ಟೋಕಿಯೋ : 2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಥ್ರೋನಲ್ಲಿ ಕಳಪೆ ಪ್ರದರ್ಶನದಿಂದಾಗಿ ಭಾರತೀಯ ನೀರಜ್ ಚೋಪ್ರಾ ತಮ್ಮ ಚಿನ್ನವನ್ನು ಉಳಿಸಿಕೊಳ್ಳಲು ವಿಫಲರಾಗಿದ್ದರೆ ಏತನ್ಮಧ್ಯೆ, ಒಲಿಂಪಿಕ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ಪದಕವನ್ನು ವಂಚಿತರಾದರು. ಆದಾಗ್ಯೂ, ನೀರಜ್ 8ನೇ ಸ್ಥಾನ ಪಡೆದರೇ, ಅರ್ಷದ್ ನದೀಮ್ ಅಂತಿಮ ಸುತ್ತಿನಲ್ಲಿ 10ನೇ ಸ್ಥಾನ ಪಡೆದರು. 2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಥ್ರೋನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್ ಮತ್ತು ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಇಬ್ಬರೂ ಕಳಪೆ ಪ್ರದರ್ಶನ ನೀಡಿದ್ದಾರೆ. ನೀರಜ್ 83.65 ಮೀಟರ್ ಎಸೆಯುವ ಮೂಲಕ ಟಾಪ್ -10 ಸ್ಥಾನ ಪಡೆದಿದ್ದರು.
ಆದರೆ ನಂತರ ಅವರು 84.03 ಮೀಟರ್ ಎಸೆದರು. ಅವರ ಮೂರನೇ ಪ್ರಯತ್ನ ವಿಫಲವಾಯಿತು. ನಾಲ್ಕನೇ ಪ್ರಯತ್ನದಲ್ಲಿ ಅವರು 82.86 ಮೀಟರ್ ಎಸೆದು ಹೇಗೋ ಅಗ್ರ 8 ರಲ್ಲಿ 8 ನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು. ಆದರೆ ಇದಾದ ನಂತರ ಅವರು ತಮ್ಮ ಐದನೇ ಪ್ರಯತ್ನದಲ್ಲಿ ಫೌಲ್ ಮಾಡಿದ್ದು ಫೈನಲ್ ಸ್ಪರ್ಧೆಯಿಂದ ಹೊರಗುಳಿದರು. ಒಲಿಂಪಿಕ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ಟೂರ್ನಿಯಿಂದ ಹೊರಬಿದ್ದಾರೆ. 82.73 ಮೀಟರ್ ಎಸೆಯುವ ಮೂಲಕ ಹತ್ತನೇ ಸ್ಥಾನ ಪಡೆದರು. ಆದಾಗ್ಯೂ ಸಚಿನ್ ಯಾದವ್ 86.27 ಮೀಟರ್ ಎಸೆಯುವ ಮೂಲಕ ಆರನೇ ಸುತ್ತಿಗೆ ಅರ್ಹತೆ ಪಡೆದು ಭಾರತದ ಪದಕದ ಭರವಸೆಯನ್ನು ಜೀವಂತವಾಗಿರಿಸಿದ್ದಾರೆ.