image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಾರಾಜ ಟ್ರೋಫಿಯ ನಾಲ್ಕನೇ ಆವೃತ್ತಿಗಾಗಿ ಆಟಗಾರರ ಹರಾಜು

ಮಹಾರಾಜ ಟ್ರೋಫಿಯ ನಾಲ್ಕನೇ ಆವೃತ್ತಿಗಾಗಿ ಆಟಗಾರರ ಹರಾಜು

ಬೆಂಗಳೂರು: ಮಹಾರಾಜ ಟ್ರೋಫಿಯ ನಾಲ್ಕನೇ ಆವೃತ್ತಿಗಾಗಿ ನಡೆದ ಆಟಗಾರರ ಹರಾಜಿನಲ್ಲಿ ದೇವದತ್ ಪಡಿಕ್ಕಲ್ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಬರೋಬ್ಬರಿ 13.20 ಲಕ್ಷ ರೂಗೆ ಹುಬ್ಳಿ ಟೈಗರ್ಸ್ ತಂಡ ಪಡಿಕ್ಕಲ್ ಅವರನ್ನ ಖರೀದಿಸಿತು. ಇನ್ನು ಹುಬ್ಳಿ ಟೈಗರ್ಸ್ ತಂಡವು ಅಭಿನವ್ ಮನೋಹರ್ ಅವರಿಗೆ 12.20 ಲಕ್ಷ ರೂ ಮತ್ತು ಮೈಸೂರು ವಾರಿಯರ್ಸ್ ತಂಡವು ಮನೀಶ್ ಪಾಂಡೆ ಅವರಿಗೆ 13.20 ಲಕ್ಷ ರೂ ನೀಡಿ ಖರೀದಿಸಿದೆ. 10.80 ಲಕ್ಷ ರೂಗೆ ವೇಗಿ ವಿದ್ವತ್ ಕಾವೇರಪ್ಪ ಅವರು ಶಿವಮೊಗ್ಗ ಲಯನ್ಸ್ ತಂಡ ಸೇರಿದರೆ, ಬೆಂಗಳೂರು ಬ್ಲಾಸ್ಟರ್ಸ್ ತಂಡ ವಿದ್ಯಾಧರ್ ಪಾಟೀಲ್ ಅವರನ್ನು 8.30 ಲಕ್ಷಕ್ಕೆ ಖರೀದಿಸಿತು. ಮತ್ತೊಂದೆಡೆ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅವರು ಫ್ರಾಂಚೈಸಿಗಳನ್ನ ಆಕರ್ಷಿಸಲು ವಿಫಲರಾಗುವ ಮೂಲಕ ಅನ್‌ಸೋಲ್ಡ್ ಆದರು.

ಆಲ್‌ರೌಂಡರ್‌ಗಳಿಗೆ ಹೆಚ್ಚು ಆಸಕ್ತಿ ತೋರಿದ ಮೈಸೂರು ವಾರಿಯರ್ಸ್ ತಂಡ ಕೆ. ಗೌತಮ್ ಅವರನ್ನು 4.40 ಲಕ್ಷಕ್ಕೆ ಸೇರಿಸಿಕೊಂಡರೆ, ಯಶೋವರ್ಧನ್ ಪರಂತಾಪ್ ಅವರನ್ನು 2 ಲಕ್ಷಕ್ಕೆ ಖರೀದಿಸಿತು. ಕಳೆದ ಋತುವಿನ ಜಂಟಿ ಗರಿಷ್ಠ ವಿಕೆಟ್ ಟೇಕರ್‌ಗಳಾದ ಕುಮಾರ್ ಎಲ್.ಆರ್ (1.50 ಲಕ್ಷ), ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ (4.70 ಲಕ್ಷ) , ವೇಗಿ ವೆಂಕಟೇಶ್ ಎಂ (2.00 ಲಕ್ಷ) ಮತ್ತು ಗೌತಮ್ ಮಿಶ್ರಾ (2.25 ಲಕ್ಷ) ಅವರನ್ನ ಸಹ ಖರೀದಿಸುವ ಮೂಲಕ ವಾರಿಯರ್ಸ್ ತಮ್ಮ ಬೌಲಿಂಗ್ ವಿಭಾಗವನ್ನ ಮತ್ತಷ್ಟು ಬಲಪಡಿಸಿಕೊಂಡಿತು. ಬೆಂಗಳೂರು ಬ್ಲಾಸ್ಟರ್ಸ್ ತಂಡ ಹರಾಜಿನ 'ಎ' ವಿಭಾಗದಲ್ಲಿ ಯಾವುದೇ ಆಟಗಾರರನ್ನು ಖರೀದಿಸಲಿಲ್ಲ. ಕಳೆದ ಬಾರಿ ಹರಾಜಿನಲ್ಲಿ ಅತಿ ಹೆಚ್ಚು ಬೆಲೆ ಪಡೆದಿದ್ದ ಚೇತನ್ ಎಲ್‌.ಆರ್ ಅವರನ್ನ ಈ ಬಾರಿ 5.10 ಲಕ್ಷಕ್ಕೆ ಖರೀದಿಸುವ ಮೂಲಕ ಮೂಲಕ ಜಾಣ್ಮೆ ಪ್ರದರ್ಶಿಸಿತು. ಬೌಲರ್ ವಿದ್ಯಾಧರ್ ಪಾಟೀಲ್ (8.30 ಲಕ್ಷ), ರೋಹನ್ ಪಾಟೀಲ್ (2.70 ಲಕ್ಷ) ಖರೀದಿಸಿತು. 16 ವರ್ಷದ ಮಾಧವ್ ಪ್ರಕಾಶ್ ಬಜಾಜ್ ಅವರನ್ನು 3.15 ಲಕ್ಷಕ್ಕೆ ಬ್ಲಾಸ್ಟರ್ಸ್ ತಂಡ ತನ್ನದಾಗಿಸಿಕೊಂಡಿತು.

ದೇವದತ್ ಪಡಿಕ್ಕಲ್, ಅಭಿನವ್ ಮನೋಹರ್ ಅವರನ್ನು ಸೇರಿಸಿಕೊಳ್ಳುವ ಮೂಲಕ ಹುಬ್ಳಿ ಟೈಗರ್ಸ್ ದೊಡ್ಡ ನಡೆ ಪ್ರದರ್ಶಿಸಿತು. ಅವರ ಬಳಿಕ ಅಗ್ರ ಕ್ರಮಾಂಕ‌ ಬಲಪಡಿಸಲು ಅನುಭವಿ ಮೊಹಮ್ಮದ್ ತಾಹಾ ಅವರನ್ನು 4.60 ಲಕ್ಷಕ್ಕೆ ಹಾಗೂ ಯುವ ವೇಗಿ ಸಮರ್ಥ್ ನಾಗರಾಜ್ ಅವರನ್ನ 3.20 ಲಕ್ಷಕ್ಕೆ ಟೈಗರ್ಸ್ ಖರೀದಿಸಿತು. ಗುಲ್ಬರ್ಗ ಮಿಸ್ಟಿಕ್ಸ್ ತನ್ನ ಮಧ್ಯಮ ಕ್ರಮಾಂಕವನ್ನ ಬಲಪಡಿಸಲು ವಿಕೆಟ್ ಕೀಪರ್-ಬ್ಯಾಟರ್ ಕೆ.ವಿ. ಸಿದ್ಧಾರ್ಥ್ ಅವರನ್ನ 6.10 ಲಕ್ಷಕ್ಕೆ ಸೇರಿಸಿಕೊಂಡಿದೆ. ಮತ್ತು ಬಲಗೈ ವೇಗದ ಬೌಲರ್ ಮೋನಿಶ್ ರೆಡ್ಡಿ (4.65 ಲಕ್ಷ), ಕಳೆದ ಋತುವಿನ ಟಾಪ್ ವಿಕೆಟ್ ಪಡೆದ ಲವಿಶ್ ಕೌಶಲ್ (7.75 ಲಕ್ಷ) ಮತ್ತು ನಿಕಿನ್ ಜೋಸ್ (1 ಲಕ್ಷ)ರನ್ನು ಮಿಸ್ಟಿಕ್ಸ್ ತಂಡಕ್ಕೆ ಸೇರಿಸಿಕೊಂಡಿದೆ. ಯುವ ಆಲ್‌ರೌಂಡರ್ ಅನೀಶ್ವರ್ ಗೌತಮ್ (8.20 ಲಕ್ಷ) ಅವರನ್ನು ಶಿವಮೊಗ್ಗ ಲಯನ್ಸ್ ಖರೀದಿಸಿತು. ಅನುಭವಿ ಅನಿರುದ್ಧ ಜೋಶಿ (3.60 ಲಕ್ಷ) ಮತ್ತು ಲೆಗ್-ಸ್ಪಿನ್ನರ್ ದೀಪಕ್ ದೇವಾಡಿಗ (1.20 ಲಕ್ಷ) ಲಯನ್ಸ್ ತಂಡ ಸೇರಿದರು.

ಮಂಗಳೂರು ಡ್ರಾಗನ್ಸ್ ತಂಡ ಶ್ರೇಯಸ್ ಗೋಪಾಲ್ ಅವರನ್ನು (8.60 ಲಕ್ಷ) ಖರೀದಿಸಿತು. ಜೊತೆಗೆ ಎಂ.ಕ್ರಾಂತಿ ಕುಮಾರ್ (5.60 ಲಕ್ಷ), ಅನುಭವಿ ವೇಗಿ ರೋನಿತ್ ಮೋರೆ (3.40 ಲಕ್ಷ) ಮತ್ತು ಅಭಿಷೇಕ್ ಪ್ರಭಾಕರ್ (3.07 ಲಕ್ಷ), ಬ್ಯಾಟಿಂಗ್ ವಿಭಾಗದಲ್ಲಿ ಶರತ್ ಬಿಆರ್ (2.20 ಲಕ್ಷ) ಮತ್ತು ಶಿವರಾಜ್ ಎಸ್ (6.55 ಲಕ್ಷ) ಡ್ರಾಗನ್ ತಂಡಕ್ಕೆ ಸೇರಿದರು.

Category
ಕರಾವಳಿ ತರಂಗಿಣಿ