image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಾರಾಜ ಟ್ರೋಫಿ ಚಾಂಪಿಯನ್ ಆಗಿ ಮೆರೆದ ಮಂಗಳೂರು ಡ್ರಾಗನ್ಸ್

ಮಹಾರಾಜ ಟ್ರೋಫಿ ಚಾಂಪಿಯನ್ ಆಗಿ ಮೆರೆದ ಮಂಗಳೂರು ಡ್ರಾಗನ್ಸ್

ಮೈಸೂರು: ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20, 2025ರ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಮಂಗಳೂರು ಡ್ರಾಗನ್ಸ್ ತಂಡವು ವಿಜೆಡಿ (VJD) ನಿಯಮದ ಅನ್ವಯ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು.

155 ರನ್‌ಗಳ ಗುರಿ ಬೆನ್ನತ್ತಿದ ಮಂಗಳೂರು ಡ್ರಾಗನ್ಸ್, 10.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿದ್ದಾಗ ಮಳೆ ಸುರಿಯಲು ಆರಂಭಿಸಿತು. ಈ ಹಂತದಲ್ಲಿ, ಮಂಗಳೂರು ಡ್ರಾಗನ್ಸ್ ತಂಡವು ವಿಜೆಡಿ ನಿಯಮದ ಪ್ರಕಾರ ನಿಗದಿತ ಸ್ಕೋರ್‌ಗಿಂತ 15 ರನ್‌ಗಳ ಮುನ್ನಡೆಯಲ್ಲಿದ್ದ ಕಾರಣ, ಅವರನ್ನು ವಿಜಯೀ ಎಂದು ಘೋಷಿಸಲಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಮೊಹಮ್ಮದ್ ತಾಹ (15 ಎಸೆತಗಳಲ್ಲಿ 27) ಮತ್ತು ದೇವದತ್ ಪಡಿಕ್ಕಲ್ (7 ಎಸೆತಗಳಲ್ಲಿ 10) ಉತ್ತಮ ಆರಂಭ ಒದಗಿಸಿದರು. ನಂತರ ಬಂದ ಕೃಷ್ಣನ್ ಶ್ರೀಜಿತ್ (45 ಎಸೆತಗಳಲ್ಲಿ 52) ಜವಾಬ್ದಾರಿಯುತ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ, ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಮಂಗಳೂರು ಡ್ರಾಗನ್ಸ್ ಪರ ಸಚಿನ್ ಶಿಂಧೆ (3/28) ಯಶಸ್ವಿ ಬೌಲರ್ ಎನಿಸಿದರೆ, ಮ್ಯಾಕ್ನಿಲ್ ನೊರೊನ್ಹಾ (2/25) ಮತ್ತು ಶ್ರೀವತ್ಸ ಆಚಾರ್ಯ (2/30) ತಲಾ ಎರಡು ವಿಕೆಟ್ ಪಡೆದರು. ಗುರಿ ಬೆನ್ನತ್ತಿದ ಮಂಗಳೂರು ಡ್ರಾಗನ್ಸ್ ತಂಡಕ್ಕೆ ಆರಂಭಿಕರಾದ ಲೋಚನ್ ಗೌಡ (17 ಎಸೆತಗಳಲ್ಲಿ 18) ಮತ್ತು ಬಿ.ಆರ್. ಶರತ್ (35 ಎಸೆತಗಳಲ್ಲಿ 49) ಉತ್ತಮ ಆರಂಭ ನೀಡಿದರು. ಶರತ್ ಕೇವಲ ಒಂದು ರನ್‌ನಿಂದ ಅರ್ಧಶತಕ ವಂಚಿತರಾದರು. 10.4 ಓವರ್‌ಗಳಲ್ಲಿ ತಂಡ 85/2 ಆಗಿದ್ದಾಗ ಮಳೆ ಬಂದಿದ್ದರಿಂದ ಪಂದ್ಯವನ್ನು ನಿಲ್ಲಿಸಲಾಯಿತು.

 

Category
ಕರಾವಳಿ ತರಂಗಿಣಿ