image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತ ಮಹಿಳಾ ತಂಡದಿಂದ, ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವಕಪ್‌ನಲ್ಲಿ ಭರ್ಜರಿ ಆರಂಭ

ಭಾರತ ಮಹಿಳಾ ತಂಡದಿಂದ, ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವಕಪ್‌ನಲ್ಲಿ ಭರ್ಜರಿ ಆರಂಭ

ಹೈದರಾಬಾದ್ : ಭಾರತ ತಂಡವು, ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವಕಪ್‌ನಲ್ಲಿ ಭರ್ಜರಿ ಆರಂಭ ಮಾಡಿತು. ಮೊದಲ ದಿನವಾದ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಮಹಿಳಾ ತಂಡ ಮೂರೂ ಪದಕ ಗೆದ್ದು ಕ್ಲೀನ್ ಸ್ವೀಪ್ ಮಾಡಿದರೆ, ಪುರುಷರ ತಂಡ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿತು. ಅನುಷ್ಕಾ ತೋಕೂರ್ ಅವರು ಡಾ.ಕರ್ಣಿ ಸಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 621.6 ಸ್ಕೋರ್‌ನೊಡನೆ ಚಿನ್ನ ಗೆದ್ದರು. 18 ವರ್ಷ ವಯಸ್ಸಿನ ಅನ್ಶಿಕಾ (619.2) ಬೆಳ್ಳಿ ಗೆದ್ದರೆ, 20 ವರ್ಷ ವಯಸ್ಸಿನ ಆಧ್ಯಾ ಅಗರವಾಲ್ (615.9) ಕಂಚಿನ ಪದಕ ಗೆದ್ದರು. ಕಜಕಸ್ತಾನದಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಅನುಷ್ಕಾ ಅವರು 50 ಮೀ. ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಗುರಿಯಿಡುವಲ್ಲಿ ಯಶಸ್ವಿ ಆಗಿದ್ದರು. ದೀಪೇಂದ್ರ ಸಿಂಗ್ ಶೆಖಾವತ್ ಮತ್ತು ರೋಹಿತ್ ಕನ್ಯಾನ ಅವರು ಪುರುಷರ ವಿಭಾಗದ 50 ಮೀ. ರೈಪಲ್ ಪ್ರೋನ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. ತಟಸ್ಥ ಅಥ್ಲೀಟ್ಸ್ ತಂಡದ ಕಮಿಲ್‌ ನುರಿಯಾಕ್‌ಮೆಟೋವ್‌ (618.9) ಚಿನ್ನ ಗೆದ್ದರು. ದೀಪೇಂದ್ರ 617.9 ಮತ್ತು ರೋಹಿತ್‌ 616.3 ಸ್ಕೋರ್ ಮಾಡಿದರು.

Category
ಕರಾವಳಿ ತರಂಗಿಣಿ