image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕ್ರಿಕೆಟಿಗ ರಿಂಕು ಸಿಂಗ್‌ಗೆ 5 ಕೋಟಿ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ದಾವೂದ್ ಗ್ಯಾಂಗ್.!

ಕ್ರಿಕೆಟಿಗ ರಿಂಕು ಸಿಂಗ್‌ಗೆ 5 ಕೋಟಿ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ದಾವೂದ್ ಗ್ಯಾಂಗ್.!

ಹೈದರಬಾದ್ : ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಂಕು ಸಿಂಗ್ ಅವರಿಗೆ ಭೂಗತ ಲೋಕದಿಂದ ಬೆದರಿಕೆ ಕರೆಗಳು ಬಂದಿವೆ ಎಂದು ವರದಿಯಾಗಿದ್ದು, ಡಿ-ಕಂಪನಿ ಎಂದು ಕರೆಯಲ್ಪಡುವ ಕುಖ್ಯಾತ ದಾವೂದ್ ಇಬ್ರಾಹಿಂ ಗ್ಯಾಂಗ್ 5 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಫೆಬ್ರವರಿ ಮತ್ತು ಏಪ್ರಿಲ್ 2025 ರ ನಡುವೆ ರಿಂಕು ಸಿಂಗ್ ಅವರಿಗೆ 5 ಕೋಟಿ ನೀಡುವಂತೆ ಮೂರು ಬಾರಿ ದಾವೂದ್ ಇಬ್ರಾಹಿಂ ಗ್ಯಾಂಗ್ ನಿಂದ ಬೆದರಿಕೆ ಬಂದಿತ್ತು ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಮೊಹಮ್ಮದ್ ದಿಲ್ಶಾದ್ ಮತ್ತು ಮೊಹಮ್ಮದ್ ನವೀದ್ ಎಂದು ಗುರುತಿಸಲಾಗಿದೆ. ದಿವಂಗತ ಮಾಜಿ ಶಾಸಕ ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ ಸಿದ್ದಿಕಿ ಅವರಿಗೆ 10 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದಕ್ಕಾಗಿ ವೆಸ್ಟ್ ಇಂಡೀಸ್‌ನಲ್ಲಿ ಬಂಧಿಸಿ ಆಗಸ್ಟ್ 1 ರಂದು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು. ಇದೀಗ ಅವರನ್ನು ವಿಚಾರಣೆ ನಡೆಸಿದಾಗ ಅವರಲ್ಲಿ ಒಬ್ಬರು ರಿಂಕು ಸಿಂಗ್‌ಗೆ ಸುಲಿಗೆ ಬೇಡಿಕೆ ಇಡಲು ಕರೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದ ಅಲಿಗಢದ ಸಾಮಾನ್ಯ ಹಿನ್ನೆಲೆಯಿಂದ ಬಂದ ರಿಂಕು, ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಮೈದಾನದ ಹೊರಗೆ ಸವಾಲುಗಳನ್ನು ಎದುರಿಸಿದ್ದಾರೆ. ಇತ್ತೀಚೆಗೆ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಿಂಗ್, ಖ್ಯಾತಿ ಹೆಚ್ಚಾದಂತೆ ಈಗ ಭದ್ರತಾ ಸಮಸ್ಯೆಗಳ ಬಗ್ಗೆಯೂ ಕಾಳಜಿ ವಹಿಸಿದ್ದಾರೆ. ಸ್ಟಾರ್ ಫಿನಿಷರ್ ಭಾರತ ಪರ ಒಟ್ಟು 54 ಟಿ20 ಪಂದ್ಯಗಳನ್ನು ಆಡಿದ್ದು, ಮೆನ್ ಇನ್ ಬ್ಲೂ ಪರ 550 ರನ್ ಗಳಿಸಿದ್ದಾರೆ. ರಿಂಕು ಅವರ ಸ್ಟೈಕ್ ರೇಟ್ 161.77 ಮತ್ತು ಸರಾಸರಿ 42.31 ಇದೆ. ಇನ್ನೂ ಐಪಿಎಲ್ ಅಂಕಿಅಂಶಗಳನ್ನು ನೋಡುವುದಾದರೆ ಕೋಲ್ಕತ್ತಾ ನೈಟ್ ರೈಡರ್ಸ್ ಪರ 58 ಪಂದ್ಯಗಳನ್ನು ಆಡಿದ ಅವರು 1,099 ರನ್ ಗಳಿಸಿದ್ದಾರೆ. ರಿಂಕು 2024 ರಲ್ಲಿ ಕೆಕೆಆರ್‌ನ ಐಪಿಎಲ್ ವಿಜೇತ ತಂಡದ ಭಾಗವಾಗಿದ್ದರು. ಇತ್ತೀಚೆಗೆ ರಿಂಕು ಗೆಲುವಿನ ರನ್ ಗಳಿಸುವ ಮೂಲಕ ಟೀಮ್ ಇಂಡಿಯಾ ಏಷ್ಯಾ ಕಪ್ ಗೆಲ್ಲಲು ಸಹಾಯ ಮಾಡಿದರು. ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಭಾರತದ ಫಿನಿಷರ್ ಅದ್ಭುತ ಪ್ರದರ್ಶನ ನೀಡಿದರು, ಇದು ಟೂರ್ನಿಯ ಅವರ ಮೊದಲ ಪಂದ್ಯವಾಗಿತ್ತು. ರಿಂಕು ಅವರ ನಾಲ್ಕು ರನ್‌ಗಳ ಜೊತೆಗೆ, ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಕೂಡ ಅಜೇಯ 69 ರನ್ ಗಳಿಸಿದರು.

Category
ಕರಾವಳಿ ತರಂಗಿಣಿ