ನವದೆಹಲಿ: ಭಾರತದ ಸ್ಟಾರ್ ಜಾವೆಲಿನ್ ಎಸೆತೆಗಾರ ನೀರಜ್ ಚೋಪ್ರಾ ಡೈಮೆಂಡ್ ಲೀಗ್ನಲ್ಲಿ ಮತ್ತೊಮ್ಮೆ ಟ್ರೋಫಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಶನಿವಾರ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಕೇವಲ 1 ಸೆಂ.ಮೀ ಹಿನ್ನಡೆಯಿಂದ ಎರಡನೇ ಸ್ಥಾನಕ್ಕೆ ತಲುಪಿ ಟ್ರೋಫಿಯನ್ನು ಕೈಚೆಲ್ಲಿದರು. ಈ ಅಂತಿಮ ಹಣಾಹಣಿಯಲ್ಲಿ 87.86 ಮೀಟರ್ ದೂರಕ್ಕೆ ಭರ್ಚಿ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೇ, ಗ್ರೆನೇಡಿಯನ್ ಜಾವೆಲಿನ್ ಎಸೆತಗಾರ ಆಂಡರ್ಸನ್ ಪೀಟರ್ಸ್ 87.87 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಡೈಮಂಡ್ ಲೀಗ್‌ನ ವಿಜೇತರಾಗಿ ಹೊರಹೊಮ್ಮಿದರು. ಈ ಹಿಂದೆ ಕೂಡ ಡೈಮಂಡ್ ಲೀಗ್ನಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದ ನೀರಜ್ ಈ ಬಾರಿಯೂ ಅದೇ ಸ್ಥಾನದಲ್ಲಿ ಮುಂದುವರೆದರು. ಆದರೆ ಈ ಲೀಗ್ನಲ್ಲಿ ಹಿನ್ನಡೆ ಅನುಭವಿಸಲು ಕಾರಣ ಏನೆಂದು ಚೋಪ್ರಾ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅಥ್ಲೀಟ್, ಎಡಗೈ ಗಾಯದ ನಡುವೆಯೆ ಟೂರ್ನಿಯಲ್ಲಿ ಭಾಗವಹಿಸಿರುವುದಾಗಿ ಹೇಳಿಕೊಂಡಿದ್ದಾರೆ.
"ಆದರೂ ಈ ಋತುವಿನಲ್ಲಿ ಬಹಳಷ್ಟು ಪಾಠ ಕಲಿತುಕೊಂಡಿದ್ದೇನೆ. ಸಂಪೂರ್ಣವಾಗಿ ಚೇತರಿಸಿಕೊಂಡು ಟ್ರ್ಯಾಕ್ಗೆ ಹಿಂತಿರುಗುತ್ತೇನೆ. ನಿಮ್ಮ ಈ ಪ್ರೋತ್ಸಾಹಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. 2024 ನನ್ನನ್ನು ಉತ್ತಮ ಕ್ರೀಡಾಪಟು ಮತ್ತು ವ್ಯಕ್ತಿಯನ್ನಾಗಿ ಮಾಡಿದೆ. 2025ರಲ್ಲಿ ಮತ್ತೆ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.