ಜ್ಯುರೀಚ್ : ಇಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ ಜಾವೆಲಿನ್ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ವಿಫಲರಾಗಿದ್ದಾರೆ. ಫೈನಲ್ ಪಂದ್ಯದ ಜಿದ್ದಾಜಿದ್ದಿನ ಕಾದಾಟದಲ್ಲಿ ಸ್ಟಾರ್ ಅಥ್ಲೀಟ್ ಜರ್ಮನಿಯ ವೆಬರ್ ಜೂಲಿಯನ್ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಜರ್ಮನಿಯ ವೆಬರ್ ಜೂಲಿಯನ್ ಹಾಗೂ ನೀರಜ್ ಚೋಪ್ರಾ ಅವರ ಮಧ್ಯೆ ಬಿರುಸಿನ ಕಾಳಗ ಏರ್ಪಟ್ಟಿತ್ತು. ಈ ವೇಳೆ ಎಲ್ಲರ ಕಣ್ಣುಗಳು ಈ ಸ್ಟಾರ್ ಆಟಗಾರರ ಮೇಲೆ ನೆಟ್ಟಿದ್ದವು. ಜರ್ಮನಿಯ ಅಥ್ಲೀಟ್ ಮೊದಲ ಪ್ರಯತ್ನದಲ್ಲೇ 90 ಮೀಟರ್ ಮಾರ್ಕ್ ದಾಟಿ ಅರ್ಧ ಸ್ಪರ್ಧೆ ಗೆದ್ದು ಬಿಟ್ಟಿದ್ದರು. ಆದರೆ ಉಳಿದ ಅಥ್ಲೀಟ್‌ಗಳು ಈ ಮಾರ್ಕ್ ದಾಟಲು ಸಾಧವೇ ಆಗಲಿಲ್ಲ. ಪರಿಣಾಮ ಕೂಲಿಯನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಇವರು ಫೈನಲ್ ಪಂದ್ಯದ ಮೊದಲ ಯತ್ಬದಲ್ಲೇ 91.37 ಮೀಟರ್ ದೂರ ಜಾವೆಲಿನ್ ಎಸೆದು ಅಬ್ಬರಿಸಿದರು. ಎರಡನೇ ಯತ್ನದಲ್ಲಿ 91.51 ಮೀಟರ್ ಜಾವೆಲಿನ್ ಎಸೆದರು. ಈ ಎರಡು ಪ್ರಯತ್ನಗಳು ಇವರನ್ನು ಪೋಡಿಯಂನ ಟಾಪ್‌ನಲ್ಲಿ ತಂದು ನಿಲ್ಲಿಸುವಂತೆ ಮಾಡಿದವು. ಭರವಸೆಯ ಅಥ್ಲೀಟ್ ನೀರಜ್ ಚೋಪ್ರಾ ತಮ್ಮ ಮೊದಲ ಯತ್ನದಲ್ಲಿ 84.35ರ ಮಾರ್ಕ್ ದಾಟಿದರು. ಎರಡನೇ ಪ್ರಯತ್ನದಲ್ಲಿ 82 ಮೀಟರ್ ದೂರ ಜಾವೆಲಿನ್ ಎಸೆದರು. ಇದಾದ ನಂತರ, ನೀರಜ್ ಉತ್ತಮ ಲಯದಲ್ಲಿ ಕಾಣಲಿಲ್ಲ. ಅವರು ತಮ್ಮ ಮೂರನೇ, ನಾಲ್ಕನೇ ಮತ್ತು ಐದನೇ ಥ್ರೋ ಫೌಲ್ ಆಯಿತು. ನೀರಜ್ ಸೋಲನ್ನು ಒಪ್ಪಿಕೊಂಡಂತೆ ತೋರುತ್ತಿತ್ತು, ಈ ವೇಳೆಯಲ್ಲಿ ಇವರು ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಆದರೆ ಆರನೇ ಪ್ರಯತ್ನದಲ್ಲಿ 85.01 ಮೀಟರ್ ಜಾವೆಲಿನ್ ಎಸೆದು ಬೆಳ್ಳಿ ಪದಕವನ್ನು ಕನ್ಫರ್ಮ್ ಮಾಡಿಕೊಂಡರು. ಈ ಮೂಲಕ ನೀರಜ್ ಟೂರ್ನಿಯಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಆಸೆ ಕೈ ಬಿಟ್ಟರು. 30 ವರ್ಷದ ವೆಬರ್ ಜೂಲಿಯನ್ ಇದೇ ಮೊದಲ ಬಾರಿಗೆ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಏಳು ಅಥ್ಲೀಟ್‌ಗಳ ಫೈನಲ್ ರೇಸ್‌ನಲ್ಲಿ ಎಲ್ಲರ ಕಣ್ಣುಗಳು ಜೂಲಿಯನ್ ಹಾಗೂ ನೀರಜ್ ಅವರ ಮೇಲೆ ನೆಟ್ಟಿದ್ದವು. ಈ ವೇಳೆ ಇಬ್ಬರೂ ಸ್ಟಾರ್ ಆಟಗಾರರು ತಮ್ಮ ಮೇಲೆ ಅಭಿಮಾನಿಗಳು ಇಟ್ಟ ನಂಬಿಕೆಗೆ ಪೂರಕವಾಗಿ ಜಾವೆಲಿನ್ ಎಸೆದರು.