image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯ ಮಟ್ಟದ ಮುಕ್ತ ಚೆಸ್ ಪಂದ್ಯಕ್ಕೆ ಚಾಲನೆ ನೀಡಿದ ಭಾಸ್ಕರ್ ರೈ ಕಟ್ಟ

ರಾಜ್ಯ ಮಟ್ಟದ ಮುಕ್ತ ಚೆಸ್ ಪಂದ್ಯಕ್ಕೆ ಚಾಲನೆ ನೀಡಿದ ಭಾಸ್ಕರ್ ರೈ ಕಟ್ಟ

 ಮಂಗಳೂರು :  ದ .ಕ ಜಿಲ್ಲಾ  ಚೆಸ್ ಅಸೋಸಿಯೇಶನ್  ( ರಿ )  ವತಿಯಿಂದ 2 ದಿನಗಳ ಕಾಲ ನಡೆಯುವ  ಕರ್ನಾಟಕ  ರಾಜ್ಯ  ಮುಕ್ತ ಫಿಡೆ  ರೇಟೆಡ್ ರಾಪಿಡ್  ಮತ್ತು ಬ್ಲಿಟ್ಜ್  ಚೆಸ್  ಚಾಂಪಿಯನ್ ಶಿಪ್ -2025 ಮಂಗಳೂರಿನಲ್ಲಿ  ಕುದ್ಮಲ್ ರಂಗರಾವ್  ಪುರ  ಭವನ ದಲ್ಲಿ ಶನಿವಾರ  ಉದ್ಘಾಟನೆ ಗೊಂಡಿತು.  ರೋಟರಿ ಕ್ಲಬ್  ಮಂಗಳೂರು ಸೆಂಟ್ರಲ್ ನ  ಅಧ್ಯಕ್ಷ ರಾದ  ಭಾಸ್ಕರ್ ರೈ  ಕಟ್ಟ  ಉದ್ಘಾಟಿಸಿ ಮಾತನಾಡಿ,  ಚೆಸ್  ಅಂದರೆ  ಕೇವಲ  ಆಟವಲ್ಲ   ಅದು  ಒಂದು  ಆಲೋಚನಾ ಶಕ್ತಿಯ ಕಲೆಯಾಗಿದೆ. ಮಹಾಭಾರತದ  ಕಾಲದ  ಚದುರಂಗ  ಆಟವನ್ನು ನಾವು  ನೆನಪಿಸಿಕೊಳ್ಳಬಹುದು.

ಅಲ್ಲಿ  ದಾಳಗಳನ್ನು  ಉರುಳಿಸುವ  ಮೂಲಕ  ಆಟ  ನಡೆಯುತ್ತಿತ್ತು.  ಮೋಸ  ದಾಟ ನಡೆಯುವ ಸಾಧ್ಯತೆ ಇತ್ತು  ಆದರೆ  ಚೆಸ್  ಅಂದರೆ  ಸಮ ಬಲದ  ಆಟ . ಎರಡೂ ತಂಡಗಳಲ್ಲಿ  ಸಮ  ಬಲದ  ಸೈನ್ಯ.  ಕುದುರೆ,  ಆನೆ  , ಮಂತ್ರಿ  ಸೈನಿಕರ ಮೂಲಕ  ರಾಜನನ್ನು  ಚೆಕ್ ಮೇಟ್  ಮಾಡಿ ಕಟ್ಟಿ ಹಾಕುವ  ಅಥವಾ  ಬಂಧಿಸುವುದು.  ಇಲ್ಲಿ  ಶಕ್ತಿ  ಪ್ರದರ್ಶನ ಇಲ್ಲ.  ಕೇವಲ  ಮೈಂಡ್‌ಗೇಮ್. ಇಲ್ಲಿ  ದೈಹಿಕ  ಶಕ್ತಿ  ಪ್ರದರ್ಶನಕ್ಕೆ ಅವಕಾಶ  ಇಲ್ಲ.  ಭೌತಿಕ  ಬಲ,  ಚಿಂತನೆ  , ಆಲೋಚನ  ಶಕ್ತಿ  ಯಿಂದ ಎದುರಾಳಿಯನ್ನು  ಹೆಣೆಯುವ ಕಾರ್ಯ ಕ್ಷಮತೆ.  ಇಲ್ಲಿ  ಯಾರೂ  ಯಾರ  ಜತೆ ಯೂ ಆಡಬಹುದು.  ಹತ್ತರ  ಬಾಲಕ  80ರ ವೃದ್ಧ ರೂ  ಆಡಬಹುದು.  ಹೆಣ್ಣು  ಗಂಡೂ  ಆಡಬಹುದು. ಪಾಶ್ಚಾತ್ಯರೆ  ಹೆಚ್ಚು   ಪ್ರಧಾನ್ಯತೆ ಹೊಂದಿದ್ದ  ಚೆಸ್ ಗೆ  ಭಾರತದಲ್ಲಿ  ಮಾನ್ಯತೆ  ಗಳಿಸಿಕೊಟ್ಟವರು 5 ಬಾರಿಯ  ವಿಶ್ವ ಚಾಂಪಿಯನ್  ವಿಶ್ವನಾಥನ್ ಆನಂದ್.  ಆ ನಂತರ  ದಲ್ಲಿ  ಕೊನೆರು ಹಂಪಿ ಮೊದಲಾದವರು,

ಗ್ರಾಂಡ್ ಮಾಸ್ಟರ್  ಆಗಿ  ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡ ರು. ಇತ್ತೇಚಿನ ದಿನಗಳಲ್ಲಿ  ಯುವ  ಪ್ರತಿಭೆ  ಗುಕೇಶ್ ರಂತಹ ವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಛಾಪನ್ನು ಮೂಡಿ ಸಿದರು ಎಂದು  ರೈ ಯವರು  ಹೇಳಿದರು.  ಈ  ಸಂದರ್ಭದಲ್ಲಿ  ರಾಜ್ಯದಲ್ಲೇ  ಅತಿ ಹೆಚ್ಚು   ಚೆಸ್  ಪಂದ್ಯಾವಳಿ  ಗಳನ್ನು  ಸಂಘಟಿಸಿ. ಪ್ರಶಸ್ತಿ ಯನ್ನು  ಗಳಿಸಿದ  ದ ಕ ಜಿಲ್ಲಾ  ಚೆಸ್  ಅಸೋಸಿಯೇಶನ್  ನ ಸಂಘಟನೆಯನ್ನು ಶ್ಲಾಘಿಸಿದರು.   

ಸಮಾರಂಭದಲ್ಲಿ  ದ.ಕ ಜಿಲ್ಲಾ  ಚೆಸ್  ಅಸೋಸಿಯೇಷನ್  ನ  ಅಧ್ಯಕ್ಷ  ಸುನೀಲ್  ಆಚಾರ್,  ಅಧ್ಯಕ್ಷ ತೆ ವಹಿಸಿದ್ದರು.   ದ.ಕ  ಚೆಸ್  ಅಧ್ಯಕ್ಷೆ   ಡಾ. ಅಮರ  ಶ್ರೀ  ಅಮರ್ ನಾಥ  ಶೆಟ್ಟಿ  ಸ್ವಾಗತಿಸಿದರು.  ರಾಜ್ಯ ಚೆಸ್  ಅಸೋಸಿಯೇಷನ್ ನ  ಉಪಾಧ್ಯಕ್ಷ  ರಮೇಶ್  ಕೋಟೆ ಹಾಗು ಕರ್ನಾಟಕ  ರಾಜ್ಯ ಚೆಸ್  ಅಸೋಸಿಯೇಷನ್ ನ  ಮಂಜುನಾಥ್  ಆಚಾರ್,

ಸಲಹೆಗಾರ  ಸಾಕ್ಷಾತ್, ಉಪಾಧ್ಯಕ್ಷ  ನಾರಾಯಣ್ ಎಲ್,   ಮೊದಲಾದವರ  ಉಪಸ್ಥಿತರಿದ್ದರು. ಉಪಾಧ್ಯಕ್ಷೆ  ವಾಣಿ  ಯಸ್  ಪಣಿಕ್ಕರ್ ನಿರ್ವಹಿಸಿದರು.  ಇದೇ ಸಂದರ್ಭದಲ್ಲಿ  ವಿಶೇಷ  ಮಕ್ಕಳ  ವಿಭಾಗದ  ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಗುರುತಿಸಿ ಕೊಂಡಿರುವ ಬಂಟ್ವಾಳ ತಾಲೂಕಿನ  ಕುಮಾರಿ ಯಶಸ್ವಿಯನ್ನು  ವೇದಿಕೆಯಲ್ಲಿ ಗೌರವಿಸಲಾಯಿತು.

Category
ಕರಾವಳಿ ತರಂಗಿಣಿ