image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಲ್ಕರಾಜ್‌ಗೆ ಒಲಿದ ಯುಎಸ್ ಓಪನ್ ಕಿರೀಟ : ಅಗ್ರ ಶ್ರೇಯಾಂಕದ ಸಿನ್ನರ್‌ ಕನಸು ಭಗ್ನ

ಅಲ್ಕರಾಜ್‌ಗೆ ಒಲಿದ ಯುಎಸ್ ಓಪನ್ ಕಿರೀಟ : ಅಗ್ರ ಶ್ರೇಯಾಂಕದ ಸಿನ್ನರ್‌ ಕನಸು ಭಗ್ನ

ಅಮೇರಿಕ : ಅಮೆರಿಕ ಓಪನ್‌ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್‌ ಸಿನ್ನರ್‌ ಅವರನ್ನು ಮಣಿಸಿದ ಕಾರ್ಲೋಸ್‌ ಅಲ್ಕರಾಜ್‌, ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಸ್ಪೇನ್‌ನ ಈ ಆಟಗಾರ ಭಾನುವಾರ ನಡೆದ ಸೆಣಸಾಟದಲ್ಲಿ ಇಟಲಿಯ ಸಿನ್ನರ್‌ ಅವರನ್ನು 6-2, 3-6, 6-1 ಮತ್ತು 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಇದರೊಂದಿಗೆ ಅಲ್ಕರಾಜ್‌ ಗೆದ್ದ ಗ್ರ್ಯಾನ್‌ಸ್ಲಾಮ್‌ಗಳ ಸಂಖ್ಯೆ 6ಕ್ಕೆ ಏರಿಕೆಯಾಯಿತು. ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಅಲ್ಕರಾಜ್‌, ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಗೆಲ್ಲುವ ಕನಸು ಕಂಡಿದ್ದ ಅನುಭವಿ ನೊವಾಕ್‌ ಜೊಕೊವಿಚ್‌ ಅವರನ್ನು ಸೆಮಿಫೈನಲ್‌ನಲ್ಲಿ ನೇರ (6-4, 7-6 (7-4), 6-2) ಸೆಟ್‌ಗಳಿಂದ ಮಣಿಸಿದ್ದರು. ಕಳೆದ ಬಾರಿ ಕಿರೀಟ ಮುಡಿಗೇರಿಸಿಕೊಂಡಿದ್ದ ಸಿನ್ನರ್, 25ನೇ ಶ್ರೇಯಾಂಕದಲ್ಲಿರುವ ಕೆನಡಾ ಆಟಗಾರ ಫೆಲಿಕ್ಸ್‌ ಓಜೆ ಆಲಿಯಾಸೀಮ್ ಅವರನ್ನು ಪ್ರಯಾಸದಿಂದ (6-1, 3-6, 6-3, 6-4 ಅಂತರ) ಸೋಲಿಸಿ ಪ್ರಶಸ್ತಿ ಸುತ್ತಿಗೆ ತಲುಪಿದ್ದರು.

Category
ಕರಾವಳಿ ತರಂಗಿಣಿ