image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇತ್ತೀಚಿಗೆ ಕಿಂಗ್ ಎಸೆದಿದ್ದ ಹಿಕರು ನಕಮೂರ ಮಣಿಸಿದ ಭಾರತದ ಗುಕೇಶ್ : ಗುಕೇಶ್ ನಡೆಗೆ ವ್ಯಾಪಕ ಶ್ಲಾಘನೆ

ಇತ್ತೀಚಿಗೆ ಕಿಂಗ್ ಎಸೆದಿದ್ದ ಹಿಕರು ನಕಮೂರ ಮಣಿಸಿದ ಭಾರತದ ಗುಕೇಶ್ : ಗುಕೇಶ್ ನಡೆಗೆ ವ್ಯಾಪಕ ಶ್ಲಾಘನೆ

ಸೇಂಟ್ ಲೂಯಿಸ್: ಈ ಹಿಂದೆ ಭಾರತದ ಗುಕೇಶ್ ವಿರುದ್ಧ ಗೆದ್ದು ಅವರ 'ಕಿಂಗ್' ಅನ್ನು ಎಸೆದು ಸಂಭ್ರಮಿಸಿದ್ದ ಅಮೆರಿಕದ ಗ್ರ್ಯಾಂಡ್‌ ಮಾಸ್ಟರ್‌ ಹಿಕಾರು ನಕಮುರಾ ವಿರುದ್ಧ ಗೆಲುವು ಸಾಧಿಸಿ ಸೌಮ್ಯ ಸಂಭ್ರಮದ ಮೂಲದ ಭಾರತದ ಆಟಗಾರ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಮೆರಿಕದ ಸೆಂಟ್ ಲೂಯಿಸ್ ನಲ್ಲಿ ನಡೆದ ಕ್ಲಚ್ ಚೆಸ್ ಚಾಂಪಿಯನ್ಸ್ ಶೋಡೌನ್ 2025 ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಭಾರತದ ಗುಕೇಶ್ ಅಮೆರಿಕದ ಗ್ರ್ಯಾಂಡ್‌ ಮಾಸ್ಟರ್‌ ಹಿಕಾರು ನಕಮುರಾ ವಿರುದ್ಧ ರೋಚಕ ಗೆಲುವು ಸಾಧಿಸಿದರು. ಹಿಕಾರು ನಕಮುರಾ ವಿರುದ್ಧ ಗುಕೇಶ್ ಕ್ಷಿಪ್ರ ಸ್ವರೂಪದಲ್ಲಿ ನಿರ್ಣಾಯಕ ಗೆಲುವು ಸಾಧಿಸಿದರು. ಪಂದ್ಯದುದ್ದಕ್ಕೂ ರೋಚಕತೆಯ ಹೊರತಾಗಿಯೂ ಸಂಯಮ ಕಾಯ್ದುಕೊಂಡ ಗುಕೇಶ್ ಅಂತಿಮವಾಗಿ ನಕಮುರಾ ವಿರುದ್ಧ ವಿರೋಚಿತ ಜಯ ಸಾಧಿಸಿದರು.

ಈ ಪಂದ್ಯದಲ್ಲಿ ಹಿಕಾರು ನಕಮುರಾ ತಮ್ಮ ಸೋಲು ಖಚಿತವಾಗುತ್ತಲೇ ಗುಕೇಶ್ ಗೆ ಹಸ್ತಲಾಘವ ಮಾಡಿ ಎದ್ದು ಹೊರಟು ಹೋದರು. ಆದರೆ ಕಳೆದ ಪಂದ್ಯದಲ್ಲಿನ ವಿವಾದ ಹೊರತಾಗಿಯೂ ಗುಕೇಶ್ ಮಾತ್ರ ಸಂಯಮ ಕಳೆದುಕೊಳ್ಳದೇ ನಗುತ್ತಲೇ ಕಳುಹಿಸಿಕೊಟ್ಟರು. ಇನ್ನು ಪಂದ್ಯ ಮುಕ್ತಾಯದ ಬಳಿಕ ಗುಕೇಶ್ ನಡೆದುಕೊಂಡ ರೀತಿ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಕಮುರಾ ಸೋಲಿನಿಂದ ಎದ್ದು ಹೋರಟ ಬಳಿಕ ಗುಕೇಶ್ ಕೂಡ ಎದ್ದು ಹೊರಡಬಹುದಿತ್ತು. ಆದರೆ ಗುಕೇಶ್ ಅಲ್ಲಿಯೇ ಇದ್ದು ಎಲ್ಲ ಕಾಯಿನ್ ಗಳನ್ನು ಮತ್ತೆ ಚದುರಂಗದ ಬೋರ್ಡ್ ಮೇಲೆ ಜೋಡಿಸಿ ಸಹಾಯಕರಿಗೆ ನೆರವು ನೀಡಿದರು. ಇದು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

ಈ ಹಿಂದೆ ಅಂತಾರಾಷ್ಟ್ರೀಯ ಚೆಸ್ ಕ್ರೀಡಾಕೂಟದಲ್ಲಿ ಭಾರತದ ಗುಕೇಶ್ ವಿರುದ್ಧ ಗೆದ್ದ ಬಳಿಕ ಅಮೆರಿಕದ ಹಿಕಾರು ನಕಮುರಾ ಗುಕೇಶ್ ರ ಕಿಂಗ್ ಎಸೆದು ವಿಲಕ್ಷಣವಾಗಿ ಸಂಭ್ರಮಿಸಿದ್ದರು. ಅಂದು ಟೆಕ್ಸಾಸ್ ನ ಆರ್ಲಿಂಗ್ಟನ್‌ನಲ್ಲಿ ನಡೆದ 'ಚೆಕ್‌ಮೇಟ್‌' ಟೂರ್ನಿಯ ಮೊದಲ ಸುತ್ತಿನಲ್ಲಿ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತದ ವಿರುದ್ಧ ಅಮೆರಿಕ ಕ್ಲೀನ್‌ ಸ್ವೀಪ್‌ ಮಾಡಿದೆ. ಆದರೆ, ಈ ಗೆಲುವನ್ನು ಅಮೆರಿಕದ ಗ್ರ್ಯಾಂಡ್‌ ಮಾಸ್ಟರ್‌ ಹಿಕಾರು ನಕಮುರಾ ಸಂಭ್ರಮಿಸಿದ ರೀತಿ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

Category
ಕರಾವಳಿ ತರಂಗಿಣಿ