image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಿರಿಯರ ಹಾಕಿ: ಆಸೀಸ್‌ ಪ್ರವಾಸಕ್ಕೆ ಭಾರತೀಯ ಮಹಿಳಾ ತಂಡ ಪ್ರಕಟ

ಕಿರಿಯರ ಹಾಕಿ: ಆಸೀಸ್‌ ಪ್ರವಾಸಕ್ಕೆ ಭಾರತೀಯ ಮಹಿಳಾ ತಂಡ ಪ್ರಕಟ

ಹೊಸದಿಲ್ಲಿ: ಶುಕ್ರವಾರದಿಂದ ಅ. 2ರ ವರೆಗೆ ಆಸ್ಟ್ರೇಲಿಯದ ಕ್ಯಾನ್‌ಬೆರಾದಲ್ಲಿ ನಡೆಯಲಿರುವ 5 ಪಂದ್ಯಗಳ ಹಾಕಿ ಸರಣಿಗಾಗಿ 23 ಮಂದಿಯ ಕಿರಿಯರ ವನಿತಾ ತಂಡವನ್ನು ಪ್ರಕಟಿಸಲಾಗಿದೆ. ಡಿಫೆಂಡರ್‌ ಜ್ಯೋತಿ ಸಿಂಗ್‌ ನಾಯಕಿಯಾಗಿದ್ದಾರೆ. ಭಾರತ ತನ್ನ ಆರಂಭಿಕ 3 ಪಂದ್ಯಗಳನ್ನು ಆತಿಥೇಯ ಆಸ್ಟ್ರೇಲಿಯ ವಿರುದ್ಧ ಮತ್ತು ಉಳಿದ 2 ಪಂದ್ಯಗಳನ್ನು ಅಲ್ಲಿನ ಹಾಕಿ ಕ್ಲಬ್‌ ಕ್ಯಾನ್‌ಬೆರಾ ಚಿಲ್‌ ವಿರುದ್ಧ ಆಡಲಿದೆ. ಈ ಸರಣಿಯು ಡಿಸೆಂಬರ್‌ನಲ್ಲಿ ನಡೆಯಲಿರುವ ಮಹಿಳಾ ಕಿರಿಯರ ವಿಶ್ವಕಪ್‌ ಹಾಕಿ ತಯಾರಿ ನಿಟ್ಟಿನಲ್ಲಿ ಭಾರತಕ್ಕೆ ಮಹತ್ವದ್ದೆನಿಸಿದೆ.

Category
ಕರಾವಳಿ ತರಂಗಿಣಿ