image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ರಾಜ್ಯ ರಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು

ಮಂಗಳೂರಿನಲ್ಲಿ ರಾಜ್ಯ ರಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು

ಮಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ನಗರದ ಉರ್ವ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಸೀನಿಯರ್ ಮತ್ತು ಅಂಡರ್-19 ವಿಭಾಗದ ರಾಜ್ಯ ರಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳ ಎರಡನೇ ದಿನವಾಗಿರುವ ಸೋಮವಾರ ನಡೆದ ಪಂದ್ಯಗಳ ವಿವರ ಇಂತಿವೆ. ಬೆಂಗಳೂರು ನಗರದ ವರುಣ್ ಶ್ರೀರಾಮ್ ಅವರು ಲಕ್ಷ್ಮೀಕಾಂತ್ ಎಂ ಗೌಡ ವಿರುದ್ಧ 15-12, 15-5ರಲ್ಲಿ, ನಿಖಿಲ್ ಪಿಎಂ ಅವರು ಗೌರವ್ ಗಡಿಯಾ ವಿರುದ್ಧ 15-12, 16-14 ರಲ್ಲಿ ಜಯ ಗಳಿಸಿದರು. ಮೈಸೂರಿನ ಗೌರವ್ ಆರ್ ಅವರು ದಕ್ಷಿಣ ಕನ್ನಡದ ಪ್ರಮೋದ್‌ ಕೆ.ಎಂ ವಿರುದ್ಧ ( 15-13 15-9) ಜಯ ಸಾಧಿಸಿದರು. ಬೆಂಗಳೂರು ನಗರದ ಪ್ರದ್ಯುಮ್ ವಸಿಷ್ಠ ಅವರು ಬೆಂಗಳೂರು ಗ್ರಾಮಾಂತರದ ಅದ್ವಾನ್ ಅಹ್ಮದ್ ವಿರುದ್ಧ( 15-13 9-15 15-13), ಆಟಗಾರರಾದ ಪ್ರಣವ್ ಬಿ ಅವರು ಮುಹಮ್ಮದ್ ಸುಹಾನ್ ವಿರುದ್ಧ ( 15-6 15-4), ಅರ್ಜುನ್ ಆ‌ರ್ ಕೌಂಡಿನ್ಯ ಅವರು ಆಕರ್ಷ್ ಡಿಎಸ್ ವಿರುದ್ಧ (14-16 15-6 15-9 ) ಜಯ ಸಾಧಿಸಿದರು.

ದಕ್ಷಿಣ ಕನ್ನಡದ ಗ್ಲಾನಿಶ್ ಪಿಂಟೊ ಅವರು ಬೆಂಗಳೂರು ನಗರದ ಸಾತ್ವಿಕ್‌ ಭಟ್ ವಿರುದ್ಧ ( 15-5 15-2) ಜಯ ಗಳಿಸಿದರು. ಮೈಸೂರಿನ ವಿಶಾಲ್ ಪಿವಿ ಅವರು ಬೆಂಗಳೂರು ಗ್ರಾಮಾಂತರದ ರಿಶನ್ ಜೆರಿನ್ ಕೆ ವಿರುದ್ಧ (15-12 13-15 16-14), ಬೆಂಗಳೂರು ನಗರದ ಥಿಶ್ ವಿಟ್ಟಲ್ ಅವರು ಶಶಾಂಕ್ ಎನ್ ಅಮೀನ್ ವಿರುದ್ಧ( 15-9 17-15 ), ಅತೀಕ್ಸ್ ಜಥಾ‌ರ್ ಅವರು ಮೈಸೂರಿನ ಆದಿತ್ಯ ಬಿಜೆ, ವಿರುದ್ಧ ( 15-5 15-7) ಜಯ ಗಳಿಸಿದರು. ಬೆಂಗಳೂರು ನಗರದ ತಿಲಕ್ ಬಿ ಶೆಟ್ಟಿ ಅವರು ವಿಸ್ಮಯ್ ರಾಜ್ ಎಸ್ ವಿರುದ್ಧ ( 15-10 15-4), ರೋಹನ್ ಶ್ರೀಸಾಯಿ ಕರವಾಡಿ ಅವರು ಚಿದಾನಂದ ಡಿಎಂ ವಿರುದ್ಧ (15-9 15-9), ನರೇನ್ ಎ.ಜಿ ಅವರು ಕಣ್ವ ಗೌಡ ವಿರುದ್ಧ (15-5 15-8 ), ಶ್ಯಾಮ್ ಬಿಂಡಿಗನವಿಲೆ ಅವರು ತನ್ಮಯ್ ಚಿವುಕುಲ ವಿರುದ್ಧ ( 15-11 15-7), ಶಮಂತ್ ರಾವ್ ಕಿದಿಯೋರ್, ಅವರು ಭಾವೇಶ್ ಕುಂಚೆ ವಿರುದ್ಧ( 9-15 15-13 15-13 ) ಗೆಲುವಿನ ನಗೆ ಬೀರಿದರು. 

ಬೆಳಗಾವಿಯ ಮಾಹಿಮ್ ಗಾಡವಿ ಅವರು ಬೆಂಗಳೂರು ಗ್ರಾಮಾಂತರದ ಶೋಬಿತ್ ಆರ್ ಗೌಡ ವಿರುದ್ಧ (15-8 ,15-13) ಜಯ ಗಳಿಸಿದರು. ಮೈಸೂರಿನ ಭುವನ್ ಎನ್ ಅವರು ಬೆಂಗಳೂರು ನಗರದ ಕರಣ್ ದಿನೇಶ್ ವಿರುದ್ಧ (15-9, 15-6), ಬೆಂಗಳೂರು ನಗರದ ವರುಣ್ ಜಿಪಿ ಅವರು ಅಭಿನವ್ ಬೆಟವಾರ ವಿರುದ್ಧ ( 15-8, 15-12), ತೋಶನ್ ನಾಯಕ್ ಅವರು ಹಿತೇನ್ ಕರ್ಕೇರ ವಿರುದ್ಧ ( 15-13, 15-13), ಯುವರಾಜ್‌ ಎಸ್ ಅವರು ಕರಂಶ್‌ ನಾಯ್ಡು ವಿರುದ್ಧ (15-13, 15-10) ಬೆಂಗಳೂರು ನಗರದ ರಾಘವೇಂದ್ರ ಪಿಎಂ ಅವರು ಮೈಸೂರಿನ ಮನೋಜ್ ಎವಿ ವಿರುದ್ಧ (15-6, 15-4), ಸ್ವಯಂ ಬೆಳ್ಳೂಡಿ ಅವರು ಶಶಾಂಕ್ ಎಸ್‌ ವಿರುದ್ಧ ( 15-6 , 15-6), ಕೌಶಿಕ್ ರೆಡ್ಡಿ ವೀರಂ ರೆಡ್ಡಿ ಅವರು ಆದಿತ್ಯ ಪ್ರದೀಪ್( 15-9, 15-3), ಸುಬುದ್ ಸೇಥಿ ಅವರು ಜಯ ಗಳಿಸಿದರು. ಬೆಂಗಳೂರು ಗ್ರಾಮಾಂತರದ ಪವನಗೌಡ ಅವರು ಬೆಂಗಳೂರು ನಗರದ ಆರನ್ ಸುರೇಶ್ ವಿರುದ್ಧ ವಾಕ್ ಓವರ್ ಪಡೆದರು. ಬೆಂಗಳೂರು ನಗರದ ಮೌರ್ಯ ಕೆವಿ ಅವರು ಕಾರ್ತಿಕ್ ಕುಮಾರ್ ವಿರುದ್ಧ 15-4, 10-15, 15-13 ರಲ್ಲಿ, ಕೊಡಗಿನ ಝದ್ ಅವರು ಬೆಂಗಳೂರು ನಗರದ ಸೃಜನ್ ಸಿ ಶೆಟ್ಟಿ ವಿರುದ್ಧ 15-7,15-7, ಬೆಂಗಳೂರು ನಗರದ ಪ್ರತೀಶ್‌ ಪದ್ಮರಾಜು ಅವರು ಥಮನ್ ಶ್ರೀಧರ್ ವಿರುದ್ಧ 15-13, 13-15, 15-6 ರಲ್ಲಿ ಬೆಂಗಳೂರು ಗ್ರಾಮಾಂತರದ ವಂಶಿಲ್ ಮೆಹ್ರಾ ಅವರು ಮೈಸೂರಿನ ಮನೀಶ್ ಗೌಡ ವಿರುದ್ಧ 8-15, 15-13, 17-15 ಅಂತರದಲ್ಲಿ ಜಯಗಳಿಸಿದರು. 

ಮೈಸೂರಿನ ಗೌರವ್ ಆರ್ ಅವರು ಬೆಂಗಳೂರು ನಗರದ ಪ್ರದ್ಯುಮ್ ವಸಿಷ್ಟ ವಿರುದ್ಧ 15-12, 15-13 ಅಂತರದಲ್ಲಿ, ಬೆಂಗಳೂರು ನಗರದ ಪ್ರಣವ್ ಬಿ ಅರ್ಜುನ್ ಅವರು ಆರ್ ಕೌಂಡಿನ್ಯ ವಿರುದ್ಧ 15-10, 15-11ರಲ್ಲಿ ಜಯ ಗಳಿಸಿದರು. ಮೈಸೂರಿನ ವಿಶಾಲ್ ಪಿವಿ ಅವರು ದಕ್ಷಿಣ ಕನ್ನಡದ ಜ್ಞಾನೇಶ್ ಪಿಂಟೊ ವಿರುದ್ಧ 2 9-15, 15-12, 1-0 0 ಗಳಿಸಿದರು. ಬೆಂಗಳೂರು ನಗರದ ಅತೀಕ್ ಜಥಾರ್ ಅವರು ತ್ರಿಶ್ ವಿಟ್ಟಲ್ ವಿರುದ್ಧ 15-7,19-17 ಅಂತರದಲ್ಲಿ, ಬೆಂಗಳೂರು ನಗರದ ತಿಲಕ್ ಬಿ ಶೆಟ್ಟಿ ಅವರು ರೋಹನ್ ಶ್ರೀಸಾಯಿ ಕರವಾಡಿ ವಿರುದ್ಧ 15-11, 15-12 ಅಂತರದಲ್ಲಿ ಜಯಿಸಿದರು. ಬೆಂಗಳೂರು ನಗರದ ಶ್ಯಾಮ್ ಬಿಂಡಿಗನವಿಲೆ ಅವರು ನರೇನ್‌ ಎ.ಜಿ ವಿರುದ್ಧ 15-8, 15-6 ರಲ್ಲಿ, ಶಮಂತ್ ರಾವ್ ಕಿದಿಯೋರ್ ಅವರು ಸ್ವರೂಪ್ ಪಾಲಕ್ಷಯ್ಯ ವಿರುದ್ಧ 11-15 15-9 15-7 ಜಯಿಸಿದರು.

ಮೈಸೂರಿನ ಭುವನ್ ಎನ್ ಅವರು ಬೆಳಗಾವಿಯ ಮಾಹಿಮ್ ಗಾಡವಿ ವಿರುದ್ಧ 15-8, 15-11 ಅಂತರದಲ್ಲಿ ಬೆಂಗಳೂರು ನಗರದ ವರುಣ್ ಜಿಪಿ ಅವರು ತೋಶನ್ ನಾಯಕ್ ವಿರುದ್ಧ 8-15, 15-11, 15-12 ಅಂತರದಲ್ಲಿ, ರಾಘವೇಂದ್ರ ಪಿಎಂ ಅವರು ಯುವರಾಜ್ ಎಸ್ ವಿರುದ್ಧ 15-9, 15-8 ವಿರುದ್ಧ ಕೌಶಿಕ್ ರೆಡ್ಡಿ ವೀರಂ ರೆಡ್ಡಿ ಅವರು ಸ್ವಯಂ ಬೆಳ್ಳೂಡಿ ವಿರುದ್ಧ 15-6, 15-9 ವಿರುದ್ಧ ಗೆಲುವು ದಾಖಲಿಸಿದರು. ದಕ್ಷಿಣ ಕನ್ನಡದ ಸಹರ್ಷ್ ಎಸ್ ಪ್ರಭು ಅವರು ಬೆಂಗಳೂರು ನಗರದ ಸುಬುದ್ ಸೇಥಿ ವಿರುದ್ಧ 14-16, 15-6, 15-10 ಅಂತರದಲ್ಲಿ ಬೆಂಗಳೂರು ನಗರದ ಹಾರ್ಧಿಕ್ ಮೊಹಂತಿ ಅವರು ಬೆಂಗಳೂರು ಗ್ರಾಮಾಂತರದ ಪವನ್ ಗೌಡ ವಿರುದ್ಧ 15-9, 15-4 ರಲ್ಲಿ ಕೊಡಗಿನ ಝದ್ ಅವರು ಬೆಂಗಳೂರು ನಗರದ ಮೌರ್ಯ ಕೆವಿ, ವಿರುದ್ಧ 15-13, 15-11ರಲ್ಲಿ ಜಯಗಳಿಸಿದರು.

Category
ಕರಾವಳಿ ತರಂಗಿಣಿ