image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫಿಡೆ ಮಹಿಳಾ ವಿಶ್ವ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಡ್ರಾ ಮಾಡಿದ ಕೊನೇರು ಹಂಪಿ

ಫಿಡೆ ಮಹಿಳಾ ವಿಶ್ವ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಡ್ರಾ ಮಾಡಿದ ಕೊನೇರು ಹಂಪಿ

ಜಾರ್ಜಿಯಾ : ಅನುಭವಿ ಗ್ರಾಂಡ್‌ಮಾಸ್ಟ‌ರ್ ಕೋನೇರು ಹಂಪಿ ಅವರು ಫಿಡೆ ಮಹಿಳಾ ವಿಶ್ವ ಕಪ್ ಸೆಮಿಫೈನಲ್ ಪಂದ್ಯದ ಮೊದಲ ಕ್ಲಾಸಿಕಲ್ ಆಟದಲ್ಲಿ ಚೀನಾದ ಟಿಂಗ್ಲಿ ಲೀ ಎದುರು ಮಂಗಳವಾರ ಹೆಚ್ಚು ಪ್ರಯಾಸ ವಿಲ್ಲದೇ ಡ್ರಾ ಮಾಡಿಕೊಂಡರು. ಇನ್ನೊಂದು ಸೆಮಿಫೈನಲ್‌ನಲ್ಲಿ ದಿವ್ಯಾ ದೇಶಮುಖ್ ಅವರ ಪ್ರಬಲ ರಕ್ಷಣೆಯ ಆಟದೆದುರು ಮಾಜಿ ವಿಶ್ವ ಚಾಂಪಿಯನ್ ಝಂಗ್ಲಿ ತಾನ್ ಅವರಿಗೆ ಹೆಚ್ಚೇನೂ ಸಾಧಿಸಲಾಗಲಿಲ್ಲ. ಸೆಮಿಫೈನಲ್ ಆಡುತ್ತಿರುವ ನಾಲ್ವರಲ್ಲಿ ಭಾರತದ ಮತ್ತು ಚೀನಾದ ತಲಾ ಇಬ್ಬರು ಆಟಗಾರ್ತಿಯರಿದ್ದು, ಮಹಿಳಾ ಚೆಸ್‌ನಲ್ಲಿ ಏಷ್ಯಾದ ಪ್ರಾಬಲ್ಯ ಸಾಬೀತುಪಡಿಸಿದೆ. ಈ ವಿಶ್ವಕಪ್ ಸುಮಾರು ₹6 ಕೋಟಿ ಬಹುಮಾನ ಹೊಂದಿದೆ. 

ಇದು ಭಾರತದ ಆಟಗಾರ್ತಿಯರಿಗೆ ಉತ್ತಮ ಆರಂಭಎನಿಸಿದೆ. ಇಬ್ಬರೂ ಕಪ್ಪು ಕಾಯಿಗಳಲ್ಲಿ ಆಡಿದ್ದರು. ಬುಧವಾರ ಮರು ಪಂದ್ಯದಲ್ಲಿ ಇಬ್ಬರೂ ಬಿಳಿ ಕಾಯಿಗಳಲ್ಲಿ ಆಡಲಿದ್ದಾರೆ. ಇದು ಡ್ರಾ ಆದ ಪಕ್ಷದಲ್ಲಿ ವಿಜೇತರನ್ನು ನಿರ್ಧರಿಸಲು ಗುರುವಾರ ಅಲ್ಪಾವಧಿಯ ಟೈಬ್ರೇಕ್‌ ಪಂದ್ಯಗಳನ್ನು ಆಡಲಾಗುವುದು. ಮೊದಲ ಮೂರು ಸ್ಥಾನ ಪಡೆದವರು ಮುಂದಿನ ವರ್ಷದ ಮಹಿಳಾ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆಯುವರು. ಕಡೇಪಕ್ಷ ಭಾರತದ ಒಬ್ಬರು ಅರ್ಹತೆ ಪಡೆಯುವುದು ಖಚಿತವಾಗಿದೆ. ಅನುಭವಿ ಝಂಗ್ವಿ ಅವರಿಗೆ ದಿವ್ಯಾ ಅವರ ಓಪನಿಂಗ್‌ನಲ್ಲಿ ಹುಳುಕುಗಳು ಕಾಣಲಿಲ್ಲ. ಇಬ್ಬರೂ ಎಕ್ಸ್‌ಚೇಂಜ್‌ಗಳಿಗೆ ಹೋದರು. 30 ನಡೆಗಳ ನಂತರ ಆಟ ಡ್ರಾ ಆಯಿತು. ಹಂಪಿ ಅವರು ವಿಭಿನ್ನ ಓಪನಿಂಗ್ ಮೂಲಕ ಚೀನಾ ಟಿಂಗ್ಲಿ ಅವರನ್ನು ಅಚ್ಚರಿಗೆ ಕೆಡವಿದರು. ಮಧ್ಯಮ ಹಂತದ ನಂತರ ಇಬ್ಬರೂ ಕ್ಲೀನ್‌ಗಳನ್ನು ಕಳೆದುಕೊಂಡರು. ಕೊನೆಗೆ ಭಿನ್ನ ಬಣ್ಣದ ಬಿಷಪ್‌ಗಳು ಉಳಿದವು.

Category
ಕರಾವಳಿ ತರಂಗಿಣಿ