, 21-16, 21-15 ರ ಸೆಟ್ ಗಳಿಂದ ಸೋಲಿಸಿದರು.

ಮಹಿಳೆಯರ ಡಬಲ್ಸ್ ನಲ್ಲಿ ಥಾಯ್ಲೆಂಡ್ ನ ಹಥಾಯ್ ತಿಪ್ ಮಜೀದ್ & ನಪಪಾಕೊರ್ನ್ ತುಂಗ್ಕಸ್ತಾನ್ ಅವರು ಹೃಷಾ ದುಬೆ ಮತ್ತು ರಿಧಿ ಕೌರ್ ಟೂರ್ ಅವರನ್ನು 21-11, 21-10 ರ ಸೆಟ್ ಗಳಿಂದ ಸೋಲಿಸಿದರು.

ಪುರುಷರ ಡಬಲ್ಸ್ ನ ಮತ್ತೊಂದು ಪಂದ್ಯದಲ್ಲಿ ಥಾಯ್ಲೆಂಡ್ ನ ತನಾವಿನ್ ಮ್ಯಾಡೀ ಮತ್ತು ಫಟ್ಟಿಮೆತ್ ಸೆಮ್ಕುಂಟಾ ಅವರ ಜೋಡಿ ಭಾರತದ ಡಿಂಕು ಸಿಂಗ್ ಕೊನ್ತೊಜಮ್ & ಅಮಾನ್ ಮೊಹಮದ್ ಅವರ ಜೋಡಿಯನ್ನು 13-21, 21-16, ಮತ್ತು 21-14 ರ ಸೆಟ್ ಗಳಿಂದ ಪರಾಭವಗೊಳಿಸಿತು.

12 ದೇಶಗಳ ಕ್ರೀಡಾಪಟುಗಳು ಭಾಗಿ

ಏಷ್ಯಾ, ಯುರೋಪ್ ಮತ್ತು ಆಫ್ರಿಕಾ ಖಂಡಗಳ ಒಟ್ಟು 12 ದೇಶಗಳಿಂದ ಆಯ್ದ ಕ್ರೀಡಾಪಟುಗಳು ಪಂದ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ (DKBA) ಈ ಪ್ರತಿಷ್ಠಿತ ಕ್ರೀಡಾಕೂಟವನ್ನು ಆಯೋಜಿಸಿದೆ.ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯುತ್ತಿರುವುದು ಕರಾವಳಿಗೆ ವಿಶೇಷ ಹೆಮ್ಮೆ ತಂದಿದೆ.ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್, ಪುರುಷರ ಡಬಲ್ಸ್, ಮಹಿಳೆಯರ ಡಬಲ್ಸ್  ಮತ್ತು ಮಿಕ್ಸೆಡ್ ಡಬಲ್ಸ್ ವಿಭಾಗಗಳಲ್ಲಿ ಪಂದ್ಯಾಟಗಳು ನಡೆಯುತ್ತಿವೆ. ವಿಜೇತರಿಗೆ 25 ಸಾವಿರ ಡಾಲರ್ ಗಳ  ಬಹುಮಾನ ನೀಡಲಾಗುತ್ತಿದೆ.ಈ ಪ್ರತಿಷ್ಠಿತ ಪಂದ್ಯಾಟದಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಹಬ್ ಆಗಿ ಗುರುತಿಸಲ್ಪಟ್ಟಿದೆ.

Category
ಕರಾವಳಿ ತರಂಗಿಣಿ