image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರೈಮ್‌ ವಾಲಿಬಾಲ್‌ ಲೀಗ್‌ನ ನಾಲ್ಕನೇ ಆವೃತ್ತಿಯ ಚಾಂಪಿಯನ್‌ ಆದ ಬೆಂಗಳೂರು ಟಾರ್ಪಿಡೋಸ್

ಪ್ರೈಮ್‌ ವಾಲಿಬಾಲ್‌ ಲೀಗ್‌ನ ನಾಲ್ಕನೇ ಆವೃತ್ತಿಯ ಚಾಂಪಿಯನ್‌ ಆದ ಬೆಂಗಳೂರು ಟಾರ್ಪಿಡೋಸ್

ಹೈದರಾಬಾದ್‌: ಬೆಂಗಳೂರು ಟಾರ್ಪಿಡೋಸ್‌ ತಂಡವು ನಡೆದ ಫೈನಲ್‌ ಪಂದ್ಯದಲ್ಲಿ ಮುಂಬೈ ಮೀಟಿಯರ್ಸ್ ತಂಡವನ್ನು ಮಣಿಸಿ ಪ್ರೈಮ್‌ ವಾಲಿಬಾಲ್‌ ಲೀಗ್‌ನ ನಾಲ್ಕನೇ ಆವೃತ್ತಿಯ ಚಾಂಪಿಯನ್‌ ಆಯಿತು. ಇಲ್ಲಿನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಟಾರ್ಪಿಡೋಸ್‌ ತಂಡವು 15-13, 16-4, 15-13ರಿಂದ ಮೀಟಿಯರ್ಸ್‌ ತಂಡವನ್ನು ಸೋಲಿಸಿತು. 2023ರಲ್ಲಿ ರನ್ನರ್‌ಅಪ್‌ ಆಗಿದ್ದೇ ಅದರ ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು. ಆ ಆವೃತ್ತಿಯಲ್ಲಿ ಹೈದ್ರಾಬಾದ್‌ ಡಿಫೆಂಡರ್ಸ್‌ಗೆ ಪ್ರಶಸ್ತಿ ಒಲಿದಿತ್ತು. ಈ ಬಾರಿಯ ಫೈನಲ್‌ನಲ್ಲಿ ಮುಂಬೈ ಆರಂಭಿಕ ಮತ್ತು ಕೊನೇ ಸೆಟ್‌ನಲ್ಲಿ ಉತ್ತಮ ಪೈಪೋಟಿ ನೀಡಿತು. ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದ ಎರಡೂ ತಂಡಗಳು ಎಚ್ಚರಿಕೆಯಿಂದ ಆಟವನ್ನು ಪ್ರಾರಂಭಿಸಿದವು. ಪೀಟರ್‌ ಆಲ್ಸ್ಟಾಡ್‌ ಅವರು ಓಸ್ಟ್ವಿಕ್‌ ಜೋಯಲ್‌ ಬೆಂಜಮಿನ್‌ ಅವರನ್ನು ತಡೆದರೆ, ಶುಭಂ ಚೌಧರಿ ಮೇಲೆ ಜಿಷ್ಣು ಅವರ ಬ್ಲಾಕ್‌ನೊಂದಿಗೆ ಬೆಂಗಳೂರು ಮತ್ತೆ ಘರ್ಜಿಸಿತು. ಸೇತುವಿನ ಆಕರ್ಷಕ ಸರ್ವಿಸ್‌ನಿಂದ ಬೆಂಗಳೂರು ಮುನ್ನಡೆ ಸಾಧಿಸಿತು. ಈ ಮಧ್ಯೆ, ಮೆಟಿಯೋರ್ಸ್‌ ದಿಟ್ಟ ಪ್ರತಿರೋಧ ನೀಡಿದರೂ ಬೆಂಗಳೂರು ತಂಡದ ನಾಯಕ ಮತ್ತು ಸೆಟ್ಟರ್‌ ಮ್ಯಾಟ್‌ ವೆಸ್ಟ್‌ ಅವರ ಅನುಭವದ ಆಟ ಟಾರ್ಪಿಡೋಸ್‌ಗೆ ಮೊದಲ ಸೆಟ್‌ ಗೆಲ್ಲಲು ಸಹಾಯ ಮಾಡಿತು.

Category
ಕರಾವಳಿ ತರಂಗಿಣಿ