ಲಿವರ್‌ಪೂಲ್: ಭಾರತೀಯ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ ಬರೆಯಲಾಗಿದೆ. ಲಿವರ್‌ಪೂಲ್‌ನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್-2025 ರಲ್ಲಿ ಮೊದಲ ಚಿನ್ನ ಭಾರತದ ಪಾಲಾಗಿದ್ದು, ಇಲ್ಲಿಯವರೆಗೆ ಮೂವರು ಮಹಿಳಾ ಬಾಕ್ಸರ್‌ಗಳು ಪದಕಗಳನ್ನು ಗೆದ್ದಿದ್ದಾರೆ. ನೂಪುರ್ 80+ ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರೆ, ಪೂಜಾ ರಾಣಿ 80 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ. ಇದರೊಂದಿಗೆ ಜಾಸ್ಮಿನ್ ಲಂಬೋರಿಯಾ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಇದುವರೆಗೆ ಭಾರತಕ್ಕೆ ಇದು ಅತ್ಯುತ್ತಮ ಫಲಿತಾಂಶವಾಗಿದೆ. ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪೋಲೆಂಡ್‌ನ ಜೂಲಿಯಾ ಸೆಮೆಟಾ ಅವರನ್ನು ಜಾಸ್ಮಿನ್ ಲಂಬೋರಿಯಾ 4-1 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. ಇದು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೊದಲ ಚಿನ್ನವಾಗಿದೆ. ಜಾಸ್ಮಿನ್ ಲಂಬೋರಿಯಾ ಮೊದಲ ಸುತ್ತಿನಲ್ಲಿ ಹಿಂದೆ ಬಿದ್ದರು. ಇದಾದ ನಂತರ, ಅವರು ಎರಡನೇ ಸುತ್ತಿನಲ್ಲಿ ಅದ್ಭುತ ಪುನರಾಗಮನ ಮಾಡಿದರು ಮತ್ತು ನಂತರ ಸತತ ಗೆಲುವುಗಳನ್ನು ದಾಖಲಿಸಿದರು, ಪೋಲೆಂಡ್‌ನ ಬಾಕ್ಸರ್ ಜೂಲಿಯಾ ಅವರನ್ನು 4-1 ಅಂಕಗಳಿಂದ ಸೋಲಿಸಿದರು ಮತ್ತು 2025 ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಪಡೆದರು.
ಪದಕ ಗೆದ್ದ ನಂತರ ಜಾಸ್ಮಿನ್ ಸಂತಸದಿಂದ ಕಂಡುಬಂದಿದ್ದಾರೆ. ಕಳೆದ ಬಾರಿ ಕಳಪೆ ಪ್ರದರ್ಶನದಿಂದಾದಿ 2024ರಲ್ಲಿ ತಾವು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹೊರಗುಳಿದಿದ್ದಾಗಿ ಅವರು ಬಹಳ ಹಿಂದೆಯೇ ಹೇಳಿದ್ದಾರೆ. ಇನ್ನು ನೂಪುರ್ ಫೈನಲ್‌ನಲ್ಲಿ ಅಗಾಟಾ ಕಾಸ್ಮಾರ್ಸ್ಮಾ (ಪೋಲೆಂಡ್) ವಿರುದ್ಧ 2-3 ಅಂತರದಲ್ಲಿ ಸೋತರು. 57 ಕೆಜಿ ಮಹಿಳಾ ವಿಭಾಗದ ಸೆಮಿಫೈನಲ್‌ನಲ್ಲಿ, ಜಾಸ್ಮಿನ್ ವೆನೆಜುವೆಲಾದ ಒಮಾಲಿನ್ ಅಲ್ಕಾಲಾ ವಿರುದ್ಧ 5-0 ಅಂತರದ ಏಕಪಕ್ಷೀಯ ಗೆಲುವು ಸಾಧಿಸಿದ್ದರು. ಅವರ ಜೊತೆಗೆ ಭಾರತದ ನೂಪುರ್ ಶರೋನ್ 80+ ಕೆಜಿ ಮಹಿಳಾ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. ಫೈನಲ್‌ನಲ್ಲಿ ಅವರು ಪೋಲೆಂಡ್‌ನ ಅಗಾಟಾ ಕಾಜ್ಮಾರ್ಸ್ಕಾ ವಿರುದ್ಧ ಸೋತರು. ಇನ್ನು ಪೂಜಾ ರಾಣಿ 80 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ. ಅವರು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ನ ಎಮಿಲಿ ಅಸ್ಮಿತ್ ವಿರುದ್ಧ ಕಠಿಣ ಹೋರಾಟ ನಡೆಸಿ ಸೋತರು. ಒಟ್ಟಿನಲ್ಲಿ ಭಾರತೀಯ ಬಾಕ್ಸಿಂಗ್ ಇತಿಹಾಸದಲ್ಲಿ ಐತಿಹಾಸಿಕ ಕ್ಷಣವೊಂದು ಸೃಷ್ಟಿಯಾಗಿದ್ದು, ಮೊದಲ ಬಾರಿಗೆ ಮೂವರು ಮಹಿಳಾ ಬಾಕ್ಸರ್‌ಗಳು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಿದ್ದಾರೆ. ಜಾಸ್ಮಿನ್ ಮತ್ತು ನೂಪುರ್ ಈಗಾಗಲೇ ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದರೆ ಮೀನಾಕ್ಷಿ 48 ಕೆಜಿ ವಿಭಾಗದಲ್ಲಿ ಚಿನ್ನಕ್ಕಾಗಿ ಸ್ಪರ್ಧಿಸಲಿದ್ದಾರೆ. ವಿಶ್ವ ಬಾಕ್ಸಿಂಗ್ ಆಶ್ರಯದಲ್ಲಿ ನಡೆಯಲಿರುವ ಮೊದಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 20 ಸದಸ್ಯರ ತಂಡವನ್ನು ಕಣಕ್ಕಿಳಿಸಲಾಗಿದೆ. ಭಾರತ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.