ಹೈದೆರಾಬಾದ್ : ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿರುವ ಭಾರತದ ಅಗ್ರ ಆಟಗಾರ್ತಿ ಪಿ.ವಿ.ಸಿಂಧು ಕೂಟದಿಂದಲೇ ನಿರ್ಗಮಿಸಿದ್ದಾರೆ. ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಅವರು ವಿಶ್ವ ನಂ.1 ಆಟಗಾರ್ತಿ ಕೊರಿಯಾದ ಆಯನ್ ಸೆ ಯಂಗ್ ವಿರುದ್ಧ 14-21, 13-21ರ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಚಿನ್ನ ವಿಜೇತೆ 23 ವರ್ಷದ ಆಯನ್ ಸೆ ಯಂಗ್ ಅವರು 38 ನಿಮಿಷಗಳಲ್ಲೇ ಪಂದ್ಯ ವಶಪಡಿಸಿಕೊಂಡಿದ್ದಾರೆ. ಇದು ಆಯನ್ ಸೆ ಯಂಗ್ ವಿರುದ್ಧ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಅವರಿಗೆ ಎದುರಾದ ಸತತ ಎಂಟನೇ ಸೋಲು ಆಗಿದೆ.