image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೆರಿಕ ಓಪನ್‌ ಟೆನಿಸ್‌: ಅಲ್ಕರಾಜ್ ಆಟಕ್ಕೆ ಹಿಮ್ಮೆಟ್ಟಿದ ರೀಲಿ ಓಪಲ್ಕ

ಅಮೆರಿಕ ಓಪನ್‌ ಟೆನಿಸ್‌: ಅಲ್ಕರಾಜ್ ಆಟಕ್ಕೆ ಹಿಮ್ಮೆಟ್ಟಿದ ರೀಲಿ ಓಪಲ್ಕ

ಅಮೇರಿಕ : ಸ್ಪೇನ್‌ ತಾರೆ ಕಾರ್ಲೋಸ್‌ ಅಲ್ಕರಾಜ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೋಮವಾರ ಶುಭಾರಂಭ ಮಾಡಿದರು. ಆದರೆ, ಆತಿಥೇಯ ದೇಶದ ಅನುಭವಿ ಆಟಗಾರ್ತಿಯರಾದ ವೀನಸ್‌ ವಿಲಿಯಮ್ಸ್‌ ಮತ್ತು ಮ್ಯಾಡಿಸನ್‌ ಕೀಸ್‌ ಮೊದಲ ಸುತ್ತು ದಾಟಲು ವಿಫಲರಾದರು. ಎರಡನೇ ಶ್ರೇಯಾಂಕದ ಅಲ್ಕರಾಜ್‌ ಅವರು ಆರ್ಥರ್‌ ಆಯಷ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ 6-4, 7-5, 6-4ರಿಂದ ಅತಿಥೇಯ ದೇಶದ ರೀಲಿ ಒಪೆಲ್ಕಾ ಅವರನ್ನು ಹಿಮ್ಮೆಟ್ಟಿಸಿ ಅಭಿಯಾನ ಆರಂಭಿಸಿದರು. ವಿಶ್ವದ 66ನೇ ಕ್ರಮಾಂಕದ ಅಜಾನುಬಾಹು ಆಟಗಾರನನ್ನು ಮಣಿಸಲು ಅಲ್ಕರಾಜ್‌ 2 ಗಂಟೆ 5 ನಿಮಿಷ ತೆಗೆದುಕೊಂಡರು. 27 ವರ್ಷದ ಒಪೆಲ್ಕಾ 6 ಅಡಿ 11 ಇಂಚು ತ್ತರವಿದ್ದಾರೆ.

22 ವರ್ಷದ ಅಲ್ಕರಾಜ್‌ ಈತನಕ ಗೆದ್ದಿರುವ ಐದು ಗ್ರ್ಯಾನ್‌ಸ್ಲಾಮ್‌ ಕಿರೀಟಗಳ ಪೈಕಿ ಮೊದಲ ಪ್ರಶಸ್ತಿಯನ್ನು 2022ರಲ್ಲಿ ಇಲ್ಲೇ ಮುಡಿಗೇರಿಸಿಕೊಂಡಿ ದ್ದರು. ಫ್ರೆಂಚ್‌ ಓಪನ್‌ ಮತ್ತು ವಿಂಬಲ್ಡನ್‌ನಲ್ಲಿ ತಲಾ ಎರಡು ಬಾರಿ ಅವರು ಚಾಂಪಿಯನ್‌ ಆಗಿದ್ದಾರೆ. ಮೂರು ವರ್ಷಗಳ ಬಳಿಕ ಇಲ್ಲಿ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಅಲ್ಕರಾಜ್‌ ಅವರಿಗೆ ಎರಡನೇ ಸುತ್ತಿನಲ್ಲಿ ಇಟಲಿಯ ಮಟ್ಟಿಯಾ ಬೆಲ್ಲುಸಿ ಎದುರಿಸಲಿದ್ದಾರೆ. ಏಳು ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್‌ ಪ್ರಶಸ್ತಿ ಗೆದ್ದಿರುವ ಅಮೆರಿಕದ ವೀನಸ್‌ ಅವರು ಅನಾರೋಗ್ಯದ ಕಾರಣಕ್ಕೆ 16 ತಿಂಗಳುಗಳಿಂದ ಟೆನಿಸ್‌ ಅಂಕಣದಿಂದ ದೂರವಿದ್ದರು. ಹೋದ ತಿಂಗಳು ಡಬ್ಲ್ಯುಟಿಎನಲ್ಲಿ ಆಡಿ ಒಂದು ಪಂದ್ಯ ಜಯಿಸಿದ್ದರು. ಆಸ್ಟ್ರೇಲಿಯಾ ಓಪನ್‌ ಹಾಲಿ ಚಾಂಪಿಯನ್‌, ಆರನೇ ಶ್ರೇಯಾಂಕದ ಕೀಸ್‌ ಅವರಿಗೂ ಆಘಾತಕಾರಿ ಸೋಲು ಎದುರಾಯಿತು. ಶ್ರೇಯಾಂಕರಹಿತ ಆಟಗಾರ್ತಿ ರೆನಾಟಾ ಜರಾಜುವಾ (ಮೆಕ್ಸಿಕೊ) 6-7 (10/12), 7-6 (7/3), 7-5ರಿಂದ ಅಮೆರಿಕದ ತಾರೆಯನ್ನು ಹಿಮ್ಮೆಟ್ಟಿಸಿದರು.

Category
ಕರಾವಳಿ ತರಂಗಿಣಿ