image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೊಕೊವಿಕ್‌ ಸೋಲಿಸಿ ಯು.ಎಸ್.ಓಪನ್‌ ಫೈನಲ್‌ ತಲುಪಿದ ಕಾರ್ಲೋಸ್‌ ಅಲ್ಕರಾಜ್

ಜೊಕೊವಿಕ್‌ ಸೋಲಿಸಿ ಯು.ಎಸ್.ಓಪನ್‌ ಫೈನಲ್‌ ತಲುಪಿದ ಕಾರ್ಲೋಸ್‌ ಅಲ್ಕರಾಜ್

ನ್ಯೂಯಾರ್ಕ್ :‌ ಯು.ಎಸ್.ಓಪನ್‌ ನ ದಿಗ್ಗಜರ ಕಾಳಗದಲ್ಲಿ ಕಾರ್ಲೋಸ್‌ ಅಲ್ಕರಾಜ್‌ ಗೆದ್ದಿದ್ದಾರೆ. ಸೆಮಿ ಫೈನಲ್‌ ಪಂದ್ಯದಲ್ಲಿ 24 ಬಾರಿಯ ಗ್ರ್ಯಾನ್‌ ಸ್ಲ್ಯಾಮ್‌ ವಿಜೇತ ನೊವಾಕ್‌ ಜೊಕೊವಿಕ್‌ ಅವರನ್ನು ಸೋಲಿಸಿದ ಸ್ಪೇನ್‌ ನ ಅಲ್ಕರಾಜ್‌ ಯು.ಎಸ್.ಓಪನ್‌ ಫೈನಲ್‌ ತಲುಪಿದ್ದಾರೆ. ಅಲ್ಕರಾಜ್ 6-4, 7-6 (7/4), 6-2 ಅಂತರದಲ್ಲಿ ಜಯಗಳಿಸಿ ತಮ್ಮ ಕೊನೆಯ 37 ಪಂದ್ಯಗಳಲ್ಲಿ 36 ನೇ ಗೆಲುವು ದಾಖಲಿಸಿದ್ದಾರೆ. ಆ ಸಮಯದಲ್ಲಿ ಅವರ ಏಕೈಕ ಸೋಲು ವಿಂಬಲ್ಡನ್ ಫೈನಲ್‌ನಲ್ಲಿ ಸಿನ್ನರ್ ವಿರುದ್ಧ ಬಂದಿತ್ತು.

22 ವರ್ಷದ ಸ್ಪೇನ್‌ನ ಆಟಗಾರ 2022 ರಲ್ಲಿ ಪ್ರಶಸ್ತಿ ಗೆದ್ದ ಬಳಿಕ ಇದೀಗ ಮತ್ತೊಂದು ಫೈನಲ್‌ ಪ್ರವೇಶ ಪಡೆದಿದ್ದಾರೆ. ಭಾನುವಾರದ ಫೈನಲ್‌ನಲ್ಲಿ ಅವರು ಅಗ್ರ ಶ್ರೇಯಾಂಕಿತ ಹಾಲಿ ಚಾಂಪಿಯನ್‌ ಜೇನಿಕ್ ಸಿನ್ನರ್ ಅಥವಾ ಕೆನಡಾದ 25 ನೇ ಶ್ರೇಯಾಂಕಿತ ಫೆಲಿಕ್ಸ್ ಆಗರ್-ಅಲಿಯಾಸಿಮ್ ಅವರನ್ನು ಎದುರಿಸಲಿದ್ದಾರೆ.‌ "ಇದು ಒಂದು ಅದ್ಭುತ ಅನುಭವ. ಮತ್ತೊಮ್ಮೆ ಯುಎಸ್ ಓಪನ್‌ನ ಫೈನಲ್‌ನಲ್ಲಿ, ಇದು ಅದ್ಭುತವೆನಿಸುತ್ತದೆ" ಎಂದು ಅಲ್ಕರಾಜ್ ಹೇಳಿದರು. ಈ ಸೋಲಿನೊಂದಿಗೆ ಜೊಕೊವಿಕ್ ಗ್ರ್ಯಾಂನ್ ಸ್ಲ್ಯಾಮ್‌ನಲ್ಲಿ ಸತತ ನಾಲ್ಕನೇ ಸೆಮಿಫೈನಲ್ ಸೋಲನ್ನು ಅನುಭವಿಸಿದರು. ಅತ್ಯಂತ ಹಿರಿಯ ಚಾಂಪಿಯನ್ ಆಗುವ 38 ವರ್ಷದ ಅವರ ಪ್ರಯತ್ನಕ್ಕೆ ಹಿನ್ನಡೆಯಾಯಿತು.

Category
ಕರಾವಳಿ ತರಂಗಿಣಿ