image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಲ್ಲವ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಮುಕ್ತ ದಸರಾ ಕ್ರೀಡೋತ್ಸವ

ಬಿಲ್ಲವ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಮುಕ್ತ ದಸರಾ ಕ್ರೀಡೋತ್ಸವ

ಮಂಗಳೂರು ತಾಲೂಕು ಬಿಲ್ಲವ ಸಂಘದ ವತಿಯಿಂದ ದಿನಾಂಕ 6/10/24 ನೇ ಆದಿತ್ಯವಾರ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಮುಕ್ತ ದಸರಾ ಕ್ರೀಡೋತ್ಸವು ಜರಗಲಿರುವುದು ಎಂದು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ ಸುವರ್ಣ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. 

ದಸರಾ ಕ್ರೀಡೋತ್ಸವದ ದೀಪಪ್ರಜ್ವಲನೆಯನ್ನು ಕೇಂದ್ರದ ಮಾಜಿ ಸಚಿವ ಮಾನ್ಯ.ಶ್ರೀ.ಬಿ.ಜನಾರ್ಧನ ಪೂಜಾರಿಯವರು ನೆರವೇರಿಸಲಿದ್ದು, ಕ್ರೀಡಾಕೂಟದ ಉದ್ಘಾಟನೆಯನ್ನು ವಿಧಾನಸಭಾ ಸ್ಪೀಕರ್,ಕರ್ನಾಟಕ ಸರ್ಕಾರ ಮಾನ್ಯಶ್ರೀ.ಯು.ಟಿ ಖಾದರ್ ನೆರೆವೇರಿಸಲ್ಲಿದ್ದಾರೆ,

ಧ್ವಜಾರೋಹಣವನ್ನು ಮಂಗಳೂರು ಲೋಕಸಭಾ ಸದಸ್ಯರು ಬ್ರಿಜೇಶ್ ಚೌಟ ಮಾಡಲಿದ್ದರೆ, ಕಬಡ್ಡಿ ಆಟದ ಚಾಲನೆಯನ್ನು ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಮಾನ್ಯ ಶ್ರೀ.ವೇದವ್ಯಾಸ್ ಕಾಮತ್ ನೆರೆವೇರಿಸಲಿದ್ದಾರೆ. ಸಭಾಕಾರ್ಯಕ್ರಮ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕಿನ ಬಿಲ್ಲವ ಸಂಘದ ಅಧ್ಯಕ್ಷರಾದ ಜಿತೇಂದ್ರ.ಜೆ.ಸುವರ್ಣ ವಹಿಸಲಿದ್ದಾರೆ ದಸರ ಕ್ರೀಡೋತ್ಸವದಲ್ಲಿ ಸ್ಪರ್ದೇಗೆ ಮುಕ್ತ ಅವಕಾಶ ವಿದೆ.

ಕ್ರೀಡಾಪಟುಗಳಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಉಪಾಹಾರ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿದೆ.ಜಿಲ್ಲೆಯ ಕ್ರೀಡಾ ಸ್ಪರ್ಧಿಗಳು ಇದರ ಸದುಪಯೋಗ ಪಡೆದುಕೊಂಡು ಕ್ರೀಡೋತ್ಸವವನ್ನು ಯಶಸ್ವಿಕೊಳಿಸುವಂತೆ ವಿನಂತಿಸಿಕೊಂಡರು.  ಪತ್ರಿಕಾಗೋಷ್ಟಿಯಲ್ಲಿ ಕೋಶಾಧಿಕಾರಿ ಪುರುಷೋತ್ತಮ ಪೂಜಾರಿ, ಪ್ರಧಾನ ಕಾರ್ಯದರ್ಶಿ ಲೋಕನಾಥ ಪೂಜಾರಿ, ಉಪಾಧ್ಯಕ್ಷ ಸುರೇಶ್ ಚಂದ್ರ ಕೋಟ್ಯಾನ್, ತುಕಾರಾಮ ಪೂಜಾರಿ ಗೌರವ ಸಲಹೆಗರಾರು, ಸುರೇಶ್ ಪೂಜಾರಿ ಸಂಘಟನಾ ಕಾರ್ಯದರ್ಶಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ