ಅಡಿಲೇಡ್: ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2 - 0 ಅಂತರದ ಮುನ್ನಡೆ ಕಂಡು ಸರಣಿ ಕೈವಶಪಡಿಸಿಕೊಂಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 264 ರನ್ ಕಲೆಹಾಕಿ ಆಸ್ಟ್ರೇಲಿಯಾಗೆ ಗೆಲ್ಲಲು 265 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 46.2 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಕಲೆಹಾಕಿತು. ಭಾರತದ ಇನ್ನಿಂಗ್ಸ್: ರೋಹಿತ್ ಶರ್ಮಾ 73 ರನ್ ಬಾರಿಸಿದರೆ, ಗಿಲ್ 9, ವಿರಾಟ್ ಕೊಹ್ಲಿ ಡಕ್‌ಔಟ್, ಅಕ್ಷರ್ ಪಟೇಲ್ 44, ಕೆಎಲ್ ರಾಹುಲ್ 11, ವಾಷಿಂಗ್ಟನ್ ಸುಂದರ್ 12, ನಿತಿಶ್ ಕುಮಾರ್ ರೆಡ್ಡಿ 8, ಅರ್ಷ್‌ದೀಪ್ ಸಿಂಗ್ 13, ಅಂತಿಮ ಹಂತದಲ್ಲಿ ಬೌಂಡರಿ ಬಾರಿಸಿ ಅಬ್ಬರಿಸಿದ ಹರ್ಷಿತ್ ರಾಣಾ ಅಜೇಯ 24 ಹಾಗೂ ಮೊಹಮ್ಮದ್ ಸಿರಾಜ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಆಸ್ಟ್ರೇಲಿಯಾ ಪರ ಆಡಂ ಜಂಪಾ 4 ವಿಕೆಟ್, ಕ್ಷೇವಿಯರ್ ಬಾರ್ಟ್ಲೆಟ್ 3 ವಿಕೆಟ್ ಹಾಗೂ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಪಡೆದರು. ಆಸ್ಟ್ರೇಲಿಯಾ ಇನ್ನಿಂಗ್ಸ್: ಮಿಚೆಲ್ ಮಾರ್ಷ್ 11, ಟ್ರಾವಿಸ್ ಹೆಡ್ 28, ಮಾಥ್ಯೂ ಶಾರ್ಟ್ 74, ಮ್ಯಾಟ್ ರೆನ್‌ಶಾ 30, ಅಲೆಕ್ಸ್ ಕ್ಯಾರಿ 9, ಮಿಚೆಲ್ ಓವನ್ 36, ಕ್ಷೇವಿಯರ್ ಬಾರ್ಟ್ಲೆಟ್ 3, ಮಿಚೆಲ್ ಸ್ಟಾರ್ಕ್ 4, ಕೂಪರ್ ಕಾನಲಿ ಅಜೇಯ 61 ರನ್ ಹಾಗೂ ಯಾವುದೇ ರನ್ ಗಳಿಸದ ಆಡಂ ಜಂಪಾ ಅಜೇಯರಾಗಿ ಉಳಿದರು. ಭಾರತದ ಪರ ಅರ್ಷ್‌ದೀಪ್ ಸಿಂಗ್, ಹರ್ಷಿತ್ ರಾಣಾ ಹಾಗೂ ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.