image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಷ್ಟ್ರೀಯ ಈಜು ಕೂಟ: ಆನಂದ ಅಮೀನ್ ಗೆ 4 ಚಿನ್ನ

ರಾಷ್ಟ್ರೀಯ ಈಜು ಕೂಟ: ಆನಂದ ಅಮೀನ್ ಗೆ 4 ಚಿನ್ನ

ಮಂಗಳೂರು:  ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಲಗಿರಿಯ ಒಲಿಂಪಿಯನ್ ಮೆಹಬೂಬ್ ಷಂಷೇರ್ ಖಾನ್ ಈಜುಕೊಳದಲ್ಲಿ ನಡೆದ ರಾಷ್ಟ್ರೀಯ ಈಜು ಕೂಟದಲ್ಲಿ ಆನಂದ ಅಮೀನ್ ಬೆಂಗ್ರೆ ನಾಲ್ಕು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಮಾಸ್ಟರ್ಸ್ ಅಕ್ವೆಟಿಕ್ ಫೆಡರೇಶನ್ ಅ.11ಮತ್ತು 12 ರಂದು ವಯೋವಿಭಾಗಳಲ್ಲಿ ಹಿರಿಯರ ರಾಷ್ಟ್ರೀಯ ಈಜು ಕೂಟ ಆಯೋಜಿಸಿತ್ತು. ಉತ್ತಮ ಕುಸ್ತಿ ಪಟು ಆಗಿರುವ ಆನಂದ ಅಮೀನ್ ಅವರು 50ಮೀಟರ್,  25 ಮೀಟರ್ ಫ್ರೀ ಸ್ಟೈಲ್ 50 ಮತ್ತು 25 ಮೀಟರ್ ಬ್ರೆಸ್ಟ್ ಸ್ಟ್ರೋಕ್  ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡು ಅಂತರಾಷ್ಟ್ರೀಯ ಮಾಸ್ಟರ್ಸ್ ಈಜು ಕೂಟಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಇವರು ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು, ಮೂಲತ: ಬೆಂಗ್ರೆ ನಿವಾಸಿಯಾಗಿದ್ದಾರೆ.

Category
ಕರಾವಳಿ ತರಂಗಿಣಿ