image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೆರಿಕನ್ ಓಪನ್: ನಾಲ್ಕನೇ ಸುತ್ತಿಗೆ ಜಿಗಿದ ಜೊಕೊವಿಚ್‌

ಅಮೆರಿಕನ್ ಓಪನ್: ನಾಲ್ಕನೇ ಸುತ್ತಿಗೆ ಜಿಗಿದ ಜೊಕೊವಿಚ್‌

ಅಮೇರಿಕ : ಬೆನ್ನುನೋವನ್ನು ಮೀರಿನಿಂತ ಅನುಭವಿ ನೊವಾಕ್ ಜೊಕೊವಿಚ್ ಅವರು ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ಬ್ರಿಟನ್‌ನ ಕ್ಯಾಮ್‌ ನೋರಿ ಅವರನ್ನು ಮಣಿಸಿ 1991ರ ನಂತರ ಅಮೆರಿಕ ಓಪನ್‌ 16ರ ಸುತ್ತನ್ನು ತಲುಪಿದ ಅತಿ ಹಿರಿಯ ಆಟಗಾರ ಎನಿಸಿದರು. ಆ ವರ್ಷ ಅಮೆರಿಕದ ಜಿಮ್ಮಿ ಕಾನರ್ಸ್‌ ಅವರೂ 38ನೇ ವಯಸ್ಸಿನಲ್ಲಿ ಪುರುಷರ ಸಿಂಗಲ್ಸ್‌ ನಾಲ್ಕನೇ ಸುತ್ತಿಗೆ ತಲುಪಿದ್ದರು. ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸರ್ಬಿಯಾದ ಆಟಗಾರ ಶುಕ್ರವಾರ 6-4, 6-7 (4-7), 6-2, 6-3 ರಿಂದ ನೋರಿ ಅವರನ್ನು ಹಿಮ್ಮೆಟ್ಟಿಸಿದರು. ಆದರೆ ಎರಡು ವಾರಗಳ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ತೀವ್ರ ಒತ್ತಡವನ್ನು ದೇಹ ತಾಳಿಕೊಳ್ಳುತ್ತದೆಯೇ ಎಂಬುದು ತಮ್ಮ ನಿಯಂತ್ರಣದಲ್ಲಿಲ್ಲ ಎಂದು ಸರ್ಬಿಯಾದ ಆಟಗಾರ ಹೇಳಿದರು. ಜೊಕೊವಿಚ್ ಅವರು 16ನೇ ಬಾರಿ ಅಮೆರಿಕ ಓಪನ್‌ನಲ್ಲಿ ನಾಲ್ಕನೇ ಸುತ್ತನ್ನು ದಾಟಿದ್ದಾರೆ. ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಈ ಹಂತ ತಲುಪಿರುವುದು 69ನೇ ಸಲ! ಅವರು ಈ ವಿಷಯದಲ್ಲಿ ರೋಜರ್‌ ಫೆಡರರ್‌ ದಾಖಲೆ ಸರಿಗಟ್ಟಿದರು. ಜರ್ಮನಿಯ ಸ್ಟ್ರುಫ್‌ ಮೂರನೇ ಸುತ್ತಿನಲ್ಲಿ 17ನೇ ಶ್ರೇಯಾಂಕದ ಫ್ರಾನ್ಸಿಸ್‌ ಟಿಯಾಫೊ ಅವರನ್ನು 6-4, 6-3, 7-6 (9-7) ರಿಂದ ಸೋಲಿಸಿದ್ದರು. ಆರನೇ ಶ್ರೇಯಾಂಕದ ಬೆನ್‌ ಶೆಲ್ಟನ್ ಅವರೂ ಹೊರಬಿದ್ದರು. ಫ್ರಾನ್ಸ್‌ನ 37 ವರ್ಷ ವಯಸ್ಸಿನ ಆಟಗಾರ ಅಡ್ರಿಯಾನ್ ಮನ್ನಾರಿನೊ 3-6, 6-3, 4-6, 6-4 ರಿಂದ ಮುಂದಿದ್ದಾಗ ಶೆಲ್ಟನ್‌ ಅವರು ಭುಜದ ನೋವಿನಿಂದಾಗಿ ಪಂದ್ಯ ಬಿಟ್ಟುಕೊಟ್ಟರು. ವಿಶ್ವ ಕ್ರಮಾಂಕದಲ್ಲಿ 82ನೇಸ್ಥಾನದಲ್ಲಿರುವ ಆರ್ಥರ್‌ ರಿಂಡರ್‌ನೆಕ್‌ ಅವರು ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ನಾಲ್ಕನೇ ಸುತ್ತನ್ನು ತಲುಪಿದರು. ಫ್ರಾನ್ಸ್‌ನ ಆಟಗಾರ 4-6, 6-3, 6-3, 6-2 ರಿಂದ ಬೊಂಜಿ ಅವರನ್ನು ಮಣಿಸಿದರು. ನಾಲ್ಕನೇ ಶ್ರೇಯಾಂಕದ ಅಮೆರಿಕದ ಆಟಗಾರ ಟೇಲರ್ ಫ್ರಿಟ್ಝ್‌ ಕೂಡ ನಾಲ್ಕನೇ ಸುತ್ತಿಗೆ ಮುನ್ನಡೆದರು.

Category
ಕರಾವಳಿ ತರಂಗಿಣಿ